Neer Dose Karnataka
Take a fresh look at your lifestyle.

ಮೊದಲ ಬಾರಿಗೆ ಜೇಮ್ಸ್ ಚಿತ್ರವನ್ನು ವೀಕ್ಷಣೆ ಮಾಡಿದ ಮೇಘನಾರಾಜ್ ರವರು ನೀಡಿದ ಪ್ರತಿಕ್ರಿಯೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮೆಲ್ಲರ ನೆಚ್ಚಿನ ಕರುನಾಡು ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಚಿತ್ರ ನಾಲ್ಕು ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜಿಮ್ ಚಿತ್ರವನ್ನು ನೋಡಿ ಕೇವಲ ಅವರ ಅಭಿಮಾನಿಗಳು ಮಾತ್ರವಲ್ಲದೆ ಸಾಮಾನ್ಯ ಸಿನಿಮಾ ಪ್ರೇಕ್ಷಕರು ಕೂಡ ಭಾವುಕರಾಗಿದ್ದಾರೆ. ಇನ್ನು ಚಿತ್ರವನ್ನು ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ನೋಡಿ ಭಾವುಕರಾಗಿದ್ದಾರೆ. ಇನ್ನು ಜೇಮ್ಸ್ ಚಿತ್ರವನ್ನು ಮೊದಲ ದಿನವೇ ನಟಿ ಮೇಘನರಾಜ್ ಕೂಡ ನೋಡಿದ್ದಾರೆ.

ಮೇಘನಾ ರಾಜ್ ಹಾಗೂ ಪುನೀತ್ ರಾಜಕುಮಾರ್ ಅವರ ಕುಟುಂಬ ಮೊದಲಿನಿಂದಲೂ ಕೂಡ ಪರಸ್ಪರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಲವಾರು ಸಿನಿಮಾಗಳಲ್ಲಿ ಮೇಘನಾ ರಾಜ್ ಅವರ ತಂದೆ ತಾಯಿ ಆಗಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ರವರು ನಟಿಸಿದ್ದಾರೆ. ಹೀಗಾಗಿ ಉತ್ತಮ ಸ್ನೇಹ ಬಾಂಧವ್ಯವನ್ನು ಹೊಂದಿದ್ದಾರೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ಗೆ ನಟಿ ಮೇಘನಾ ರಾಜ್ ರವರು ತಮ್ಮ ಕುಟುಂಬದೊಡನೆ ಹೋಗಿದ್ದಾರೆ. ಅಪ್ಪು ರವರ ಕೊನೆಯ ಸಿನಿಮಾವನ್ನು ನೋಡಿ ಮೇಘನರಾಜ್ ರವರು ಭಾವುಕರಾಗಿ ಹೇಳಿದ್ದೇನು ಗೊತ್ತಾ ತಿಳಿಯೋಣ ಬನ್ನಿ.

ಅಪ್ಪು ರವರ ಜೊತೆಗೆ ನಟಿಸಬೇಕೆಂದು ನಾನು ಸಾಕಷ್ಟು ಇಷ್ಟಪಟ್ಟಿದ್ದೆ ನಾನು ಅವರ ಅಪ್ಪಟ ಅಭಿಮಾನಿ ಆಗಿದೆ ಆದರೆ ಕೊನೆಗೂ ಕೂಡ ಅದು ನೆರವೇರಲಿಲ್ಲ. ಚಿರು ನಮ್ಮನ್ನೆಲ್ಲಾ ಅಗಲಿ ಹೋದಾಗ ನಮ್ಮ ಕುಟುಂಬಕ್ಕೆ ಸಾಂತ್ವಾನ ಹೇಳಿ ಸಾಕಷ್ಟು ಸಹಾಯ ಮಾಡಿದ್ದರು ಎಂಬುದಾಗಿ ಕೂಡ ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತಾರೆ. ನಾನು ಬಹಳಷ್ಟು ಬಾರಿ ಅಪ್ಪು ಅವರ ಮನೆಗೆ ಹೋಗಿ ಬಂದಿದ್ದೇನೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನನಗೆ ಸಾಕಷ್ಟು ಆಪ್ತರು. ಜೇಮ್ಸ್ ಚಿತ್ರದಲ್ಲಿ ಅಪ್ಪು ಅವರನ್ನು ನೋಡಿ ಅವರು ನಮ್ಮ ಜೊತೆಗೆ ಇಲ್ಲವಲ್ಲ ಎಂಬುದಾಗಿ ಬಹಳಷ್ಟು ದುಃಖವಾಗುತ್ತಿದೆ ಎಂಬುದಾಗಿ ಹೇಳಿದ್ದಾರೆ.

ಹೌದು ಗೆಳೆಯರೇ ಚಿರಂಜೀವಿ ಸರ್ಜಾ ರವರನ್ನು ಕಳೆದುಕೊಂಡಿದ್ದಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ದಂಪತಿಗಳು ಮೇಘನಾರಾಜ್ ರವರ ಮನೆಗೆ ಹೋಗಿ ಅವರನ್ನು ಸಂತೈಸಿ ಬಂದಿರುವ ವಿಚಾರವನ್ನು ಕೂಡ ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಕನ್ನಡ ಚಿತ್ರರಂಗದಲ್ಲಿ ಪ್ರತಿಯೊಬ್ಬರ ಕಷ್ಟ-ಸುಖಕ್ಕೆ ಆಗಿ ಬರುತ್ತಿದ್ದ ಏಕೈಕ ನಟ ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ತಪ್ಪಾಗಲಾರದು.

ನಟಿ ಮೇಘನಾ ರಾಜ್ ಅವರ ಜೊತೆಗೆ ಅವರ ತಂದೆ-ತಾಯಿ ಆಗಿರುವ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯಿ ಕೂಡ ಚಿತ್ರವನ್ನು ವೀಕ್ಷಿಸಿ ಅಪ್ಪು ಅವರನ್ನು ಕೊಂಡಾಡಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು ಕೂಡ ಮೊದಲ ದಿನವೇ ಅವರವರ ಕೊನೆಯ ಸಿನಿಮಾವನ್ನು ನೋಡಿಕೊಂಡು ಬಂದಿದ್ದಾರೆ. ಜೇಮ್ಸ್ ಚಿತ್ರ ಬಿಡುಗಡೆಯಾಗಿ ಈಗಾಗಲೇ ದಾಖಲೆ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿರುವುದು ನಿಮಗೆ ಗೊತ್ತಿರುವ ವಿಚಾರವಾಗಿದೆ.

ಜೇಮ್ಸ್ ಚಿತ್ರವನ್ನು ವೀಕ್ಷಿಸಿರುವ ನಿಮಗೆ ಚಿತ್ರದ ಕುರಿತಂತೆ ಯಾವ ಎಲ್ಲಾ ಅಂಶಗಳು ಇಷ್ಟವಾಯಿತು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಒಂದು ವೇಳೆ ಇನ್ನು ಕೂಡ ನೀವು ಚಿತ್ರವನ್ನು ವೀಕ್ಷಿಸಿರದಿದ್ದರೆ ತಪ್ಪದೇ ಚಿತ್ರವನ್ನು ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ವೀಕ್ಷಿಸುವುದನ್ನು ಮಾತ್ರ ಮರೆಯಬೇಡಿ.

Comments are closed.