ಹೊರಗೆ ಹೋಗಿ ಆಟವಾಡಬೇಕಿದ್ದ ಮಗು ಕೈಗೆ ಮೊಬೈಲ್ ನೀಡಿದ ಪೋಷಕರು, ಈಗ ಮಗು ಏನಾಗಿದೆ ಗೊತ್ತೇ??
ಇಂದಿನ ಪ್ರಪಂಚದಲ್ಲಿ ಎಲ್ಲವೂ ನಿಂತಿರುವುದು ಮೊಬೈಲ್ ಮೇಲೆ. ಒಬ್ಬ ವ್ಯಕ್ತಿಯ ಮೊಬೈಲ್ ನಲ್ಲಿ ಆತನ ಇಡೀ ಜೀವನದ ಎಲ್ಲಾ ವಿಚಾರಗಳು ಅಡಗಿರುತ್ತದೆ ಎಂದರೆ ತಪ್ಪಾಗುವಾದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಎಲ್ಲರೂ ಮೊಬೈಲ್ ಗಳಿಗೆ ದಾಸರಾಗಿದ್ದಾರೆ. ಮೊಬೈಲ್ ಬಳಕೆ ಹೆಚ್ಚಾಗಿ ಸಾಮಾನ್ಯ ಜ್ಞಾನ ಕಡಿಮೆ ಆಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಈಗಿನ ಕಾಲದಲ್ಲಿ ದೊಡ್ಡವರು ಮಾತ್ರವಲ್ಲದೆ ಪುಟ್ಟ ಮಕ್ಕಳು ಸಹ ಮೊಬೈಲ್ ಹೆಚ್ಚಾಗಿ ಬಳಸುತ್ತಾರೆ. ಇದನ್ನು ನೀವು ಸಹ ಗಮನಿಸಿರುತ್ತೀರಿ..
ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಳಲು ಶುರು ಮಾಡಿದರೆ, ಊಟ ಮಾಡುವುದಿಲ್ಲ ಎಂದರೆ, ಹಠ ಮಾಡಿದರೆ, ಎಲ್ಲದಕ್ಕೂ ಒಂದೇ ಉಪಾಯ ಮೊಬೈಲ್. ಮೊಬೈಲ್ ಗಳನ್ನು ಮಕ್ಕಳಿಗೆ ನೀಡಿ ಸಮಾಧಾನ ಮಾಡುತ್ತಾರೆ. ಮೊಬೈಲ್ ಗಳಲ್ಲಿ ಕಾರ್ಟೂನ್ ನೋಡಲು ಕೂರಿಸಿಬಿಡುತ್ತಾರೆ. ಮಕ್ಕಳು ಹೊರಗಡೆ ಹೋಗಿ ಆಟ ಆಡುತ್ತಿಲ್ಲ, ಬೇರೆ ಮಕ್ಕಳ ಜೊತೆಗೆ ಬೆರೆಯುತ್ತಿಲ್ಲ ಬದಲಾಗಿ, ಮನೆಯಲ್ಲಿ 4 ಗೋಡೆಗಳ ಮಧ್ಯೆ ಮೊಬೈಲ್ ಹಿಡಿದು ಕುಳಿತಿರುತ್ತಾರೆ. ಮೊಬೈಲ್ ನಲ್ಲಿ ಗೇಮ್ಸ್ ಆಡುತ್ತಾ ಕಾರ್ಟೂನ್ ನೋಡುತ್ತಾ ಕಾಲ ಕಳೆಯುತ್ತಾರೆ.
