Neer Dose Karnataka
Take a fresh look at your lifestyle.

ಐದಾರು ವರ್ಷಗಳಿಂದ ಇವುಗಳನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಕೊರಗಿದ್ದೇನೆ ಎಂದು ಭಾವುಕರಾಗಿ ಮಾತನಾಡಿದ ವಿರಾಟ್ ಕೋಹ್ಲಿ. ಅಷ್ಟಕ್ಕೂ ನಡೆದಿದ್ದೇನು ಗೊತ್ತೇ??

ರನ್ ಮಷಿನ್, ಕಿಂಗ್ ಕೋಹ್ಲಿ ಎಂದೇ ಭಾರತ ಕ್ರಿಕೆಟ್ ಲೋಕದಲ್ಲಿ ಹೆಸರು ಮಾಡಿರುವವರು ಕ್ರಿಕೆಟರ್ ವಿರಾಟ್ ಕೋಹ್ಲಿ. ಇವರ ಕ್ರಿಕೆಟ್ ಆಟದ ವೈಖರಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂಡಿಯನ್ ಕ್ರಿಕೆಟ್ ಟೀಮ್ ಕ್ಯಾಪ್ಟನ್ ಆಗಿ, ಹಲವು ಟ್ರೋಫಿ ಅವಾರ್ಡ್ ಗಳನ್ನು ಭಾರತಕ್ಕೆ ತಂದಿದ್ದಾರೆ ವಿರಾಟ್. ಆದರೆ ಸುಮಾರು ಐದಾರು ವರ್ಷಗಳ ಹಿಂದೆ ನಡೆದ ಅದೊಂದು ಘಟನೆ ವಿರಾಟ್ ಕೋಹ್ಲಿ ಅವರ ಜೀವನದಲ್ಲಿ ಮರೆಯಲಾಗದ ನೋವಿನ ಘಟನೆ. ಆ ವಿಚಾರದ ಬಗ್ಗೆ ವಿರಾಟ್ ಕೋಹ್ಲಿ ಅವರು ಆರ್.ಸಿ.ಬಿ ಕ್ಯಾಂಪ್ ನಲ್ಲಿ ಮಾತನಾಡಿದ್ದಾರೆ.

ಈ ಎರಡು ಘಟನೆಗಳು ನಡೆದಿದ್ದು 2016ರಲ್ಲಿ, ಆ ವರ್ಷ ವಿರಾಟ್ ಕೋಹ್ಲಿ ಅವರು ಟಿ20 ವಿಶ್ವಕಪ್ ಪಂದ್ಯಗಳ ಕ್ಯಾಪ್ಟನ್ ಆಗಿದ್ದರು, ರನ್ ಗಳ ಸರದಾರ ಎಂದೇ ಕರೆಸಿಕೊಳ್ಳುತ್ತಿದ್ದ ವಿರಾಟ್ ಕೋಹ್ಲಿ ಅವರು, ಜೀವನದಲ್ಲಿ ಹಾರ್ಟ್ ಬ್ರೇಕಿಂಗ್ ಎನ್ನಿಸಿಕೊಂಡ ಎರಡು ಪಂದ್ಯಗಳು ಸಹ ನಡೆದದ್ದು, 2016ರಲ್ಲಿ. ಆ ವರ್ಷ ವಿರಾಟ್ ಕೋಹ್ಲಿ ಅವರು ಕಂಡ ಎರಡು ಕನಸುಗಳು ಸಹ ನನಸಾಗಲಿಲ್ಲ. ಹಾಗಿದ್ದರೆ ಆ ಎರಡು ಘಟನೆಗಳು ಯಾವುವು ಗೊತ್ತಾ? ವಿರಾಟ್ ಅವರು ಹೇಳಿದ್ದು ಹೀಗೆ..

ಮೊದಲನೆಯದು..ಟಿ20 ವಿಶ್ವಕಪ್ ಸೆಮಿಫೈನಲ್ಸ್ ಸೋಲು..
2016ರಲ್ಲಿ ಟಿ20 ವಿಶ್ವಕಪ್ ನಡೆದದ್ದು ಭಾರತದಲ್ಲಿ, ಆ ವರ್ಷ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲುತ್ತದೆ ಎಂದು ಕ್ರಿಕೆಟ್ ದಿಗ್ಗಜರು ಭವಿಷ್ಯ ನುಡಿದರು. ಅದೇ ರೀತಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಿ, ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದ್ದು, ಸೆಮಿ ಫೈನಲ್ಸ್ ತಲುಪಿತ್ತು. ಸೆಮಿಫೈನಲ್ಸ್ ಮ್ಯಾಚ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೀಮ್ ಇಂಡಿಯಾ ಗೆಲ್ಲೆಬೇಕಿತ್ತು. ವಿರಾಟ್ ಕೋಹ್ಲಿ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 2 ವಿಕೆಟ್ ನಷ್ಟಕ್ಕೆ 192 ರನ್ ಗಳನ್ನು ಗಳಿಸಲಾಗಿತ್ತು.

