ಐಪಿಎಲ್ ಟೂರ್ನಿಗೆ ಮೊದಲ ಎರಡು ವಾರ ಕೈ ಕೊಡಲಿರುವ ಪ್ರಮುಖ ಆಟಗಾರರು ಯಾರ್ಯಾರು ಗೊತ್ತೇ?? ಮೂರು ತಂಡಗಳಿಗೆ ಬಾರಿ ಎಫೆಕ್ಟ್. ಯಾರ್ಯಾರಿಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಂತೆ ಐಪಿಎಲ್ ಆರಂಭವಾಗುವುದು ಮಾರ್ಚ್ 26 ರಿಂದ. ಆದರೇ ಹಲವಾರು ಫ್ರಾಂಚೈಸಿಗಳು ಮೊದಲ ವಾರದ ಪಂದ್ಯಗಳಿಗೆ ಸರಿಯಾದ ಧೈರ್ಯದಿಂದ ಆಡಲು ಸಾಧ್ಯವಿಲ್ಲ. ಕಾರಣ ಆ ತಂಡಗಳ ಟ್ರಂಪ್ ಕಾರ್ಡ್ ಆಟಗಾರರಾದ ವಿದೇಶಿ ಆಟಗಾರರು, ತಮ್ಮ ದೇಶದ ಪರ ವಿವಿಧೆಡೆ ಕ್ರಿಕೇಟ್ ಆಡುತ್ತಿದ್ದಾರೆ. ಅವರು ಐಪಿಎಲ್ ಗೆ ಆಗಮಿಸಿ, ಮೂರು ದಿನದ ಕಡ್ಡಾಯ ಕ್ವಾರಂಟೈನ್ ನಲ್ಲಿದ್ದು, ನಂತರ ಐಪಿಎಲ್ ಬಯೋ ಬಬಲ್ ಪ್ರವೇಶಿಸಬೇಕಾಗುತ್ತದೆ. ಹಾಗಾಗಿ ಐಪಿಎಲ್ ನ ಮೊದಲೆರೆಡು ವಾರ ಸ್ಟಾರ್ ಆಟಗಾರರ ಅಲಭ್ಯತೆ ಎಲ್ಲಾ ಫ್ರಾಂಚೈಸಿಗಳಿಗೆ ತಗಲುತ್ತದೆ. ಬನ್ನಿ ಆ ಸ್ಟಾರ್ ಆಟಗಾರರು ಯಾರು ಎಂದು ತಿಳಿಯೋಣ.
1.ಚೆನ್ನೈ ಸೂಪರ್ ಕಿಂಗ್ಸ್ : ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ವೇಗಿ ದೀಪಕ್ ಚಾಹರ್ ಹಾಗೂ ಆಲ್ ರೌಂಡರ್ ಮೋಯಿನ್ ಅಲಿ ಮೊದಲೆರೆಡು ವಾರ ಐಪಿಎಲ್ ನಿಂದ ತಪ್ಪಿಸಿಕೊಳ್ಳಲಿದ್ದಾರೆ. ಇವರ ಅನುಪಸ್ಥಿತಿ ತಂಡದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು.

2.ಕೋಲ್ಕತ್ತಾ ನೈಟ್ ರೈಡರ್ಸ್ : ಕೆಕೆಆರ್ ತಂಡ ತನ್ನ ಸ್ಟಾರ್ ಆಟಗಾರರಾದ ವೇಗಿ ಪ್ಯಾಟ್ ಕಮಿನ್ಸ್ ಹಾಗೂ ಆರೋನ್ ಫಿಂಚ್ ರನ್ನು ಮೊದಲೆರೆಡು ವಾರ ಮಿಸ್ ಮಾಡಿಕೊಳ್ಳಲಿದೆ. ಇವರಿಬ್ಬರು ಸದ್ಯ ಪಾಕಿಸ್ತಾನದ ವಿರುದ್ಧ ಸರಣಿ ಆಡುತ್ತಿದ್ದು, ಅದಾದ ನಂತರ ದಂತಕಥೆ ಶೇನ್ ವಾರ್ನ್ ರವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ : ಈ ತಂಡ ತನ್ನ ಸ್ಟಾರ್ ವೇಗಿ ದಕ್ಷಿಣ ಆಫ್ರಿಕಾದ ಆನ್ರಿಕ್ ನೊಕಿಯೇ ಯವರನ್ನು ಗಾಯದ ಸಮಸ್ಯೆಯಿಂದಾಗಿ ಮೊದಲ ವಾರದ ಸೇವೆ ಕಳೆದುಕೊಳ್ಳಲಿದೆ. ಅದೇ ರೀತಿ ತಂಡದ ಸ್ಟಾರ್ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಸೇವೆ ಸಹ ತಡವಾಗಿ ಲಭಿಸಲಿದೆ. ಸದ್ಯ ಪಾಕ್ ಜೊತೆಗಿನ ಸರಣಿ ಮುಗಿದ ನಂತರ ವಾರ್ನರ್ ದೆಹಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.ಇದೇ ರೀತಿ ಬೇರೆ ಫ್ರಾಂಚೈಸಿಗಳು ಸಹ ಕೆಲವು ಆಟಗಾರರ ಅಲಭ್ಯತೆಯನ್ನು ಮೊದಲ ವಾರ ಅನುಭವಿಸಲಿವೆ.ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.