ವಯಸ್ಸಿನಲ್ಲಿ ತಮಗಿಂತ ಚಿಕ್ಕವರನ್ನು ಮದುವೆ ಆಗಿರುವ ಕನ್ನಡ ನಟಿಯರು ಇವರೇ ನೋಡಿ! ಯಾರ್ ಯಾರ್ ಗೊತ್ತಾ??
ಚಿತ್ರರಂಗದಲ್ಲಿ ನಾಯಕರು ಮಾತ್ರವಲ್ಲ, ನಾಯಕಿಯರಿಗೂ ಅಷ್ಟೇ ಪ್ರಾಧಾನ್ಯತೆ ಇದೆ. ಆಗಿನಿಂದ ಈಗಿನವರೆಗೂ ನಾಯಕಿಯರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿ ಬಳಗ, ಐಡೆಂಟಿಟಿ ಎಲ್ಲವೂ ಇದೆ. ಕೆಲವು ನಾಯಕಿಯರನ್ನು ಲಕ್ಕಿ ಹೀರೋಯಿನ್ ಗಳು ಎಂದು ಸಹ ಕರೆಯುತ್ತಾರೆ. ಕೆಲವು ನಾಯಕಿಯರು ಹೀರೋ ಗಳಷ್ಟೇ ಸಂಭಾವನೆಯನ್ನು ಸಹ ಪಡೆದುಕೊಳ್ಳುತ್ತಿದ್ದರು. ಹೆಣ್ಣು ಸ್ವಾವಲಂಬಿಯಾಗಿ ಬದುಕಬಹುದು ಎನ್ನುವುದಕ್ಕೆ ಉದಾಹರಣೆಯಾಗಿದ್ದಾರೆ. ಕೆಲವು ನಾಯಕಿಯರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಸಾಧಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದಿಂದ ಬಾಲಿವುಡ್ ವರೆಗೂ ಕೆಲವು ನಾಯಕಿಯರು ತಮಗಿಂತ ಚಿಕ್ಕವರ ಜೊತೆಗೆ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂತಹ ನಾಯಕಿಯರು ಯಾರು ಗೊತ್ತಾ? ಇಂದು ತಿಳಿಸುತ್ತೇವೆ..
ಮೊದಲಿಗೆ.. ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್. ಮೂಲತಃ ಕರಾವಳಿ ಪ್ರದೇಶದವರಾದ ರಾಧಿಕಾ ಪಂಡಿತ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದಾರೆ. ನಟ ಯಶ್ ಅವರನ್ನು ಬಹಳ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದರು ರಾಧಿಕಾ ಪಂಡಿತ್. ಯಶ್ ಅವರಿಗಿಂತ ರಾಧಿಕಾ ಪಂಡಿತ್, ಎರಡು ವರ್ಷಕ್ಕೆ ಚಿಕ್ಕವರು, ಆದರೆ ಇವರ ನಡುವೆ ವಯಸ್ಸಿನ ವ್ಯತ್ಯಾಸ ಬರದೆ, ಬಹಳ ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈ ದಂಪರಿಗೆ ಇಬ್ಬರು ಸುಂದರವಾದ ಮಕ್ಕಳು ಸಹ ಇದ್ದಾರೆ.
ಕರ್ನಾಟಕದ ಮಂಗಳೂರಿನಲ್ಲಿ ಹುಟ್ಟಿ, ಬಾಲಿವುಡ್ ನಲ್ಲಿ ಮಿಂಚಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ ಶಿಲ್ಪಾ ಶೆಟ್ಟಿ. ಕನ್ನಡದಲ್ಲೂ ಕೆಲವು ಸಿನಿಮಾಗಳಲ್ಲಿ ನಟಿಸಿ, ಇಲ್ಲಿನ ಜನರಿಗೂ ಹತ್ತಿರವಾಗಿದ್ದರು ಶಿಲ್ಪಾ ಶೆಟ್ಟಿ. ಶಿಲ್ಪಾ ಶೆಟ್ಟಿ ಅವರು ಉದ್ಯಮಿ ರಾಜ್ ಕುಂದ್ರಾ ಅವರ ಜೊತೆ ಮದುವೆಯಾದರು. ಶಿಲ್ಪಾ ಶೆಟ್ಟಿ ಅವರಿಗಿಂತ ರಾಜ್ ಕುಂದ್ರಾ ಎರಡು ವರ್ಷಕ್ಕೆ ಚಿಕ್ಕವರು ಎನ್ನುವ ವಿಚಾರವನ್ನು ನೀವು ತಿಳಿದುಕೊಳ್ಳಬೇಕು. ಈ ದಂಪತಿಗೆ ಒಬ್ಬ ಮಗನಿದ್ದು, ಇತ್ತೀಚೆಗೆ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನು ಪಡೆದರು ಶಿಲ್ಪಾ ಶೆಟ್ಟಿ.
