ಸಾವಿರ ಕೋಟಿಯತ್ತ ದಾಪುಗಾಲು ಹಾಕಿದ್ದ RRR ಚಿತ್ರಕ್ಕೆ ಬಿಗ್ ಶಾಕ್, ರಾಜಮೌಳಿ ಆರ್ಭಟಕ್ಕೆ ಬ್ರೇಕ್ ಹಾಕಲು ಹೊರಟಿದ್ದು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಿ ಐನೂರು ಕೋಟಿಯತ್ತ ಧಾವಿಸುತ್ತಿದೆ. ಹೌದು ರಾಜಮೌಳಿ ಅವರು ಈ ಬಾರಿ ಈ ಚಿತ್ರದ ಮೂಲಕ ತಮ್ಮ ಹಳೆಯ ಬಾಹುಬಲಿ ಚಿತ್ರದ ದಾಖಲೆಗಳನ್ನು ಅಳಿಸಿಹಾಕುವ ಯೋಜನೆಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಮೊದಲ ದಿನವೇ 230 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಆರ್ ಆರ್ ಆರ್ ಚಿತ್ರ ಕೆಲವೊಂದು ಹಾಲಿವುಡ್ ಸಿನಿಮಾಗಳನ್ನು ಕೂಡ ಹಿಂದಿಕ್ಕಿದೆ. ಜೂನಿಯರ್ ಎನ್ಟಿಆರ್ ಹಾಗೂ ರಾಮಚರಣ್ ರವರ ಪಾತ್ರಗಳು ಚಿತ್ರದ ಪ್ರಮುಖ ಜೀವಾಳವಾಗಿದೆ ಎಂದರೆ ತಪ್ಪಾಗಲಾರದು.
ಚಿತ್ರದಲ್ಲಿ ಇವರಿಬ್ಬರ ಪಾತ್ರಗಳು ಸಾಕಷ್ಟು ಹೈಲೈಟ್ ಆಗಿವೆ. ಇನ್ನು ಚಿತ್ರದಲ್ಲಿ ಅಜಯ್ ದೇವಗನ್ ಹಾಗೂ ಶ್ರೇಯ ಶರಣ್ ರವರು ಕೂಡ ಅತಿಥಿ ಪಾತ್ರಗಳ ಹಾಗೆ ಕಾಣಿಸಿಕೊಂಡಿದ್ದಾರೆ. ರಾಜಮೌಳಿಯವರ ನಿರ್ದೇಶನವನ್ನು ಪ್ರತಿಯೊಂದು ಕ್ಷಣಗಳಲ್ಲಿ ಕೂಡ ಪ್ರೇಕ್ಷಕರು ಆನಂದಿಸಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಆದರೆ ಇದೀಗ ಆಲಿಯಾ ಭಟ್ ರವರ ಅಭಿಮಾನಿಗಳು ಚಿತ್ರವನ್ನು ನೋಡಿದ ನಂತರ ನಿರಾಶೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದು ಈಗ ಹೊಸದಾಗಿ ಸುದ್ದಿಯಾಗುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಾಮಚರಣ್ ರವರ ಅಲ್ಲೂರಿ ಸೀತಾರಾಮರಾಜು ಪಾತ್ರದ ಪ್ರೇಯಸಿ ಸೀತಾ ಪಾತ್ರಧಾರಿಯಾಗಿ ಆಲಿಯಾ ಭಟ್ ರವರು ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ಆಲಿಯಾ ಭಟ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಲು ಕಾರಣ ಏನು ಎನ್ನುವುದನ್ನು ತಿಳಿಯೋಣ.
ಹೌದು ರಾಜಮೌಳಿಯವರು ಹಿಂದಿ ಮಾರ್ಕೆಟ್ ಗಾಗಿ ಆಲಿಯಾ ಭಟ್ ರವರನ್ನು ಉಪಯೋಗಿಸಿದ್ದಾರೆ ಎನ್ನುವುದಾಗಿ ಅವರ ಅಭಿಮಾನಿಗಳು ಆರೋಪಿಸಿದ್ದಾರೆ. ಈ ಹಿಂದೆ ರಾಜಮೌಳಿ ಅವರು ಆಲಿಯಾ ಭಟ್ ರವರು 15 ನಿಮಿಷಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಚಿತ್ರವನ್ನು ನೋಡಿದಾಗ ಅಭಿಮಾನಿಗಳಿಗೆ ಆಲಿಯಾ ಭಟ್ ರವರು ತಲೆಯ ಮೇಲೆ ಅಷ್ಟೊಂದು ಸಮಯ ಕಾಣಿಸಿಕೊಳ್ಳುವುದಿಲ್ಲ ಎನ್ನುವುದಾಗಿ ಅರಿವಾಗಿದೆ. ಹೀಗಾಗಿ ರಾಜಮೌಳಿ ಅವರ ಕುರಿತಂತೆ ಹಾಗೂ ಆರ್ ಆರ್ ಆರ್ ಸಿನಿಮಾದ ಕುರಿತಂತೆ ಆಲಿಯಾ ಭಟ್ ರವರ ಅಭಿಮಾನಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.