Neer Dose Karnataka
Take a fresh look at your lifestyle.

ವಿಚ್ಚೇದನ ಪಡೆದುಕೊಂಡ ಮೇಲೆ ಸಮಂತಾ ಬ್ರಾಂಡ್ ವ್ಯಾಲ್ಯೂ ಏನಾಗಿದೆ ಗೊತ್ತೇ?? ಹೀಗಾಗುತ್ತದೆ ಎಂದು ಯಾರು ಅಂದು ಕೊಂಡಿರಲಿಲ್ಲ.

13

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಸುದ್ದಿಯಾಗುತ್ತಿರುವವರು ನಟಿ ಸಮಂತಾ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸದಾ ಬೇಡಿಕೆಯ ನಟಿ ಎನ್ನಿಸಿಕೊಂಡವರು ಸ್ಯಾಮ್. ಅದರಲ್ಲೂ ವಿಚ್ಛೇಧನದ ಬಳಿಕ ಅವರ ಅವಕಾಶಗಳೂ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಸ್ಯಾಮ್ ಸುದ್ದಿಯಾಗುತ್ತಲೇ ಇದ್ದಾರೆ. ಅಲ್ಲದೇ ಅಭಿಮಾನಿಗಳ ಹಾಟ್ ಫೇವರೇಟ್ ಕೂಡ ಆಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಸಮಂತಾ ಜೋರಾಗಿಯೇ ಕಾಣಿಸಿಕೊಳ್ಳುತ್ತಾರೆ.

ಇತ್ತೀಚಿಗೆ ಸ್ನಿಮಾ, ಜಾಹೀರಾತು, ಸ್ವ ಉದ್ಯಮ ಅಂತ ಫುಲ್ ಬ್ಯುಸಿಯಾಗಿದ್ದಾರೆ ನಟಿ ಸಮಂತಾ ರುತಿ ಪ್ರಭು. ಸದ್ಯ ಸಮಂತಾ ತಮಮ್ದೇ ಆದ ಬ್ರ್ಯಾಂಡ್ ವಾಲ್ಯೂ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಸಿನಿಮಾ ಇರಲಿ, ಜಾಹೀರಾತುಗಳಿರಲಿ, ಅಥವಾ ಕೆಲವು ಉತ್ಪನ್ನಗಳ ಫೋಟೋಶೂಟ್ ಆಗಿರಲಿ, ಸ್ಯಾಮ ತಮ್ಮದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ.

ಸಮಂತಾ ಹಾಗೂ ನಾಗ ಚೈತನ್ಯ ಮದುವೆಯಾಗುತ್ತಿದ್ದಂತೆ ಸಮಂತಾ ನಟನಾ ಕ್ಷೇತ್ರದಿಂದ ದೂರ ಉಳಿಯಬಹುದು ಎಂದು ಜನ ಭಾವಿಸಿದ್ದರು ಆದರೆ ಹಾಗಾಗಲಿಲ್ಲ. ಇನ್ನು ಸಮಂತಾ ವಿಚ್ಛೇಧನವಾದಾಗಲಂತೂ ಸಮಂತಾ ಕೆರಿಯರ್ ಮುಗಿದೇ ಹೋಯಿತು ಅಂದುಕೊಂಡರು, ಹಾಗೂ ಆಗಲಿಲ್ಲ. ಸ್ಯಾಮ್ ತಮ್ಮ ಭವಿಷ್ಯವನ್ನು ಇನ್ನಷ್ಟು ಗಟ್ಟಿಯಾಗಿಸಿಕೊಂಡರು. ಅವರ ಭವಿಷ್ಯದ ಬಗ್ಗೆ ಬೇರೆಯವರ ಊಹೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ ಸಮಂತಾ!

ಯಾಕಂದ್ರೆ ವಿಚ್ಛೇಧನದ ನಂತರ ಸಮಂತಾ ಹೆಚ್ಚು ಬ್ಯುಸಿಯಾಗಿದ್ದಾರೆ, ಸಿನಿಮಾ ಮಾತ್ರವಲ್ಲ, ಜಾಹೀರಾತುಗಳಲ್ಲಿಯೂ ಸಮಂತಾ ದುಡಿಮೆ ದುಪ್ಪಟ್ಟಾಗಿದೆ. ಅವರ ಬ್ರ್ಯಾಂಡ್ ವಾಲ್ಯೂ ಕೂಡ ಮೊದಲಿಗಿಂತ ಸಾಕಷ್ಟು ಹೆಚ್ಚಾಗಿದೆ. ಅಲ್ಲದೇ ಇನ್ನಷ್ಟು ಜಾಹಿರಾತುಗಲ್ಲೂ ಕೂಡ ಸಮಂತಾ ಕಾಣೀಸಿಕೊಳ್ಳಲಿದ್ದಾರೆ. ಜೀವನದಲ್ಲಿ ನಡೆಯುವ ಕಹಿ ಘಟನೆಗಳು ಯಾವುದೇ ಕಾರಣಕ್ಕೂ ನಮ್ಮನ್ನು ಕುಸಿಯಲು ಬಿಡಬಾರದು ಎನ್ನುವುದಕ್ಕೆ ಸಮಂತಾಳಿಗಿಂತ ಉದಾಹರಣೆ ಬೇಕೇ?

Leave A Reply

Your email address will not be published.