ಕನ್ನಡ ಮತ್ತು ತಮಿಳು ಚಿತ್ರರಂಗದಲ್ಲಿ ಹೆಸರುವಾಸಿಯಾಗಿರುವವರು ನಟಿ ಛಾಯಾ ಸಿಂಗ್. ಕನ್ನಡ ಚಿತ್ರರಂಗದ ಮೂಲಕ ಕೆರಿಯರ್ ಶುರುಮಾಡಿ, ನಂತರ ಬೇರೆ ಭಾಷೆಗಳಲ್ಲಿ ಮಿಂಚಿದರು. ಈ ನಟಿ ತಮಿಳಿನ ಖ್ಯಾತ ನಟ ಕೃಷ್ಣ ಅವರೊಡನೆ ಮದುವೆಯಾದರು. ಕೃಷ್ಣ ಅವರು ಛಾಯಾ ಸಿಂಗ್ ಅವರಿಗಿಂತ ಚಿಕ್ಕವರಾಗಿದ್ದಾರೆ. ಇತ್ತೀಚೆಗೆ ಕನ್ನಡದಲ್ಲಿ ರಥಾವರ ಸಿನಿಮಾದಲ್ಲಿ ನಟಿಸಿದ್ದರು ಛಾಯಾ ಸಿಂಗ್.
ಕನ್ನಡದಲ್ಲಿ ಕುರುಕ್ಷೇತ್ರ ಸಿನಿಮಾದ ದ್ರೌಪದಿ ಪಾತ್ರದ ಮೂಲಕ ಜನಮನ ಗೆದ್ದವರು ನಟಿ ಸ್ನೇಹ, ಈ ನಟಿ ಒಂದು ಕಾಲದಲ್ಲಿ ತಮಿಳು ಚಿತ್ರರಂದಲ್ಲಿ ಬಹಳ ಫೇಮಸ್ ಆಗಿದ್ದರು. ಇವರು ಮದುವೆ ಆಗಿರುವುದು ತಮಿಳಿನ ಖ್ಯಾತ ನಟ ಪ್ರಸನ್ನ ಅವರೊಡನೆ. ಪ್ರಸನ್ನ ಅವರು ಸ್ನೇಹ ಅವರಿಗಿಂತ ಚಿಕ್ಕವರು, ಆದರೆ ಇಂದು ಒಳ್ಳೆಯ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.
ಕರ್ನಾಟಕದ ಬೆಡಗಿ ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಅವರು ಯಾರಿಗೆ ತಾನೇ ಗೊತ್ತಿಲ್ಲ. ಕರ್ನಾಟಕದ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದರು. ದಕ್ಷಿಣ ಭಾರತ ಮತ್ತು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ, ಬಹುಬೇಡಿಕೆಯ ನಟಿಯಾಗಿದ್ದರು ಐಶ್ವರ್ಯ ರೈ. ಈ ನಟಿ ಬಾಲಿವುಡ್ ನ ಹಿರಿಯನಟ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರ ಜೊತೆ ಮದುವೆಯಾದರು. ಐಶ್ವರ್ಯ ಅವರಿಗಿಂತ ಅಭಿಷೇಕ್ ಬಚ್ಚನ್ ಎರಡು ವರ್ಷಕ್ಕೆ ಚಿಕ್ಕವರಾಗಿದ್ದಾರೆ.
ಕನ್ನಡದ ಮತ್ತೊಬ್ಬ ಖ್ಯಾತ ನಟಿ ಅನು ಪ್ರಭಾಕರ್. ಮುದ್ದು ಮುಖದ ಚೆಲುವೆ ಅನು ಪ್ರಭಾಕರ್ ಅವರು ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನು ಪ್ರಭಾಕರ್ ಅವರು ನಟ ರಘು ಮುಖರ್ಜಿ ಅವರೊಡನೆ ವಿವಾಹವಾದರು. ರಘು ಅವರು ಅನು ಅವರಿಗಿಂತ ಎರಡು ವರ್ಷಕ್ಕೆ ಚಿಕ್ಕವರು..
ಬಾಲಿವುಡ್ ಮತ್ತು ಸೌತ್ ಸಿನಿದುನಿಯಾ ಎರಡು ಕಡೆ ಫೇಮಸ್ ಆಗಿದ್ದವರು ನಟಿ ನಮ್ರತಾ ಶಿರೋಡ್ಕರ್. ಇವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಅವರೊಡನೆ ಮದುವೆಯಾದರು. ನಮ್ರತಾ ಅವರಿಗಿಂತ ಮಹೇಶ್ ಬಾಬು ಅವರು ಎರಡು ವರ್ಷಕ್ಕೆ ಚಿಕ್ಕವರಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಸುಂದರವಾದ ಸಂಸಾರ ನಡೆಸುತ್ತಿದ್ದಾರೆ.
ಈ ನಟಿಯರು ವೃತ್ತಿ ಜೀವನದಲ್ಲೂ ಸಾಧಿಸಿ, ನಿಜ ಜೀವನದಲ್ಲಿ ತಮಗಿಂತ ಚಿಕ್ಕ ವಯಸ್ಸಿನವರನ್ನು ಮದುವೆಯಾಗಿ ಇಂದು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮದುವೆಯಾಗಲು ವಯಸ್ಸಿಗಿಂತ ಮನಸ್ಸು ಮುಖ್ಯ ಎನ್ನುವುದನ್ನು ಈ ಜೋಡಿ ತೋರಿಸಿಕೊಟ್ಟಿದೆ. ಇವರಲ್ಲಿ ನಿಮ್ಮ ಫೇವರೆಟ್ ಜೋಡಿ ಯಾರೆಂದು ಕಮೆಂಟ್ಸ್ ಮೂಲಕ ತಿಳಿಸಿ..
Comments are closed.