ವಿಷ್ಣುದಾದ ರವರ ಕಥೆಯನ್ನು ಆಧರಿಸಿ ಸಿನಿಮಾ ಮಾಡಲು ಮುಂದಾದ ತಮಿಳಿನ ವಿಜಯ್? ಅಷ್ಟಕ್ಕೂ ನಡೆದಿದ್ದೇನು ಗೊತ್ತೇ??
ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರ ಸಿನಿಮಾ ಬರುತ್ತಿದೆ ಅಂದ್ರೆ ಕ್ರೇಜ್ ಭಾರಿ ಹೆಚ್ಚಾಗುತ್ತೆ. ವಿಜಯ್ ಅವರ ಸಿನಿಮಾ ಅಂದ್ರೆ ತಮಿಳುನಾಡು ಮಾತ್ರವಲ್ಲ, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ನಾರ್ತ್ ಇಂಡಿಯಾದಲ್ಲಿ ಸಹ ಬೇಡಿಕೆ ಹೆಚ್ಚು. ಇದೇ ಏಪ್ರಿಲ್ 13ರಂದು ವಿಜಯ್ ಅವರು ಅಭಿನಯಿಸಿರುವ ಬೀಸ್ಟ್ ಸಿನಿಮಾ ತೆರೆಕಾಣುತ್ತಿದೆ. ಬೀಸ್ಟ್ ನಲ್ಲಿ ವಿಜಯ್ ಅವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ನೆಲ್ಸನ್ ಅವರು ಸಿನಿಮಾಗೆ ಆಕ್ಷನ್ ಜತ್ ಹೇಳಿದ್ದಾರೆ, ಸನ್ ಪಿಕ್ಚರ್ಸ್ ಸಂಸ್ಥೆ ಸಿನಿಮಾ ನಿರ್ಮಾಣ ಮಾಡಿದೆ. ಕೆಜಿಎಫ್2 ಜೊತೆಯಲ್ಲಿ ಬೀಸ್ಟ್ ಸಿನಿಮಾ ಕೂಡ ತೆರೆಕಾಣುತ್ತಿದೆ. ಆದರೆ ಏಪ್ರಿಲ್ 13ರಂದು ಒಂದು ದಿನ ಮುಂಚಿತವಾಗಿ ಬೀಸ್ಟ್ ತೆರೆಕಾಣುತ್ತಿದೆ.
ಬೀಸ್ಟ್ ಸಿನಿಮಾ ಟ್ರೈಲರ್ ಯುಗಾದಿ ಹಬ್ಬದಂದು ರಿಲೀಸ್ ಆಯಿತು, ಸಿನಿಮಾದ ಹಾಡುಗಳು ವೈರಲ್ ಆದ ಹಾಗೆ ಟ್ರೈಲರ್ ಗೆ ಪ್ರತಿಕ್ರಿಯೆ ಸಿಕ್ಕಿಲ್ಲ. ಬೀಸ್ಟ್ ಟ್ರೈಲರ್ ನೋಡಿದ ಹಲವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಟ್ರೈಲರ್ ನೋಡಿದ ಹಲವರು ಈ ರೀತಿಯ ಕಥೆಯನ್ನು ಹಿಂದೆ ಎಲ್ಲೋ ನೋಡಿದ ಹಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕನ್ನಡದಲ್ಲೇ ಅಂತಹ ಕಥೆಯೊಂದು ಬಹಳ ಹಿಂದೆಯೇ ಬಂದಿದೆ ಎನ್ನುವುದು ಕುತೂಹಲ ಹೆಚ್ಚಿಸುವ ವಿಚಾರ. ಬೀಸ್ಟ್ ಸಿನಿಮಾ ಹಾಗೆಯೇ ಇರುವ ಕನ್ನಡ ಸಿನಿಮಾ ಯಾವುದು? ತಿಳಿಸುತ್ತೇವೆ ನೋಡಿ..
ಬೀಸ್ಟ್ ಸಿನಿಮಾ ಟ್ರೈಲರ್ ನೋಡಿದರೆ, ಮಾಲ್ ನಲ್ಲಿ ಟೆರರಿಸ್ಟ್ ಗಳ ಆಕ್ರಮಣಕ್ಕೆ ಒಳಗಾಗಿರುವ ಜನರನ್ನು ಕಾಪಾಡಲು ನಟ ವಿಜಯ್ ಹೀರೋ ಆಗಿ ಬರುವ ರೀತಿ ತೋರಿಸಲಾಗಿದೆ. ಈ ರೀತಿಯ ಕಥೆ 29 ವರ್ಷದ ಹಿಂದೆಯೇ ಕನ್ನಡದಲ್ಲಿ ಬಂದಿದೆ ಎಂದರೆ ನೀವು ನಂಬಲೇಬೇಕು. ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳಿಂದಲೇ ಖ್ಯಾತಿ ಪಡೆದಿರುವ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಅವರು 1993ರಲ್ಲೇ ಇಂಥಹ ಕಥೆ ಇರುವ ಸಿನಿಮಾ ಒಂದನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾ ಇಂದಲೇ ಬೀಸ್ಟ್ ಇನ್ಸ್ಪೈರ್ ಆಗಿರಬಹುದೇ ಎನ್ನುತ್ತಿದ್ದಾರೆ ಸಿನಿಪ್ರಿಯರು.
