ಏರ್ಟೆಲ್ ಗೆ ಠಕ್ಕರ್ ಕೊಡಲು ಹೊಸ ಪ್ಲಾನ್ಸ್ ಬಿಡುಗಡೆ ಮಾಡಿದ ಜಿಯೋ. ಹೇಗಿದೆ ಗೊತ್ತೇ ಹೊಸ ಪ್ಲಾನ್ಸ್??
ರಿಲಯನ್ಸ್ ಜಿಯೋ ಸಂಸ್ಥೆ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆಯನ್ನು ಹೊರತಂದಿದೆ. ಈ ಹೊಸ ಪ್ಲಾನ್ ಬೇರೆ ಎಲ್ಲಾ ಪ್ಲಾನ್ ಗಳಿಗಿಂತ ಭಿನ್ನವಾಗಿದೆ. ಪೋಸ್ಟ್ ಪೇಯ್ಡ್ ಯೋಜನೆಯ ಹಾಗೆಯೇ ಪ್ರಿಪೇಯ್ಡ್ ಗ್ರಾಹಕರಿಗು ಹೊಸ ಯೋಜನೆಯನ್ನು ಹೊತ್ತು ತಂದಿದೆ ಜಿಯೋ. ಈ ಹೊಸ ಪ್ಲಾನ್ ಇಂದ ಗ್ರಾಹಕರಿಗೆ ಉಳಿತಾಯದ ಜೊತೆಗೆ ಲಾಭವೂ ಆಗುತ್ತದೆ. ಯಾವುದು ಈ ಹೊಸ ಪ್ಲಾನ್? ಹೇಗೆ ಬಳಕೆಯಾಗುತ್ತದೆ? ತಿಳಿಸುತ್ತೇವೆ ನೋಡಿ..
ರಿಲಯನ್ಸ್ ಜಿಯೋ ತಂದಿರುವ ಹೊಸ ಪ್ಲಾನ್, ರೂ.259 ರ ರೀಚಾರ್ಜ್ ಪ್ಲಾನ್. ಇದರ ವಿಶೇಷತೆ ಏನೆಂದರೆ, ಈ ಪ್ಲಾನ್ ತಿಂಗಳ ಪೂರ್ತಿ ಇರುತ್ತದೆ. ಅಂದರೆ, 28 ದಿನಗಳಲ್ಲ, ಪೂರ್ತಿ 30 ದಿನಗಳು ಇರುತ್ತದೆ. ಈ ಪ್ಲಾನ್ ನ ಪ್ರಕಾರ, ನೀವು ರೀಚಾರ್ಜ್ ಮಾಡಿದ ದಿನದಿಂದ ಹಿಡಿದು, ಮುಂದಿನ ತಿಂಗಳು ಅದೇ ಡೇಟ್ ವರೆಗೂ ಪ್ಲಾನ್ ಇರುತ್ತದೆ. ಆ ಡೇಟ್ ನಲ್ಲೇ ಪ್ಲಾನ್ ರಿನ್ಯೂ ಆಗಲಿದೆ. ಪೋಸ್ಟ್ ಪೇಯ್ಡ್ ರೀತಿಯ ಪ್ಲಾನ್ ಇದಾಗಿದ್ದು, ಗ್ರಾಹಕರಿಗೆ ಒಳಿತಾಗಿದೆ. ಪ್ರತಿದಿನ 1.5ಜಿಬಿ ಡೇಟಾ, ಫ್ರೀ ಸಿಗಲಿದೆ. 1.5ಜಿಬಿ ಮುಗಿದ ನಂತರ, 65ಕೆಬಿಪಿಎಸ್ ಸ್ಪೀಡ್ ನಲ್ಲಿ ವರ್ಕ್ ಆಗಲಿದೆ.
ಜೊತೆಗೆ ಅನಿಯಮಿತ ಕರೆಗಳು ಇರಲಿದ್ದು, ಪ್ರತಿದಿನ 100 ಎಸ್.ಎಂ.ಎಸ್ ಫ್ರೀ ಸಿಗಲಿದೆ.
ಇದಲ್ಲದೆ, ಜಿಯೋ ಅಪ್ಲಿಕೇಶನ್ ಗಳಿಗೆ ಚಂದಾದಾರಗುತ್ತೀರಿ. ಈ ಪ್ಲಾನ್ ನ ಪ್ರಕಾರ ಒಂದು ವೇಳೆ, ನೀವು ತಪ್ಪಾಗಿ ಎರಡು ಸಾರಿ ರೀಚಾರ್ಜ್ ಮಾಡಿದರೆ, ನಿಮ್ಮ ಹಣ ವೇಸ್ಟ್ ಆಗುವುದಿಲ್ಲ, ಬದಲಾಗಿ, ಎರಡನೆಯ ಬಾರಿ ಮಾಡಿದ ರೀಚಾರ್ಜ್, ಮುಂದಿನ ತಿಂಗಳಿಗೆ ಮುಂದುವರೆಯುತ್ತದೆ. ಒಂದುವೇಳೆ, ತಿಂಗಳ ವ್ಯಾಲಿಡಿಟಿ ಮುಗಿಯಲು ಇನ್ನು ಸಮಯ ಇದ್ದಾಗಲೇ ನೀವು ರೀಚಾರ್ಜ್ ಮಾಡಿಬಿಟ್ಟರೆ, ಅದರಿಂದಲೂ ಏನು ತೊಂದರೆ ಆಗುವುದಿಲ್ಲ, ವ್ಯಾಲಿಡಿಟಿ ಮುಗಿದ ನಂತರವೇ ರೀಚಾರ್ಜ್ ಕಂಟಿನ್ಯು ಆಗುತ್ತದೆ. ಒಂದು ವೇಳೆ ಒಂದೇ ಸಲ 12 ಬಾರಿ ರೂ.259ಕ್ಕೆ ರೀಚಾರ್ಜ್ ಮಾಡಿದರೆ, ಒಂದು ವರ್ಷದ ವರೆಗೂ ಮುಂದುವರೆಯುತ್ತದೆ. ಹೊಸ ಪ್ಲಾನ್ ಈ ರೀತಿ ಇತ್ತು, ಅದೇ ಮೊತ್ತಕ್ಕೆ, 3 ದಿನಗಳು ಎಕ್ಟ್ರಾ ವ್ಯಾಲಿಡಿಟಿ ಸಿಗಲಿದೆ. ನೀವು ಜಿಯೋ ಗ್ರಾಹಕರಾಗಿದ್ದಲ್ಲಿ ತಪ್ಪದೇ ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಿ, ಉಪಯೋಗ ಪಡೆಯಿರಿ..
Comments are closed.