ಅಣ್ಣಾವ್ರ ಈ ಸಿನಿಮಾದ ಲವ್ ಸ್ಟೋರಿಯಲ್ಲಿ ಮಾಸ್ಟರ್ ಪೀಸ್, ಅಣ್ಣಾವ್ರ ಲವರ್ ಬಾಯ್ಆಗಿ ಕಾಣಿಸ್ಕೊಂಡ ಏಕೈಕ ಚಿತ್ರ ಯಾವುದು ಗೊತ್ತೇ??
70ರ ದಶಕ ಕನ್ನಡ ಚಿತ್ರರಂಗದ ಸುವರ್ಣಯುಗ ಎಂದರೆ ತಪ್ಪಾಗುವುದಿಲ್ಲ. ಆ ಸಮಯದಲ್ಲಿ ತೆರೆಕಂಡ ಹಲವು ಸಿನಿಮಾಗಳು ಇಂದಿಗೂ ವೀಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅಂತಹ ಸಿನಿಮಾಗಳಲ್ಲಿ ಒಂದು ಸಿನಿಮಾ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕಥಾನಾಯಕ ಒಬ್ಬ ಬೈಕ್ ರೇಸರ್, ಆತನ ಬಳಿ ಜಾವ ಬೈಕ್ ಇರುತ್ತದೆ. ಬೈಕ್ ರೇಸಿಂಗ್ ಚಾಂಪಿಯನ್ ಆಗಿರುವ ನಾಯಕ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಕೂಡ ಮಾಡುತ್ತಿರುತ್ತಾನೆ. ಬೈಕ್ ರೇಸ್ ಸಮಯದಲ್ಲೇ ನಾಯಕಿಯ ಪರಿಚಯವಾಗುತ್ತದೆ. ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಲು ಶುರು ಮಾಡುತ್ತಾರೆ. ನಾಯಕಿ ಆಗರ್ಭ ಶ್ರೀಮಂತೆಯ ಮಗಳು. ತಾಯಿಯ ಕುತಂತ್ರದಿಂದ ನಾಯಕ ಮತ್ತು ನಾಯಕಿ ಒಂದಾಗಲು ಸಾಧ್ಯ ಆಗುವುದಿಲ್ಲ.
ಇಬ್ಬರು ಬೇರೆಯಾಗಿ 6 ವರ್ಷಗಳ ನಂತರ ಅಚಾನಕ್ ಆಗಿ ಭೇಟಿಯಾಗುತ್ತಾರೆ. ಆ ಸಮಯಕ್ಕೆ ನಾಯಕಿಗೆ ಮದುವೆಯಾಗಿ ಆಕೆ ವಿಧವೆ ಆಗಿರುತ್ತಾಳೆ. ಆಕೆಯ ಗತಕಾಲದಲ್ಲಿ ನಡೆದಿದ್ದೆಲ್ಲವನ್ನು ತಿಳಿದ ನಾಯಕ, ಹಳೆಯದೆಲ್ಲವಮನು ಮರೆತು ಮದುವೆಯಾಗೋಣ ಎನ್ನುತ್ತಾನೆ. ಇದಕ್ಕೆ ನಾಯಕಿ ಒಪ್ಪುವುದಿಲ್ಲ. ನಿನ್ನ ಜೀವನ ಚೆನ್ನಾಗಿರಲಿ, ನನ್ನ ಜೀವನ ಈಗಾಗಲೇ ಹಾಳಾಗಿದೆ ಎಂದು ಹೇಳಿ ನಾಯಕನಿಂದ ದೂರವಾಗುವ ಪ್ರಯತ್ನ ಮಾಡುತ್ತಾಳೆ. ಆದರೆ ಆಕೆಯನ್ನೇ ಹಿಂಬಾಲಿಸಿ ಬರುವ ನಾಯಕ, ನಾಯಕಿಯ ಮನಸ್ಸನ್ನು ಗೆಲ್ಲುತ್ತಾನೆ. ಇದು ನಿಮಗೆಲ್ಲರಿಗು ಗೊತ್ತಿರುವ ಕಥೆಯೇ. 70ರ ದಶಕದಲ್ಲಿ ತೆರೆಕಂಡ ಅಣ್ಣಾವ್ರು ಮತ್ತು ಲಕ್ಷ್ಮಿ ಅವರು ಅಭಿನಯಿಸಿದ ಎವರ್ ಗ್ರೀನ್ ಲವ್ ಸ್ಟೋರಿ ಇದು.
ನಿರ್ದೇಶಕ ವಿಜಯ್ ಆಕ್ಷನ್ ಕಟ್ ಹೇಳಿ, ಚಿ ಉದಯಶಂಕರ್ ಅವರ ಸಾಹಿತ್ಯ, ರವಿಚಂದ್ರನ್ ಅವರ ತಂದೆ ನಿರ್ಮಾಣ ಮಾಡಿದ ಸಿನಿಮಾ, ನಾ ನಿನ್ನ ಮರೆಯಲಾರೆ. ಈ ಸಿನಿಮಾ ಈಗಲೂ ಹಲವು ಜನರ ಫೇವರೆಟ್. 70ರ ದಶಕದ ಸೂಪರ್ ಹಿಟ್ ಲವ್ ಸ್ಟೋರಿ. ಅಣ್ಣಾವ್ರು ನಟಿಸಿದ ಏಕೈಕ ಲವರ್ ಬಾಯ್ ಇಮೇಜ್ ಇರುವ ಪಾತ್ರವಾಗಿತ್ತು ಆನಂದ್. ಈ ಸಿನಿಮಾದಲ್ಲಿ ಅಣ್ಣಾವ್ರು ಮತ್ತು ಲಕ್ಷ್ಮಿ ಅವರ ಮನೋಜ್ಞ ಅಭಿನಯವನ್ನು ಮರೆಯಲು ಸಾಧ್ಯವಿಲ್ಲ. ಅಣ್ಣಾವ್ರು ಅಭಿನಯಿಸಿರುವ ಈ ಲವ್ ಸ್ಟೋರಿ ನಿಮಗೂ ಇಷ್ಟವೇ? ನಾ ನಿನ್ನ ಮರೆಯಲಾರೆ ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
Comments are closed.