ತಮಗಿಂತ ಬರೋಬ್ಬರಿ 10 ವರ್ಷ ವಯಸ್ಸಿನ ಅಂತರ ಇರುವವರನ್ನು ಮದುವೆಯಾಗಿರುವ ಟಾಪ್ ಕಲಾವಿದರು ಯಾರ್ಯಾರು ಗೊತ್ತೇ??
ಮದುವೆ ಎನ್ನುವುದು ಒಂದು ಸುಂದರವಾದ ಬಾಂಧವ್ಯ. ಎರಡು ಮನಸ್ಸುಗಳ ಮಿಲನ. ಎರಡು ಮನಸ್ಸುಗಳು ಒಂದಾಗಲು, ಕುಟುಂಬದವರು ಕೊಡುವ ಸಮ್ಮತಿಯೇ ಮದುವೆ. ಪ್ರೀತಿ ಮದುವೆ ಎಂದು ಬಂದರೆ, ಅಲ್ಲಿ ಐಶ್ವರ್ಯ, ಹಣ, ಆಸ್ತಿ, ಅಂತಸ್ತು, ಅಂದ, ಚಂದ, ವಯಸ್ಸು ಇದ್ಯಾವುದು ಗಣನೆಗೆ ಬರುವುದಿಲ್ಲ. ಗಂಡ ಹೆಂಡತಿ ನಡುವಿನ ಪ್ರೀತಿ ಮಾತ್ರ ಇಲ್ಲಿ ಮುಖ್ಯವಾಗುತ್ತದೆ. ಇದೇ ರೀತಿ ಪ್ರೀತಿಗೆ ಪ್ರಾಮುಖ್ಯತೆ ಕೊಟ್ಟು, ತಮಗಿಂತ 10 ಚಿಕ್ಕವರನ್ನು ಮದುವೆಯಾದ ಕನ್ನಡದ ಟಾಪ್ ನಟರು ಯಾರು ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ತಮಗಿಂತ 10 ವರ್ಷ ಚಿಕ್ಕವರನ್ನು ಮದುವೆಯಾದ ಕನ್ನಡದ ಟಾಪ್ ನಟರಲ್ಲಿ ಮೊದಲನೇ ಸ್ಥಾನದಲ್ಲಿ ಇರುವವರು ಅಣ್ಣಾವ್ರು, ಡಾ.ರಾಜ್ ಕುಮಾರ್ ಅವರು. ಇವರು ಕನ್ನಡದ ಮೇರು ನಟ, ಕನ್ನಡ ಚಿತ್ರರಂಗದ ಕಡೆ ವಿಶ್ವದ ಹಲವರು ತಿರುಗಿ ನೋಡುವ ಹಾಗೆ ಮಾಡಿದರು ಅಣ್ಣಾವ್ರು. ಭಾರತ ಚಿತ್ರರಂಗದ ಶ್ರೇಷ್ಠ ನಟ ಎನ್ನುವ ಹೆಗ್ಗಳಿಕೆಗೆ ಪಾತ್ರರಾದವರು. ಅಣ್ಣಾವ್ರು ಮದುವೆಯಾಗಿದ್ದು ಪಾರ್ವತಮ್ಮನವರ ಜೊತೆ. ಚಿತ್ರರಂಗಕ್ಕೆ ಬರುವ ಮೊದಲೇ ಅಣ್ಣಾವ್ರು ಮತ್ತು ಪಾರ್ವತಮ್ಮನವರ ಮದುವೆ ನಡೆದಿತ್ತು, ಗಂಡನಿಗೆ ತಕ್ಕ ಹೆಂಡತಿಯಾಗಿದ್ದ ಪಾರ್ವತಮ್ಮನವರು, ಕೊನೆಯವರೆಗೂ ಅಣ್ಣಾವ್ರನ್ನು ಪ್ರೀತಿಯಿಂದ ನೋಡಿಕೊಂಡರು.
ಎರಡನೆಯದಾಗಿ..ಟೈಫಾರ್ ಪ್ರಭಾಕರ್ ಅವರು.. ಕನ್ನಡದಲ್ಲಿ ವಿಲ್ಲನ್ ಆಗಿ ಮತ್ತು ನಾಯಕ ನಟನಾಗಿ ಯಶಸ್ಸು ಪಡೆದಿದ್ದ ಪ್ರಭಾಕರ್ ಅವರು, ತಾವು ಮಾಡುವ ಸ್ಟಂಟ್ ಗಳಿಂದ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಕನ್ನಡ ಮಾತ್ರವಲ್ಲದೆ ,ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಇವರು ಮೂರನೇ ಸಾರಿ ಮದುವೆಯಾಗಿದ್ದು ಅಂಜು ಅವರ ಜೊತೆ. ಪತ್ನಿ ಅಂಜು ಅವರಿಗಿಂತ 30 ವರ್ಷಕ್ಕೆ ದೊಡ್ಡವರಾಗಿದ್ದರು ನಟ ಟೈಗರ್ ಪ್ರಭಾಕರ್.
