ಕೊನೆಗೂ ಸಿಕ್ತು ಅಧಿಕೃತ ಮಾಹಿತಿ: ಆರ್ ಆರ್ ಆರ್ ಚಿತ್ರದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್; ಎಷ್ಟು ಗೊತ್ತೇ?? ಇಷ್ಟೇನಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆ ಭಾರತೀಯ ಚಿತ್ರರಂಗದಲ್ಲಿ ಆರ್ ಆರ್ ಆರ್ ಎನ್ನುವ ದಕ್ಷಿಣಭಾರತದ ಸುನಾ’ಮಿ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಚಿತ್ರ ತೆಲುಗು ಭಾಷೆಯದ್ದೇ ಆದರೂ ಕೂಡ ಎಲ್ಲಾ ಭಾಷೆಯ ಚಿತ್ರರಂಗದ ಅಭಿಮಾನಿಗಳು ಕೂಡ ಈ ಚಿತ್ರವನ್ನು ಮೆಚ್ಚಿ ಕೊಂಡಾಡಿದ್ದಾರೆ.
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರ್ ಆರ್ ಆರ್ ಚಿತ್ರದ ಟಿಕೆಟ್ ಬೆಲೆಗಳು ಕೂಡ ಗಗನಕ್ಕೇರಿದ್ದವು. ಚಿತ್ರದಲ್ಲಿರುವ ಸ್ಟಾರ್ ನಟರ ಹಿಂಡನ್ನು ನೋಡಿದರೆ ಕೆಲವೊಮ್ಮೆ ಟಿಕೆಟ್ ಬೆಲೆಗಳು ಗಗನಕ್ಕೆ ಏರಿದ್ದು ಕೂಡ ಸಾರ್ಥಕ ಎಂಬುವಂತೆ ಇದ್ದವು. ಯಾಕೆಂದರೆ ಪ್ರತಿಯೊಂದು ದೃಶ್ಯಗಳು ಕೂಡ ಚಿನ್ನದಂತೆ ಭಾಸವಾಗುತ್ತಿತ್ತು. ರಾಜಮೌಳಿಯವರ ನಿರ್ದೇಶನಕ್ಕೆ ಈಗಾಗಲೇ ಪ್ರೇಕ್ಷಕ ಪ್ರಭುಗಳು ಸಲಾಂ ಹೊಡೆದಿದ್ದಾರೆ. ನಿರ್ಮಾಪಕರ ಗಿಂತ ಹೆಚ್ಚಾಗಿ ಅಭಿಮಾನಿಗಳು ಚಿತ್ರದ ಕಲೆಕ್ಷನ್ ಎಷ್ಟಾಗಿದೆ ಎಂಬುದಾಗಿ ಕಾತರರಾಗಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ನಾಯಕನಟರಾಗಿ ನಟಿಸಿರುವ ಈ ಸಿನಿಮಾ ಮೊದಲ ದಿನವೇ ಎಂಟು ಸಾವಿರಕ್ಕೂ ಅಧಿಕ ಪರದೆಗಳ ಮೇಲೆ ಅದ್ದೂರಿಯಾಗಿ ತೆರೆಕಂಡಿತ್ತು. ಹಾಗಿದ್ದರೆ ಮೊದಲ ದಿನ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿಯೋಣ ಬನ್ನಿ.
ಹೌದು ರಾಜಮೌಳಿ ನಿರ್ದೇಶನದ ಮಹೋನ್ನತ ಮೇಕಿಂಗ್ ಹೊಂದಿರುವ ಈ ಚಿತ್ರದಲ್ಲಿ ಜೂನಿಯರ್ ಎನ್ಟಿಆರ್ ರಾಮಚರಣ್ ಅಜಯ್ ದೇವಗನ್ ಹಾಗೂ ಆಲಿಯಾ ಭಟ್ ಸೇರಿದಂತೆ ಹಲವಾರು ಖ್ಯಾತನಾಮರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ಆರ್ ಆರ್ ಆರ್ ಚಿತ್ರ ಮೊದಲ ದಿನವೇ ಬರೋಬ್ಬರಿ 250 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಕುರಿತಂತೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಈಗಾಗಲೇ ಒಳ ಸಂಪನ್ಮೂಲಗಳು ಈ ಕುರಿತಂತೆ ಚರ್ಚಿಸಲು ಆರಂಭಿಸಿದ್ದಾರೆ.
ಚಿತ್ರ ತೆಲುಗು ರಾಜ್ಯಗಳಿಂದ 120 ಕೋಟಿ ತಮಿಳುನಾಡಿನಿಂದ 10 ಕೋಟಿ ರೂಪಾಯಿ ಹಿಂದಿ ವರ್ಷನ್ ನಲ್ಲಿ 25 ಕೋಟಿ ರೂಪಾಯಿಯನ್ನು ಕರ್ನಾಟಕದಲ್ಲಿ ಬರೋಬ್ಬರಿ 14 ಕೋಟಿ ರೂಪಾಯಿ ಕೇರಳದಲ್ಲಿ ಕೂಡ ನಾಲ್ಕು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕೇವಲ ಇಷ್ಟು ಮಾತ್ರವಲ್ಲದೆ ವಿದೇಶಗಳಿಂದ ಮೊದಲ ದಿನವೇ ಬರೋಬ್ಬರಿ 75 ಕೋಟಿ ಕಲೆಕ್ಷನ್ ಆಗಿದೆ ಎಂಬುದಾಗಿ ಕೂಡ ರಿಪೋರ್ಟ್ ಬಂದಿದೆ. ಬಾಹುಬಲಿಯ ದಾಖಲೆಯನ್ನು ಮುರಿಯುವತ್ತ ವೇಗವಾಗಿ ಮುನ್ನುಗ್ಗುತ್ತಿರುವ ಆರ್ ಆರ್ ಆರ್ ಚಿತ್ರದ ಕನಸು ನನಸಾಗುತ್ತದೆಯೋ ಇಲ್ಲವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.
Comments are closed.