ಮಗಳು ’ಮೀರಾ’ಳ ದಾರಿಯಲ್ಲಿ ತಾಯಿ ’ಶಾಂಭವಿ’; ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಸಿಲ್ಲಿ ಳಲ್ಲಿ ಜ್ಯೋತಿ ಕಿರಣ್. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಮೂಡಿಬರುವ ಎಲ್ಲಾ ಧಾರಾವಾಹಿಗಳೂ ಒಂದಕ್ಕಿಂತ ಒಂದು ಉತ್ತಮವಾಗಿವೆ. ಅದರಲ್ಲಿ ಕಲರ್ಸ್ ಕನ್ನಡದಲ್ಲಿ ಮೂಡಿಬರುವ ನಮ್ಮನೆ ಯುವರಾಣಿ ಕೂಡ ಉತ್ತಮ ಪ್ರಕ್ರಿಯೆಯನ್ನು ಹೊಂದಿದೆ. ಮೀರಾ ಅನಿ ಇಲ್ಲದ ಕಾರಣ ತುಸು ಬೇಸರಿಸಿಕೊಂಡಿದ ಜನ ನಮ್ಮನೆ ಯುವರಾಣಿಯ ಹೊಸ ಕಥೆಯನ್ನೂ ಒಪ್ಪಿಕೊಂಡಿದ್ದಾರೆ.
ಇನ್ನು ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಮೈನ್ ಅಟ್ರಾಕ್ಷನ್ ಆಗಿದ್ದ ಮೀರಾ ಪಾತ್ರಧಾರಿ ಅಂಕಿತಾ ಇದೇ ಮೊದಲನೇ ಬಾರಿಗೆ ತೆಲಗು ಧಾರಾವಾಹಿಯೊಂದರಲ್ಲಿ ನಟಿಸಲು ಹೋಗಿದ್ದಾರೆ. ಇದೀಗ ಮತ್ತೊಬ್ಬ ನಟಿ ತಮ್ಮ ಮೊದಲ ತೆಲಗು ಪ್ರಾಜೆಕ್ಟ್ ನ್ನು ಒಪ್ಪಿಕೊಂಡಿದ್ದಾರೆ. ಹೌದು ನಟಿ ಜ್ಯೋತಿ ಕಿರಣ್ ಸಿಲ್ಲಿ ಲಲ್ಲಿ ಧಾರಾವಾಹಿಯ ಮೂಲಕ ಮನೆಮಾತಾದವರು. ನಂತರ ನಮ್ಮನೆ ಮುವರಾಣಿ ಧಾರಾವಾಹಿಯಲ್ಲಿ ಮೀರಾ ಳ ಅಮ್ಮ ಶಾಂಭವಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಮೊಟ್ಟ ಮೊದಲ ಬಾರಿಗೆ ತೆಲಗು ಧಾರಾವಾಹಿಯೊಂದನ್ನು ಒಪ್ಪಿಕೊಂಡಿರುವ ಇವರು ತೆಲಗು ನಾಡಿನಲ್ಲೂ ನಟನೆಯಲ್ಲಿ ಸೈ ಎನಿಸಿಕೊಳ್ಳಲಿದ್ದಾರೆ.
ಹೌದು, ತೆಲಗುವಿನಲ್ಲಿ ಉಪ್ಪೆನ ಎನ್ನುವ ಹೊಸ ಧಾರಾವಾಹಿ ಬರುತ್ತಿದೆ. ಅದರಲ್ಲಿ ವಿದ್ಯಾವಂತ ಹೆಣ್ಣುಮಕ್ಕಳು ಫೇಸ್ ಮಾಡುವ ಕಷ್ಟದ ಬಗ್ಗೆ ನಾಯಕಿ ಪಾತ್ರವನ್ನ ಸೆಟ್ ಮಾಡಲಾಗಿದೆ. ಅಪ್ಪನ ಪ್ರೀತಿಯ ಮಗಳಾದ ಜನನಿ ಜೀವನದ ಕಥೆ ಇದು. ಜನನಿಯ ತಾಯಿಯ ಪಾತ್ರದಲ್ಲಿ ಜ್ಯೋತಿ ಕಿರಣ್ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅವರೇ ಅವರ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ನಮ್ಮನೆ ಯುವರಾಣಿಯ ಅಮ್ಮ್ಮ ಮಗಳು ಇಬ್ಬರೂ ತೆಲಗು ಕಿರುತೆರೆಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಯೂ ನಟನೆಯ ಮೂಲಕ ಇನ್ನಷ್ಟು ಅಭಿಮಾನಿಗಳನ್ನು ಗಳಿಸಿಕೊಳ್ಳುವುದರಲ್ಲಿ ನೋ ಡೌಟ್. ಜ್ಯೋತಿ ಕಿರಣ್.. ನಿಮಗೆ ಆಲ್ ದಿ ಬೆಸ್ಟ್!
Comments are closed.