ಅಂದು ಕನ್ನಡ ಸಿನಿಮಾ ಜೀವನದಲ್ಲಿ ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದ ಶ್ರುತಿ ಹಾಸನ್, ಇಂದು ಏನು ಹೇಳಿದ್ದಾರೆ ಗೊತ್ತಾ?? ಇದಪ್ಪ ಕನ್ನಡದ ಹವಾ ಅಂದ್ರೆ
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಪರಭಾಷಾ ನಟನಟಿಯರು ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಪ್ರೇಕ್ಷಕರು ಕೂಡ ಇಂತಹ ಪರಭಾಷಾ ಕಲಾವಿದರನ್ನು ಕೂಡ ನಮ್ಮವರೇ ಎನ್ನುವಂತೆ ಸ್ವಾಗತಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಹೋದರೆ ಒಬ್ಬ ನಟಿ ಕನ್ನಡ ಚಿತ್ರರಂಗದಲ್ಲಿ ನಾನು ಸದ್ಯಕ್ಕಂತೂ ನಟಿಸುವುದಿಲ್ಲ ಎನ್ನುವುದಾಗಿ ಕನ್ನಡದ ಕುರಿತಂತೆ ಅಸಡ್ಡೆ ತೋರುವಂತಹ ಟ್ವೀಟ್ ಅನ್ನು ಮಾಡಿದ್ದರು. ಹೌದು ಅವರು ಮತ್ತಿನ್ಯಾರು ಅಲ್ಲ ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ಕಮಲ್ ಹಾಸನ್ ರವರ ಮಗಳಾಗಿರುವ ಶ್ರುತಿ ಹಾಸನ್.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕಮಲಹಾಸನ್ ರವರು ಕನ್ನಡ ಚಿತ್ರರಂಗದ ಮೂಲಕವೇ ತಮ್ಮ ಸಿನಿಮಾ ಜರ್ನಿಯ ಪ್ರಮುಖ ಘಟ್ಟವನ್ನು ತಲುಪಿದ್ದು ಎಂದರೆ ತಪ್ಪಾಗಲಾರದು. ಇನ್ನು ಅದೇ ನಟನ ಮಗಳಾಗಿರುವ ಶ್ರುತಿ ಹಾಸನ್ ರವರು ಮಾತ್ರ ಕನ್ನಡ ಚಿತ್ರರಂಗದ ಕುರಿತಂತೆ ಅಸಡ್ಡೆ ತೋರಿಸುವಂತಹ ಮಾತುಗಳನ್ನು ಆಡಿದ್ದರು. ಹೌದು ಅದೇ ಅಂದರೆ ಈ ಹಿಂದೆ ಪೊಗರು ಚಿತ್ರಕ್ಕೆ ಶ್ರುತಿ ಹಾಸನ್ ಅವರನ್ನು ನಾಯಕ ನಟಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂಬುದಾಗಿ ಸುದ್ದಿಯಾಗಿತ್ತು.
ಈ ಕುರಿತಂತೆ ಶ್ರುತಿಹಾಸನ್ ರವರು ನಾನು ಯಾವುದೇ ಕನ್ನಡ ಸಿನಿಮಾಗಳಲ್ಲಿ ಸದ್ಯಕ್ಕೆ ನಟಿಸುತ್ತಿರುವುದಾಗಿ ಪೋಸ್ಟ್ ಮಾಡಿದ್ದರು. ಈ ಕುರಿತಂತೆ ನವರಸನಾಯಕ ಜಗ್ಗೇಶ್ ಕೂಡ ಪರೋಕ್ಷವಾಗಿ ಟೀಕೆ ಮಾಡಿದ್ದರು. ಈಗ ಅದೇ ಬಹುಭಾಷೆ ತಾರೆಯಾಗಿರುವ ಶ್ರುತಿ ಹಾಸನ್ ರವರು ಕೆಜಿಎಫ್ ಚಾಪ್ಟರ್ 2 ಟ್ರೈಲರ್ ವೀಕ್ಷಿಸಿದ ನಂತರ ಸೂಪರ್ ಎನ್ನುವುದಾಗಿ ಹೇಳಿದ್ದು ಚಿತ್ರವನ್ನು ನೋಡಲು ಕಾತರರಾಗಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಒಂದು ಕಾಲದಲ್ಲಿ ಕನ್ನಡದ ಕುರಿತಂತೆ ಅಸಡ್ಡೆ ಮೂಡಿಸಿದ್ದ ಶ್ರುತಿ ಹಾಸನ್ ರವರ ಕನ್ನಡದ ಸಿನಿಮಾದ ಕುರಿತು ಹೊಗಳುವಂತೆ ಮಾಡಿದ್ದು ಕೆಜಿಎಫ್ ಚಾಪ್ಟರ್ 2 ಚಿತ್ರ. ಸದ್ಯಕ್ಕೆ ಈಗ ಕನ್ನಡದ ನಿರ್ದೇಶಕ ಹಾಗೂ ನಿರ್ಮಾಪಕರು ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಸಲಾರ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅಲ್ವ ಹೇಳ್ತಿರೋದು ಕನ್ನಡ ಈಗ ಬೆಳೆದಿದೆ ಎನ್ನೋದಾಗಿ.
Comments are closed.