Neer Dose Karnataka
Take a fresh look at your lifestyle.

ಕೊನೆಗೂ ಆಶಿಕಾ ರಂಗನಾಥ್ ರವರಿಗೆ ಸಿಕ್ತು ಸಿಹಿ ಸುದ್ದಿ. ಹಲವಾರು ದಿನಗಳ ನಂತರ ಹುಡುಕಿಕೊಂಡ ಬಂದ ಅದೃಷ್ಟ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ನ ಮಿಲ್ಕ್ ಬ್ಯೂಟಿ ಈಕೆ. ಕನ್ನಡದಲ್ಲಿ ಇದುವರೆಗೆ ಇವರು ಕಾಣಿಸಿಕೊಂಡ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿವೆ. ಹಾಗಾಗಿ ಇವರನ್ನ ಅದೃಷ್ಟವಂತ ಹೀರೋಯಿನ್ ಅಂತಾನೆ ಕರೆಯಲಾಗುತ್ತದೆ. ಅವರೇ ನಟಿ ಆಶಿಕಾ ರಂಗನಾಥ್. ಆಶಿಕಾ ರಂಗನಾಥ್ ಸಿನಿಪಯಣ ಆರಂಭಿಸಿದ್ದು 2016 ರಲ್ಲಿ ಕ್ರೇಜಿ ಬಾಯ್ ಚಿತ್ರದ ಮೂಲಕ. 1996 ರಲ್ಲಿ ಹಾಸನದಲ್ಲಿ ಜನಿಸಿದ ಈ ಚೆಲುವೆ ತಾನು ಮುಂದೆ ದೊಡ್ಡ ಮಟ್ಟದ ಸ್ಟಾರ್ ಆಗುತ್ತೇನೆ ಎನ್ನುವ ಕಲ್ಪನೆಯಾದರೂ ಇತ್ತು ಇಲ್ವೋ, ಆದರೆ ಇಂದು ಸ್ಯಾಂಡಲ್ವುಡ್ ಮಾತ್ರವಲ್ಲ ಹಾಲಿವುಡ್ ಚಿತ್ರರಂಗ ಕೂಡ ಆಶಿಕ ರಂಗನಾಥ್ ಅವರಿಗೆ ಸಿನಿಮಾ ಬೇಡಿಕೆಯನ್ನು ಇಟ್ಟಿದೆ.

ಪದವಿಯನ್ನು ಮುಗಿಸಿರುವ ಆಶಿಕಾ ರಂಗನಾಥ್ ಅವರಿಗೆ ನೃತ್ಯದಲ್ಲಿ ಎಲ್ಲಿಲ್ಲದ ಆಸಕ್ತಿ. ಬಾಲ್ಯದಿಂದಲೂ ಹಿಂದಿ ಅಭ್ಯಾಸ ಮಾಡಿರುವ ಆಶಿಕಾ ರಂಗನಾಥ್ ಒಳ್ಳೆಯ ನೃತ್ಯಗಾರ್ತಿ ಕೂಡ. ಆಶಿಕಾ ರಂಗನಾಥ್ ಒಮ್ಮೆ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ತಿರುಗಿ ನೋಡಿದ್ದೇ ಇಲ್ಲ. 2016ರಿಂದ ಈವರೆಗೂ ಆಶಿಕ ಅವರಿಗೆ ಆಫರ್ ಗಳಲ್ಲಿ ಯಾವುದೇ ಕಮ್ಮಿಯಾಗಿಲ್ಲ. ಮಾಸ್ ಲೀಡರ್',ಮುಗಳು ನಗೆ’,ರಾಜು ಕನ್ನಡ ಮೀಡಿಯಂ', ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದ ಆಶಿಕ, 2018 ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಶನ್‌ಲ್ಲಿ ಬಂದರ‍್ಯಾಂಬೋ 2′ ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು’ ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಹಾಡು.

ಆಶಿಕಾ ರಂಗನಾಥ್ ಈಗ ಎರಡನೇ ಬಾರಿಗೆ ಚರಣ್ ಜೊತೆ ತೆರೆಯಮೇಲೆ ಕಾಣಿಸಿಕೊಳ್ಳಲಿದ್ದಾರೆ. ಹೌದು ನಟ ಚರಣ್ ಅಭಿನಯದ ಅವತಾರ ಪುರುಷ ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ. ಆಶಿಕಾ ರಂಗನಾಥ್ ಇದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪುನೀತರಾಜಕುಮಾರ ನಟನೆಯ ಜೇಮ್ಸ್ ಚಿತ್ರದ ಹಾಡೊಂದರಲ್ಲಿ ಆಶಿಕಾ ರಂಗನಾಥ್ ನೃತ್ಯ ಮಾಡಿದ್ದರು. ಶ್ರೀ ಮುರುಳಿಯ ಜೊತೆ ಮದಗಜ ಚಿತ್ರದಲ್ಲಿ ಆಶಿಕ ಉತ್ತಮ ಪಾತ್ರವನ್ನು ನಿರ್ವಹಿಸಿದ ಡಿಸೆಂಬರ್ ನಲ್ಲಿ ಚಿತ್ರ ರಿಲೀಸ್ ಆಗಿತ್ತು. ಅವತಾರ ಪುರುಷ ಸಿನಿಮಾದ ಜೊತೆ ಆಶಿಕ ನಟನೆಯ ರೆಮೋ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಕಳೆದ ಆರು ವರ್ಷಗಳಿಂದ ಸಿನಿಮಾರಂಗದಲ್ಲಿ ಇರುವ ಆಶಿಕಾ ರಂಗನಾಥ್ ಸಾಕಷ್ಟು ಖ್ಯಾತಿಯನ್ನು ಕನ್ನಡದಲ್ಲಿ ಕಳಿಸಿದ್ದಾರೆ ಇದೀಗ ತಮಿಳಿನಲ್ಲಿಯೂ ಕೂಡ ಆಶಿಕಾ ರಂಗನಾಥ್ ನಡೆಸಲು ಮುಂದಾಗಿದ್ದಾರೆ. ತಮಿಳು ನಟ ಅಥರ್ವ ಅವರಿಗೆ ನಾಯಕಿಯಾಗಿ ಸಿನಿಮಾ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆಶಿಕ ರಂಗನಾಥ್. ಒಟ್ಟಿನಲ್ಲಿ ಒಂದಿಲ್ಲೊಂದು ಚಿತ್ರದಲ್ಲಿ ಬ್ಯುಸಿಯಾಗಿರುವ ಬ್ಯೂಟಿ ಆಶಿಕಾ ರಂಗನಾಥ್ ಅವರಿಗೆ ಆಲ್ ದ ಬೆಸ್ಟ್.

Comments are closed.