Neer Dose Karnataka
Take a fresh look at your lifestyle.

ವಿಷ್ಣುದಾದರ ಕೋಟಿಗೊಬ್ಬ ಸಿನಿಮಾ ಬಜೆಟ್ ಎಷ್ಟು ಗೊತ್ತೇ? ಕೋಟಿ ಕೋಟಿ ಈಗ ಸುರಿಯುತ್ತಿರುವಾಗ ಅಂದು ನಡೆದಿದ್ದೇನು ಗೊತ್ತೇ??

ಡಾ.ವಿಷ್ಣುವರ್ಧನ್ ಅಂದರೆ ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಅತ್ಯಂತ ಪ್ರತಿಭಾವಂತ ನಟರಲ್ಲಿ ವಿಷ್ಣುವರ್ಧನ್ ರವರ ಹೆಸರು ಇದ್ದೆ ಇರುತ್ತದೆ. ಕನ್ನಡದ ಮೇರು ನಟರಾಗಿರುವ ಇವರು ಸುಮಾರು 200 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ವಂಶವೃಕ್ಷ ಸಿನಿಮಾದಿಂದ ಶುರುವಾದ ಇವರ ಪಯಣ ಆಪ್ತರಕ್ಷಕ ಸಿನಿಮಾ ವರೆಗೂ ನಡೆಯಿತು. ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದ ಇವರು ಡಿಸೆಂಬರ್ 30, 2010 ರಂದು ಇಹಲೋಕ ತ್ಯಜಿಸಿದರು. ಆ ಕಾಲದಲ್ಲಿ ಸಾಹಸಸಿಂಹ, ಆಂಗ್ರಿ ಯಂಗ್ ಮ್ಯಾನ್ ಎಂದೇ ಪ್ರಸಿದ್ಧಿ ಹೊಂದಿದ್ದರು.

ಇನ್ನು ಡಾ.ವಿಷ್ಣುದಾದ ಹಲವಾರು ಸೂಪರ್ ಡೂಪರ್ ಹಿಟ್ ಸಿನಿಮಾಗಳಲ್ಲಿ ಕೋಟಿಗೊಬ್ಬ ಕೂಡ ಒಂದು ಆದರೆ ಎಲ್ಲದಕ್ಕಿಂತ ಈ ಸಿನಿಮಾ ಶ್ರೇಷ್ಠ ಸ್ಥಾನದಲ್ಲಿ ನಿಲ್ಲುತ್ತದೆ. ಯಾಕೆಂದರೆ ಈ ಸಿನೆಮಾಗೆ ಅದರದೇ ಆದಂತಹ ವಿಶಿಷ್ಟ ಕಥಾಹಂದರವನ್ನು ಹೊಂದಿದ್ದು ಒಂದು ಕಡೆ ಯಾದರೆ ಇನ್ನು ಈ ಸಿನಿಮಾದಲ್ಲಿ ಡಾ.ವಿಷ್ಣುವರ್ಧನ್ ಅವರು ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ, ಅವರಿಗೆ ನೀಡಿರುವ ಪಾತ್ರಕ್ಕೆ ಜೀವ ತುಂಬಿ ಸಿನಿಮಾವನ್ನು ಗೆಲ್ಲಿಸಿಕೊಟ್ಟರು ಎಂದರೆ ತಪ್ಪಾಗಲಾರದು. ಕೋಟಿಗೊಬ್ಬ ಸಿನಿಮಾ ನಿರ್ಮಾಣ ಮಾಡಿದ ನಿರ್ಮಾಪಕರು ಒಂದು ಮಾಧ್ಯಮ ಸಂದರ್ಶದಲ್ಲಿ ಮಾತನಾಡುವಾಗ ಕೋಟಿಗೊಬ್ಬ ಸಿನಿಮಾ ಕುರಿತು ಹಾಗೂ ಈ ಸಿನಿಮಾ ಶೂಟಿಂಗ್ ನಡುವೆ ನಡೆದ ಕೆಲವು ಘಟನೆಗಳ ಬಗ್ಗೆ ಮೆಲುಕು ಹಾಕುತ್ತಾ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಕೋಟಿಗೊಬ್ಬ ಹಿಂದಿಯ ಭಾಷೆಯ ರಿಮೇಕ್, ಹಿಂದಿ ಭಾಷೆಯ ಸಿನಿಮಾ ಆಗಿದ್ದರಿಂದ ಈ ಸಿನಿಮಾ ಮೇಲೆ ಜನರಿಗೆ ಅಷ್ಟಾಗಿ ಆಸಕ್ತಿ ಇರುವುದಿಲ್ಲ ಎಂದು ಚಿತ್ರತಂಡ ಊಹಿಸಿತ್ತು. ಆದರೆ ಬಿಡುಗಡೆಯಾದ 25 ಚಿತ್ರ ಮಂದಿರಗಳಲ್ಲಿಯೂ ಕೋಟಿಗೊಬ್ಬ ಚಿತ್ರ 100 ದಿನಗಳ ಕಾಲ ಭರ್ಜರಿಯಾದ ಪ್ರದರ್ಶನ ಕಂಡಿತು. ಆ ಕಾಲದಲ್ಲಿ ಈ ತರಹದ ಯಶಸ್ಸು ಯಾವ ಸಿನೆಮಾ ಕೂಡ ಕಂಡಿರಲಿಲ್ಲ. ಹಾಗಾಗಿ ಕೋಟಿಗೊಬ್ಬ ಸಕ್ಸಸ್ ಪಾರ್ಟಿ ಮಾಡಿ, ಆ ಪಾರ್ಟಿಗೆ ಬಂದ ಅತಿಥಿಗಳಿಗೆ ಬೆಳ್ಳಿ ದೀಪವನ್ನು ಉಡುಗೊರೆಯಾಗಿ ನೀಡಿಲಾಗಿತ್ತು.ಇನ್ನು ಈ ಸಿನಿಮಾ ನಿರ್ಮಾಣ ಮಾಡಲು ನಿರ್ಮಾಪಕರು 2 ಕೋಟಿ 10 ಲಕ್ಷ ಖರ್ಚು ಮಾಡಿದ್ದರು. ಅಷ್ಟು ಹಣವನ್ನು ಈಗಿನ ಕಾಲಕ್ಕೆ ಲೆಕ್ಕ ಹಾಕಿದರೆ ಸರಿಸುಮಾರು 30 ರಿಂದ 40 ಕೋಟಿ ವೆಚ್ಚ ಬೀಳಬಹುದು ಎಂದು ನಿರ್ಮಾಪಕರು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.

Comments are closed.