ಕನ್ನಡದ ಆ ಸಿನಿಮಾ ಮತ್ಯಾವುದು ಅಲ್ಲ, ವಿಷ್ಣುವರ್ಧನ್ ಅವರು ನಟಿಸಿ, ಸುನೀಲ್ ಕುಮಾರ್ ದೇಸಾಯಿ ಅವರು ನಿರ್ದೇಶನ ಮಾಡಿ, ಪೊಲೀಸ್ ಅಧಿಕಾರಿಯಾಗಿದ್ದ ಬಿ.ಸಿ ಪಾಟೀಲ್ ಅವರು ನಿರ್ಮಾಣ ಮಾಡುವುದರ ಜೊತೆಗೆ ವಿಲ್ಲನ್ ಆಗಿ ಮೊದಲ ಬಾರಿಗೆ ತೆರೆಯಮೇಲೆ ಕಾಣಿಸಿಕೊಂಡ ನಿಷ್ಕರ್ಶ ಸಿನಿಮಾ. ಕನ್ನಡದ ಆಲ್ ಟೈಮ್ ಫೇವರೆಟ್ ಥ್ರಿಲ್ಲರ್ ಸಿನಿಮಾಗಳಲ್ಲಿ ಇದು ಕೂಡ ಒಂದಾಗಿದೆ. ನಿಷ್ಕರ್ಷ ಸಿನಿಮಾದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ ವಿಷ್ಣುದಾದ, ಬ್ಯಾಂಕ್ ರಾಬರಿ ಮಾಡುತ್ತಿರುವವರನ್ನು ಬಂಧಿಸಲು ಮಾಸ್ಟರ್ ಪ್ಲಾನ್ ಮಾಡಿ ಬರುತ್ತಾರೆ ವಿಷ್ಣುದಾದ.
ಬೀಸ್ಟ್ ಸಿನಿಮಾ ಕಥೆ ಈ ಕಥೆಗೂ ಸಾಮರಸ್ಯ ಇದೆ ಎನ್ನಲಾಗುತ್ತಿದೆ. ಈಗಿನ ಕಾಲದಲ್ಲಿ ಮೂಡಿಬರುತ್ತಿರು ಸಿನಿಮಾಗಳಲ್ಲಿ, ಬೇರೆ ಸಿನಿಮಾ ಇಂದ ಇನ್ಸ್ಪೈರ್ ಆಗಿ ತಯಾರಾಗುತ್ತಿರುವ ಕಥೆಗಳೇ ಹೆಚ್ಚು. ಅದೇ ರೀತಿ ಬೀಸ್ಟ್ ಸಿನಿಮಾ ಕೂಡ ನಿಷ್ಕರ್ಷ ಕಥೆಯಿಂದ ಇನ್ಸ್ಪೈರ್ ಆಗಿರಬಹುದು. ಈಗಿನ ಕಾಲಕ್ಕೆ, ಈಗಿನ ಟ್ರೆಂಡ್ ಗೆ ತಕ್ಕ ಹಾಗೂ ವಿಜಯ್ ಅವರ ಜೊತೆ ಕಥೆಯನ್ನು ಮಾಡಿಫೈ ಮಾಡಿ ತೆರೆಮೇಲೆ ತಂದಿರಬಹುದು ನಿರ್ದೇಶಕ ನೆಲ್ಸನ್. ಈ ಎಲ್ಲಾ ಪ್ರಶ್ನೆಗಳಿಗೂ ಏಪ್ರಿಲ್ 13ರಂದು ಉತ್ತರ ಸಿಗಲಿದೆ.
ಇನ್ನು ಕೆಜಿಎಫ್2 ಕೂಡ ಏಪ್ರಿಲ್ 14ರಂದು ಬಿಡುಗಡೆ ಆಗುತ್ತಿರುವ ಕಾರಣ, ಈ ಎರಡು ಸಿನಿಮಾಗಳ ಮೇಲೆ ಭಾರಿ ಪೈಪೋಟಿ ಇದೆ. ಬೀಸ್ಟ್ ಟ್ರೈಲರ್ ನೋಡಿದ ಸಿನಿಪ್ರಿಯರು ನಮ್ಮ ಕನ್ನಡದ ಕೆಜಿಎಫ್2 ರೇಂಜ್ ಗೆ ಇಲ್ಲ ಎನ್ನುತ್ತಿದ್ದಾರೆ. ಎರಡರಲ್ಲಿ ಯಾವ ಸಿನಿಮಾ ರೇಸ್ ನಲ್ಲಿ ಗೆಲ್ಲಲಿದೆ ಎಂದು ನೋಡಬೇಕಿದೆ.
Comments are closed.