ಎಲ್ಲಾ ನಟರ ದಾಖಲೆಗಳನ್ನು ಉಡೀಸ್ ಮಾಡಿದ ರಾಕೀ ಭಾಯ್, ಕೆಜಿಎಫ್-2 ಗಾಗಿ ಪಡೆದ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಒಂದು ಸಿನೆಮಾಗೆ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಜಾಗತಿಕವಾಗಿ ದೃಢಪಡಿಸಿದ ಶ್ರೇಯ ಯಾರಿಗಾದರೂ ಸಲ್ಲುತ್ತದೆ ಎಂದರು ಅದು ಖಂಡಿತವಾಗಿ ಹೊಂಬಾಳೆ ಫಿಲಂಸ್ ಪ್ರಶಾಂತ ಹಾಗೂ ಪ್ರಮುಖವಾಗಿ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಸಲ್ಲುತ್ತದೆ ಎಂದು ಹೇಳಬಹುದಾಗಿದೆ. ಕೆಜಿಎಫ್ ಚಾಪ್ಟರ್ 1 ಚಿತ್ರದ ಮೂಲಕ ಕನ್ನಡಿಗರಿಗೆ ದೊಡ್ಡಮಟ್ಟದ ಕನಸನ್ನು ಕಾಣುವ ಸ್ವಾ’ತಂತ್ರ್ಯವನ್ನು ನೀಡಿದ ವ್ಯಕ್ತಿತ್ವಗಳು ಇವರು ಎಂದು ಹೇಳಬಹುದಾಗಿದೆ.
ಅದರನ್ನು ರಾಕಿಂಗ್ ಸ್ಟಾರ್ ಯಶ್ ರವರು ಕೆಜಿಎಫ್ ಚಾಪ್ಟರ್ 1 ಹಾಗೂ 2ರ ಜನಪ್ರಿಯತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜಾಗತಿಕವಾಗಿ ಹರಡಲು ಕಾರಣವಾಗಿರುವ ಮೂಲಪುರುಷ ಎಂದು ಹೇಳಬಹುದಾಗಿದೆ. ಒಂದು ಕಾಲದಲ್ಲಿ ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆಯಲು ಒದ್ದಾಡುತ್ತಿದ್ದ ರಾಕಿಂಗ್ ಸ್ಟಾರ್ ಯಶ್ ಇಂದು ಕೆಜಿಎಫ್ ಚಾಪ್ಟರ್ 2 ಚಿತ್ರದ ಮೂಲಕ ಸಾವಿರಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಹೊಂದಿದ ಮೊದಲ ಕನ್ನಡ ಚಿತ್ರವನ್ನಾಗಿ ಮಾಡುವತ್ತ ಮುನ್ನುಗ್ಗುತ್ತಿದ್ದಾರೆ. ಇದಕ್ಕೆ ಇನ್ನೂ ಹಲವಾರು ಸಮಯವಕಾಶ ಇದ್ದರೂ ಕೂಡ ಈ ವಿಚಾರ ಅತಿಶಯೋಕ್ತಿಯಲ್ಲ ಎನ್ನುವುದನ್ನು ಇದರ ಜನಪ್ರಿಯತೆ ನೋಡಿ ನಾವು ನಿರ್ಧರಿಸಬಹುದಾಗಿದೆ.
ಈಗಾಗಲೆ ಚಿತ್ರದ ಟ್ರೇಲರ್ ಅತ್ಯಂತ ಹೆಚ್ಚು ವೀಕ್ಷಣೆ ಪಡೆದಂತಹ ಟ್ರೈಲರ್ ಗಳ ಸಾಲಿನಲ್ಲಿ ತನ್ನ ಡಾಮಿನೇಷನ್ ಅನ್ನು ತೋರಿಸಿದೆ. ಚಿತ್ರದ ಮೊದಲ ಹಾಡು ಕೂಡ ಎಲ್ಲಾ ಅಭಿಮಾನಿಗಳ ಹಾಗೂ ಸಿನಿಮಾ ಪ್ರೇಕ್ಷಕರ ಫೋನಿನಲ್ಲಿ ರಿಪೀಟ್ ಮೋಡ್ ನಲ್ಲಿ ಪ್ಲೇ ಆಗುತ್ತಿದೆ. ಈಗಾಗಲೇ ಚಿತ್ರದ ಪ್ರಮುಖ ಪಾತ್ರಧಾರಿಗಳ ಆಗಿರುವ ರಾಕಿಂಗ್ ಸ್ಟಾರ್ ಯಶ್ ಶ್ರೀನಿಧಿ ಶೆಟ್ಟಿ ರವೀನ ತಂಡನ್ ಹಾಗೂ ಸಂಜಯ್ ದತ್ ಅವರು ಚಿತ್ರದ ಪ್ಯಾನ್ ಇಂಡಿಯಾ ಪ್ರಮೋಷನ್ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ ಚಿತ್ರತಂಡ ದೆಹಲಿಯಲ್ಲಿ ಪ್ರಮೋಶನ್ ಕಾರ್ಯದಲ್ಲಿ ತೊಡಗಿದೆ.
ರಾಕಿಂಗ್ ಸ್ಟಾರ್ ಯಶ್ ರವರು ಬರೆದಿರುವಂತಹ ಸಂಭಾವನೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಕೆಜಿಎಫ್ ಚಾಪ್ಟರ್ 2 ಕಾಗಿ ರಾಕಿಂಗ್ ಸ್ಟಾರ್ ಯಶ್ ರವರು ಪಡೆದುಕೊಂಡಿರುವಂತಹ ಸಂಭಾವನೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಎನ್ನುವುದಾಗಿ ಕೇಳಿಬಂದಿದೆ. ಹೌದು ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ರವರು ಬರೋಬ್ಬರಿ 25 ರಿಂದ 27 ಕೋಟಿ ರೂಪಾಯಿ ಸಂಭಾವನೆ ಪಡೆದು ಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಕೆಲವು ಸುದ್ದಿಗಳ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ರವರು ಲಾಭದಲ್ಲಿ ಕೂಡ ಪಾಲುದಾರಿಕೆಯನ್ನು ಹೊಂದಲಿದ್ದಾರೆ ಎಂಬುದಾಗಿ ಕೇಳಿ ಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.
Comments are closed.