ಈ ಸ್ಕೋರ್ ಅನ್ನು ಭಾರತ ತಂಡ ಡಿಫೆಂಡ್ ಮಾಡಿಕೊಳ್ಳಬೇಕಿತ್ತು. ವೆಸ್ಟ್ ಇಂಡೀಸ್ ತಂಡ ಆರಂಭದಲ್ಲಿ, ವಿಕೆಟ್ ಗಳನ್ನು ಕೈಚೆಲ್ಲಿ ಕುಳಿತರು ಸಹ, ನಂತರ ಬಂದ ಆಂಡ್ರೆ ರಸೆಲ್, ಲಿಂಡಲ್ ಸಿಮನ್ಸ್ ಬ್ಯಾಟಿಂಗ್ ಅಬ್ಬರಕ್ಕೆ ಭಾರತದ ಕ್ರಿಕೆಟ್ ತಂಡ ನಲುಗಿ ಹೋಯಿತು. ಕೊನೆಗೆ ತಾಯ್ನಾಡಿನಲ್ಲೇ ಭಾರತ ತಂಡ ಸೋಲು ಕಾಣುವ ಹಾಗಾಯಿತು. ಅಂದು ಆದ ಮುಖಭಂಗ ಅವಮಾನವನ್ನು ವಿರಾಟ್ ಕೋಹ್ಲಿ ಅವರು ಇಂದಿಗೂ ಸಹ ಮರೆತಿಲ್ಲ. ಆ ಮ್ಯಾಚ್ ಸೋತ ನೋವು ಇಂದಿಗೂ ವಿರಾಟ್ ಅವರನ್ನು ಕಾಡುತ್ತದೆ.

ಎರಡನೆಯದು ಐಪಿಎಲ್ ಫೈನಲ್ಸ್ ಸೋಲು.. ವಿಶ್ವಕಪ್ ನಲ್ಲಿ ಸೋಲು ಕಂಡ ಕೋಹ್ಲಿ ಅವರಿಗೆ ಐಪಿಎಲ್ ನಲ್ಲಾದರು ಗೆಲುವು ಕಾಣಲೇಬೇಕು ಎನ್ನುವ ಹಠ ಛಲ ಇತ್ತು. ಆ ವರ್ಷ ವಿರಾಟ್ ಅವರು ಫಾರ್ಮ್ ನಲ್ಲಿದ್ದು, 973 ರನ್ ಗಳನ್ನು ಐಪಿಎಲ್ ನಲ್ಲಿ ಗಳಿಸಿದರು. ವಿರಾಟ್ ಅವರ ಪರಿಶ್ರಮದಿಂದ ಸೆಮಿಫೈನಲ್ಸ್ ನಲ್ಲಿ ಗುಜರಾತ್ ತಂಡದ ಪರವಾಗಿ ಆಡಿ ಫೈನಲ್ಸ್ ತಲುಪಿತು ಆರ್.ಸಿ.ಬಿ. ಈ ಸಲ ಕಪ್ ನಮ್ಮದೇ ಎನ್ನುವ ವಿಶ್ವಾಸವನ್ನು ವಿರಾಟ್ ಕೋಹ್ಲಿ ತರಿಸಿದ್ದರು. ಆದರೆ ಫೈನಲ್ಸ್ ನಲ್ಲಿ ಎಲ್ಲವೂ ಉಲ್ಟಾ ಆಯಿತು.

ಫೈನಲ್ಸ್ ನಲ್ಲಿ ಆರ್.ಸಿ.ಬಿ ತಂಡ ಡೇವಿಡ್ ವಾರ್ನರ್ ನಾಯಕರಾಗಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಫೈಟ್ ಮಾಡಬೇಕಿತ್ತು. ಅಂದು ಹೈದರಾಬಾದ್ ತಂಡ, 7 ವಿಕೆಟ್ ಗಳ ನಷ್ಟಕ್ಕೆ 208 ರನ್ ಗಳನ್ನು ಗಳಿಸಿತು. ಈ ರನ್ ಗಳನ್ನು ಚೇಸ್ ಮಾಡುವಲ್ಲಿ, ಆರ್.ಸಿ.ಬಿ ತಂಡದ ಪರವಾಗಿ ವಿರಾಟ್ ಕೋಹ್ಲಿ ಮತ್ತು ಕ್ರಿಸ್ ಗೇಲ್ ಅವರ ಬಲಿಷ್ಠ ಬ್ಯಾಟಿಂಗ್ ಇದ್ದರು ಸಹ, 8 ರನ್ ಗಳಿಂದ ಆರ್.ಸಿ.ಬಿ ತಂಡ ಸೋತಿತು. ಈ ಎರಡು ಸೋಲುಗಳನ್ನು ವಿರಾಟ್ ಕೋಹ್ಲಿ ಅವರಿಂದ ಇಂದಿಗೂ ಮರೆಯಲು ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ, 2016 ರಲ್ಲಿ ವಿಶ್ವಕಪ್ ಮತ್ತು ಐಪಿಎಲ್ ಎರಡನ್ನು ಗೆಲ್ಲಲಿಲ್ಲ ಎನ್ನುವ ನೋವು ವಿರಾಟ್ ಅವರಿಗೆ ಇಂದಿಗೂ ಇದೆ. 

Comments are closed.