ಹೂ ಅಂತವ ಮಾವ ಹಾಡನ್ನು ಹಾಡಿರುವ ಖ್ಯಾತ ಸಿಂಗರ್ ಯಾರು ಗೊತ್ತೇ?? ಗಾಯಕಿ ಮಂಗ್ಲಿ ರವರ ತಂಗಿ ಅವರೇ, ಮೊದಲ ಬಾರಿಗೆ ತೋರಿಸ್ತೇವೆ, ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮೊದಲಿನ ಕಾಲದಲ್ಲಿ ಕೇವಲ ಒಂದು ಸಿನಿಮಾ ಬಿಡುಗಡೆ ಆಯಿತು ಎಂದರೆ ಅಲ್ಲಿ ಸ್ಟಾರ್ ಆಗೋದು ನಾಯಕನಟ ಅಥವಾ ನಟಿ ಆಗಿರುತ್ತಿತ್ತು. ಆದರೆ ಇಂದಿನ ಕಾಲದ ಪ್ರೇಕ್ಷಕ ಮಹಾಪ್ರಭುಗಳು ಸಿನಿಮಾದಲ್ಲಿ ಯಾರೇ ಇಷ್ಟವಾದರೂ ಕೂಡ ಅವರಿಗೆ ಸಪೋರ್ಟ್ ಮಾಡಿ ರಾತ್ರೋರಾತ್ರಿ ಸ್ಟಾರ್ ಮಾಡಿಬಿಡುತ್ತಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಳೆದ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೋಟಿ ಕೋಟಿ ಕಲೆಕ್ಷನ್. ರಾಬರ್ಟ್ ಚಿತ್ರ ತೆಲುಗುನಲ್ಲಿ ಕೂಡ ಬಿಡುಗಡೆಯಾಗಿತ್ತು. ತೆಲುಗಿನಲ್ಲಿ ಹೇಳಿಕೊಳ್ಳುವಷ್ಟು ಕಲೆಕ್ಷನ್ ಏನೂ ಮಾಡಲಿಲ್ಲ ಆದರೆ ಕಣ್ಣೇ ಅದರಿಂದಿ ಎನ್ನುವ ಹಾಡು ಮಾತ್ರ ಸ್ವಂತ ತೆಲುಗು ಚಿತ್ರವೇ ಎನ್ನುವಷ್ಟರಮಟ್ಟಿಗೆ ಜನರಲ್ಲಿ ವೈರಲ್ ಆಗಿತ್ತು. ಆ ಹಾಡಿನ ಗಾಯಕಿ ಮಂಗ್ಲಿ ಅವರಿಗೆ ಕೂಡ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ರಾತ್ರೋರಾತ್ರಿ ಸ್ಟಾರ್ ಗಾಯಕಿಯಾಗಿ ಕೂಡ ಈಗಾಗಲೇ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈಗಾಗಲೇ ಕನ್ನಡದ ಹಲವಾರು ಸಿನಿಮಾಗಳಲ್ಲಿ ಹಾಡನ್ನು ಕೂಡ ಹಾಡಿದ್ದಾರೆ. ಮಂಗ್ಲಿ ಅವರ ನಿಜವಾದ ಹೆಸರು ಸತ್ಯವತಿ ರಾತೋಡ್. ಆಂಧ್ರಪ್ರದೇಶದ ಲಂಬಾಣಿ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ.
ಇನ್ನು ಸದ್ಯದಲ್ಲಿಯೇ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಬಿಗ್ ಬಜೆಟ್ ಸಿನಿಮಾ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ನಟನೆಗೆ ಕೂಡ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿದೆ. ಇನ್ನು ಇದರ ನಡುವೆಯೇ ಮಂಗ್ಲಿ ಅವರ ತಂಗಿ ಕೂಡ ದೊಡ್ಡಮಟ್ಟದ ಸಿಂಗರ್ ಎನ್ನುವುದಾಗಿ ತಿಳಿದುಬಂದಿದೆ. ಹೌದು ಗೆಳೆಯರೇ ಅದು ಇನ್ಯಾರೂ ಅಲ್ಲ ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಪುಷ್ಪ ಚಿತ್ರದ ಸೂಪರ್ ಹಿಟ್ ಸಾಂಗ್ ಆಗಿರುವ ಊ ಅಂಟಾವ ಮಾವ ಊಹೂ ಅಂಟಾವ ಸಾಂಗ್ ಹಾಡಿರುವ ಗಾಯಕಿಯಾಗಿರುವ ಇಂದ್ರಾವತಿ ರವರು. ಇದು ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರಿಗೂ ಕೂಡ ತಿಳಿದಿರಲಿಲ್ಲವಂತೆ. ಅಕ್ಕನಂತೆ ತಂಗಿ ಕೂಡ ಗಾಯನದಲ್ಲಿ ನಿಸ್ಸೀಮ ರಾಗಿದ್ದಾರೆ. ಇಬ್ಬರಿಗೂ ಕೂಡ ಮುಂದಿನ ದಿನಗಳಲ್ಲಿ ಕೈತುಂಬ ಅವಕಾಶಗಳು ಸಿಗಲಿ ಎಂದು ಹಾರೈಸೋಣ.
Comments are closed.