ಈ ರೀತಿಯ ಅಭ್ಯಾಸದಿಂದ ಒಂದು ಮಗುವಿನ ಸ್ಥಿತಿ ಏನಾಗಿದೆ ಗೊತ್ತಾ..ಪುಟ್ಟ ಮಗುವಿನ ತಂದೆ ತಾಯಿ ಇಬ್ಬರು ಕೆಲಸ ಮಾಡುವವರು, ತಾಯಿ ಬ್ಯಾಂಕ್ ಉದ್ಯೋಗಿ, ತಂದೆ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದರು. ಪ್ರತಿದಿನ ಆಫೀಸ್ ಗೆ ಹೋಗುವ ಮೊದಲು ಮಗುವಿಗೆ ತಿಂಡಿ ತಿನ್ನಿಸಿ ಹೋಗುತ್ತಿದ್ದರು ಮಗುವಿನ ತಾಯಿ. ಹಾಗೆ ತಿಂಡಿ ತಿನ್ನಿಸುವಾಗ ಗಲಾಟೆ ಮಾಡದೆ ಇರಲು ಕೈಗೆ ಮೊಬೈಲ್ ಕೊಡುತ್ತಿದ್ದರು. ಪ್ರತಿದಿನ ಮಗು ತಿಂಡಿ ತಿನ್ನುವಾಗ ಮೊಬೈಲ್ ನಲ್ಲಿ ಕಾರ್ಟೂನ್ ನೋಡುತ್ತಾ ಆ ಪಾತ್ರಗಳ ಹಾಗೆಯೇ ನಟಿಸುತ್ತಿತ್ತು.
ದಿನೇ ದಿನೇ ಈ ಅಭ್ಯಾಸ ಜಾಸ್ತಿಯಾಗಿ, ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಿತು, ಮೊಬೈಲ್ ನೋಡುವುದು ಹೆಚ್ಚಾಗಿ, ಮಗುವಿನ ಮೆದುಳಿನಲ್ಲಿ ಹೈಪರ್ ಆಕ್ಟಿವಿಟಿ ಶುರುವಾಯಿತು. ರಾತ್ರಿ ಮಲಗಿರುವಾಗ ನಿದ್ದೆಯಲ್ಲಿ ಕನವರಿಸುವುದು, ಕೈಕಾಲು ಅಡಿಸುವುದು ಮಾಡಲು ಶುರು ಮಾಡಿತು. ನಂತರ ಇದು ಹೆಚ್ಚಾಗಿ, ಮಗುವಿನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿ ಈಗ ಮಗುವಿಗೆ ಫಿಟ್ಸ್ ಬರಲು ಶುರುವಾಗಿದೆ. ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಮಕ್ಕಳು ಹೆಚ್ಚಾಗಿ ಮೊಬೈಲ್ ಬಳಸುವುದರಿಂದ ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ.
ಹಣ ಸಂಪಾದನೆ ಮಾಡುವುದು ಮುಖ್ಯವೇ, ಆದರೆ ಅದಕ್ಕಿಂತ ಮುಖ್ಯವಾದದ್ದು ಮಕ್ಕಳ ಆರೋಗ್ಯ ಮತ್ತು ಮಕ್ಕಳ ಜೀವ. ಪೋಷಕರು ಕೆಲಸದ ಒತ್ತಡದಲ್ಲಿ ಮಕ್ಕಳ ಮೇಲೆ ಗಮನ ಹರಿಸುವುದನ್ನು ಕಡಿಮೆ ಮಾಡಿದ್ದಾರೆ. ಆದರೆ ಆ ರೀತಿ ಮಾಡದೆ, ಮಕ್ಕಳ ಕಡೆಗೆ ಹೆಚ್ಚಿನ ಗಮನ ಕೊಟ್ಟು, ಮಕ್ಕಳ ಜೊತೆ ಆಟವಾಡಿ, ಮಕ್ಕಳನ್ನು ಬೆರೆಯಲು ಬಿಟ್ಟು, ಮೊಬೈಲ್ ಕೊಡುವುದನ್ನು ಕಡಿಮೆ ಮಾಡಿದರೆ, ಇಂತಹ ಘಟನೆಗಳು ನಡೆಯುವುದಿಲ್ಲ.
Comments are closed.