ಕಿರುತೆರೆಯಲ್ಲಿ ಯಶಸ್ಸು ಕಂಡರೂ ಕೂಡ ಧಾರಾವಾಹಿಗಳಿಂದ ದೂರ ಉಳಿದಿರುವ ಟಾಪ್ ನಟಿಯರು ಯಾರ್ಯಾರು ಗೊತ್ತೇ??
ಕಿರುತೆರೆ ಎನ್ನುವುದು ಈಗ ಬೆಳ್ಳಿತೆರೆಯಷ್ಟೇ ಫೇಮಸ್ ಆಗಿದೆ. ಸಿಜಿಮ ಕಲಾವಿದರಿಗೆ ಇರುವಷ್ಟೇ ಕ್ರೇಜ್, ಅಭಿಮಾನಿ ಬಳಗ ಎಲ್ಲವೂ ಸಹ ಕಿರುತೆರೆ ಕಲಾವಿದರಿಗೂ ಇದೆ. ಈಗ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದ ಮೇಲೆ ಧಾರಾವಾಹಿ ಕಲಾವಿದರಿಗೆ ಒಳ್ಳೆಯ ಎಕ್ಸ್ಪೋಶರ್ ಸಿಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಆದರೆ ಕೆಲವು ಕಾಲ ಧಾರಾವಾಹಿ ಲೋಕದಲ್ಲಿ ಮಿಂಚಿದ ತಾರೆಯರು ಇದ್ದಕ್ಕಿದ್ದ ಹಾಗೆ, ಕೆಲವು ಕಾರಣಗಳಿಂದ ಕಿರುತೆರೆಯಿಂದ ದೂರ ಉಳಿದುಬಿಡುತ್ತಾರೆ. ಹಾಗೆ ದೂರ ಉಳಿದಿರುವ ಕಿರುತೆರೆ ತಾರೆಯರು ಯಾರು ಗೊತ್ತಾ? ತಿಳಿಸುತ್ತೇವೆ ನೋಡಿ..
ಅರ್ಚನಾ ಲಕ್ಷ್ಮಿ ನರಸಿಂಹಸ್ವಾಮಿ.. ಈ ನಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆದೇವ್ರು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೂಲತಃ ಮೈಸೂರಿನವರಾದ ಅರ್ಚನಾ, ಮನೆದೇವ್ರು ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮನೆಮಾತಾಗಿದ್ದರು. ತಂದೆ ತಾಯಿ ನೋಡಿದ ಹುಡುಗ ವಿಜ್ಞೇಶ್ ಅವರೊಡನೆ ಮದುವೆಯಾದ ನಂತರ ಅರ್ಚನಾ ಅವರು ನಟನೆಯಿಂದ ದೂರವಾಗಿ, ಈಗ ಯು.ಎಸ್ ನಲ್ಲಿ ನೆಲೆಸಿದ್ದಾರೆ. ಅಪ್ಪಟ ಗೃಹಿಣಿಯಾಗಿದ್ದಾರೆ.
ಚೈತ್ರ ರೈ.. ಕರಾವಳಿ ಮೂಲದವರಾದ ಚೈತ್ರಾ ರೈ, ಜೀಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ರಾಧಾ ಕಲ್ಯಾಣ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಧಾರಾವಾಹಿಯಲ್ಲೇ ನೆಗಟಿವ್ ಶೇಡ್ ಪಾತ್ರದಲ್ಲಿ ನಟಿಸಿ, ಯಶಸ್ಸು ಪಡೆದರು. ಅದಾದ ಬಳಿಕ ಪುರುಷೋತ್ತಮ ಮತ್ತು ಬಣ್ಣದ ಬುಗುರಿ ಎನ್ನುವ ಧಾರಾವಾಹಿಯಲ್ಲಿ ನಟಿಸಿದರು. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ. ಬಣ್ಣದ ಬುಗುರಿ ನಂತರ ಚೈತ್ರ ಅವರು ಇನ್ಯಾವುದೇ ಕನ್ನಡ ಧಾರಾವಾಹಿಯಲ್ಲಿ ನಟಿಸಿಲ್ಲ. ಪ್ರಸನ್ನ ಶೆಟ್ಟಿ ಅವರೊಡನೆ ಮದುವೆಯಾಗಿ ಇಂದು ಸಂತೋಷವಾದ ಜೀವನ ನಡೆಸುತ್ತಿದ್ದಾರೆ.