ಮೂರನೆಯದಾಗಿ.. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಜನರಿಗೆ ಒಳ್ಳೆಯದನ್ನು ಮಾಡಿರುವವರು ಹೆಚ್.ಡಿ.ಕುಮಾರಸ್ವಾಮಿ ಅವರು. ಪ್ರಸ್ತುತ ಜೆಡಿಎಸ್ ಪಕ್ಷದ ಮುಖಂಡರಾಗಿದ್ದಾರೆ. ಇವರು ಎರಡನೇ ಬಾರಿ ಮದುವೆಯಾಗಿದ್ದು ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ಅವರೊಡನೆ. ರಾಧಿಕಾ ಕುಮಾರಸ್ವಾಮಿ ಒಂದು ಕಾಲದಲ್ಲಿ ಕನ್ನಡದ ಬಹುಬೇಡಿಕೆಯ ನಟಿಯಾಗಿದ್ದರು. ರಾಧಿಕಾ ಅವರಿಗಿಂತ ಕುಮಾರಸ್ವಾಮಿ ಅವರು 27 ವರ್ಷಕ್ಕೆ ದೊಡ್ಡವರಾಗಿದ್ದಾರೆ..
ನಾಲ್ಕನೆಯದಾಗಿ ಚಂದನವನದ ಖ್ಯಾತ ನಟ ದುನಿಯಾ ವಿಜಯ್ ಅವರು. ಸ್ಟಂಟ್ ಗಳಲ್ಲಿ ಪಾಲ್ಗೊಳ್ಳುತ್ತಿದ್ದ ವಿಜಯ್ ಅವರು, ದುನಿಯಾ ಸಿನಿಮಾ ಮೂಲಕ ನಾಯಕನಾದರು. ಬ್ಯಾಕ್ ಟು ಬ್ಯಾಕ್ ಒಳ್ಳೆಯ ಸಿನಿಮಾಗಳಲ್ಲಿ ನಟಿಸಿ, ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡರು. ಇಂದು ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ ದುನಿಯಾ ವಿಜಯ್. ಇವರು ನಟಿ ಕೀರ್ತಿ ಅವರನ್ನು ಪ್ರೀತಿ ಎರಡನೇ ಮದುವೆಯಾದರು. ಕೀರ್ತಿ ಅವರಿಗಿಂತ ವಿಜಯ್ ಅವರು 18 ವರ್ಷಕ್ಕೆ ದೊಡ್ಡವರು.
ಚಂದನವನ ಕ್ಯೂಟ್ ಜೋಡಿ ಎನ್ನಿಸಿಕೊಂಡಿರುವವರು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕ ಉಪೇಂದ್ರ. ಇವರಿಬ್ಬರು ಹೆಚ್2ಓ ಸಿನಿಮಾದಲ್ಲಿ ಜೊತೆಯಾಗಿ ನಟಿಸಿ, ಪ್ರೀತಿಸಲು ಶುರು ಮಾಡಿದರು. ಇಂದು ಈ ದಂಪತಿ ಸುಖವಾದ ಜೀವನ ನಡೆಸುತ್ತಿದ್ದಾರೆ. ಪ್ರಿಯಾಂಕ ಅವರಿಗಿಂತ ಉಪೇಂದ್ರ ಅವರು 13 ವರ್ಷಕ್ಕೆ ದೊಡ್ಡವರಾಗಿದ್ದಾರೆ. ಕನ್ನಡ ರಾಪರ್ ಎಂದೇ ಖ್ಯಾತಿಯಾಗಿರುವ ಚಂದನ್ ಶೆಟ್ಟಿ ಅವರು, ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ತಮ್ಮ ಜೊತೆಗೆ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿವೇದಿತಾ ಅವರಿಗಿಂತ 12 ವರ್ಷಕ್ಕೆ ದೊಡ್ಡವರು ಚಂದನ್ ಶೆಟ್ಟಿ. ಈ ಜೋಡಿಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ.
Comments are closed.