ಆಶಿತಾ ಚಂದ್ರಪ್ಪ.. ಜೀಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಆಶಿತಾ ಚಂದ್ರಪ್ಪ ಅವರು, ನಂತರ ಸುಂದರಿ ಮತ್ತು ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ, ಜನಪ್ರಿಯತೆ ಗಳಿಸಿಕೊಂಡರು. ಒಂದೆರಡು ತಮಿಳು ಧಾರಾವಾಹಿಯಲ್ಲಿ ಸಹ ನಟಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್5 ರ ಸ್ಪರ್ಧಿಯಾಗಿದ್ದರು ಆಶಿತಾ.. ರಾಧಾ ರಮಣ ಧಾರಾವಾಹಿ ಬಳಿಕ ಆಶಿತಾ ಅವರು ರೋಹನ್ ಅವರೊಡನೆ ಮದುವೆಯಾಗಿ ನಟನೆಯಿಂದ ದೂರವೇ ಉಳಿದರು.
ಕೃತಿಕಾ ಗೌಡ.. ಜೀಕನ್ನಡ ವಾಹಿನಿಯ ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ನಾಯಕಿಯ ಪಾತ್ರದಲ್ಲಿ ನಟಿಸಿ ಯಶಸ್ವಿಯಾಗಿದ್ದರು ಈ ನಟಿ. ಅದಾದ ನಂತರ ಬಿಗ್ ಬಾಸ್ ಕನ್ನಡ ಸೀಸನ್ 3 ರಲ್ಲಿ ಸ್ಪರ್ಧಿಯಾಗಿ ಬಂದಿದ್ದರು. ಅದಾದ ನಂತರ ಕೃತಿಕಾ ಗೌಡ ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಿಲ್ಲ.
ಶ್ವೇತಾ ಆರ್ ಪ್ರಸಾದ್.. ಜೀಕನ್ನಡ ವಾಹಿನಿಯ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮೊದಲ ಬಾರಿಗೆ ನಟಿಸಿ, ಒಳ್ಳೆಯ ಹೆಸರು ಜನಪ್ರಿಯತೆ ಪಡೆದುಕೊಂಡಿದ್ದರು. ಆದರೆ ಶ್ವೇತಾ ಅವರಿಗೆ ಹೆಚ್ಚಿನ ದೊಡ್ಡ ಮಟ್ಟದ ಸಕ್ಸಸ್ ಕೊಟ್ಟಿದ್ದು ರಾಧಾ ರಮಣ ಧಾರಾವಾಹಿ. ರಾಧಾ ರಮಣ ಧಾರಾವಾಹಿಯಿಂದ ಅರ್ಧಕ್ಕೆ ಹೊರಬಂದ ಶ್ವೇತಾ ಅವರು ಇಲ್ಲಿಯವರೆಗೂ ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಲಿಲ್ಲ.
ನಿತ್ಯಾ ರಾಮ್.. ಕನ್ನಡ ಕಿರುತೆರೆಯಲ್ಲಿ ಬೆಂಕಿಯಲ್ಲಿ ಅರಳಿದ ಹೂವು, ರಾಜಕುಮಾರಿ ಧಾರಾವಾಹಿಯಲ್ಲಿ ನಟಿಸಿದ್ದರು, ಆದರೂ ಇವರಿಗೆ ಹೆಚ್ಚು ಜನಪ್ರಿಯತೆ ಮತ್ತು ಸಕ್ಸಸ್ ತಂದುಕೊಟ್ಟಿದ್ದು, ನಂದಿನಿ ಧಾರಾವಾಹಿ. ನಂದಿನಿ ಧಾರಾವಾಹಿಯಲ್ಲಿ ನಟಿಸುವಾಗಲೇ, ವಿದೇಶದಲ್ಲಿ ಕೆಲಸ ಮಾಡುತ್ತಿರುವ ಗೌತಮ್ ಅವರೊಡನೆ ಮದುವೆಯಾದರು, ಪ್ರಸ್ತುತ ಗೌತಮ್ ಅವರೊಡನೆ ವಿದೇಶದಲ್ಲಿಯೇ ನೆಲೆಸಿದ್ದಾರೆ.
ನಯನಾ ಪುಟ್ಟಸ್ವಾಮಿ.. ಈ ನಟಿ ಪ್ಯಾಟೆ ಹುಡ್ಗಿರ್ ಹಳ್ಳಿ ಲೈಫ್ ಸೀಸನ್ 1ನಲ್ಲಿ, ಸ್ಪರ್ಧಿಯಾಗಿ ಬಂದಿದ್ದ ನಯನಾ, ಆ ಸೀಸನ್ ನ ವಿನ್ನರ್ ಆಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ನಂತರ ಚಿಟ್ಟೆಹೆಜ್ಜೆ ಧಾರಾವಾಹಿಯಲ್ಲಿ ನಟಿಸಿದರು. ಕೆಲವು ಸಿನಿಮಾಗಳಲ್ಲಿ ಸಹ ಅಭಿನಯಿಸಿದ ನಯನಾ, ವಿದೇಶದಲ್ಲಿ ಒಳ್ಳೆಯ ಕೆಲಸದಲ್ಲಿರುವ ಚರಣ್ ಅವರ ಜೊತೆ ಮದುವೆಯಾಗಿ, ಈಗ ಅಮೆರಿಕಾದಲ್ಲಿದ್ದಾರೆ.
ರಾಜೇಶ್ವರಿ.. ದಂಡಪಿಂಡಗಳು ಹಾಗೂ ಇನ್ನು ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದ ರಾಜೇಶ್ವರಿ ಅವರು, ಜೋಕಾಲಿ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆದರೆ ರಾಜೇಶ್ವರಿ ಅವರು ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಅಗ್ನಿಸಾಕ್ಷಿ ಧಾರಾವಾಹಿಯ ರಾಜೇಶ್ವರಿ ಪಾತ್ರ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಟಿಸುತ್ತಿರುವಾಗಲೇ ಮದುವೆಯಾದ ರಾಜೇಶ್ವರಿ ಅವರು, ಈಗ ಯುಕೆ ನಲ್ಲಿ ಸೆಟ್ಲ್ ಆಗಿದ್ದಾರೆ.
ಸ್ವಾತಿ.. ಬಹಳ ಫೇಮಸ್ ಆಗಿದ್ದ ಅಮೃತವರ್ಷಿಣಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ಸ್ವಾತಿ, ಅದಾದ ಬಳಿಕ ಇನ್ಯಾವುದೇ ಧಾರಾವಾಹಿಯಲ್ಲಿ ನಟಿಸಲಿಲ್ಲ. ಮಿಲನಾ ಧಾರಾವಾಹಿಯಲ್ಲಿ ಮುಗ್ಧವಾಗಿ ನಟಿಸಿದ್ದ ವಿನುತಾ ಅವರಿಗೆ, ಧಾರಾವಾಗಿಂತ ಮೊದಲೇ ಮದುವೆ ಆಗಿತ್ತು, ಹಾಗಾಗಿ ಕುಟುಂಬದ ಕಡೆಗೆ ಗಮನ ಕೊಡುವ ಸಲುವಾಗಿ, ಧಾರಾವಾಹಿಯಿಂದ ಅರ್ಧಕ್ಕೆ ಹೊರಬಂದಿದ್ದರು.
Comments are closed.