ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ತಂಡದ ನಾಯಕ ಜಡ್ಡು ರವರ ಕುರಿತು ಮಾಜಿ ಚೆನ್ನೈ ಆಟಗಾರ ಹರ್ಭಜನ್ ಹೇಳಿದ್ದೇನು ಗೊತ್ತೇ??
ಈಗ ಸಿಕ್ಕಾಪಟ್ಟೆ ಹಾಟ್ ಮತ್ತು ಸೆನ್ಸೆಷನ್ ನ್ಯೂಸ್ ಎಂದರೆ ಅದುವೇ ನಮ್ಮ 2022ರ ಐಪಿಎಲ್. ಈಗಾಗಲೇ 2022ನೇ ಸಾಲಿನ ಐಪಿಎಲ್ ನಲ್ಲಿ ಎಲ್ಲಾ ತಂಡಗಳು ತಂಡ ನಾ ಮುಂದು ತಾ ಮುಂದು ಎಂದು ಭರ್ಜರಿ ಪ್ರದರ್ಶನವನ್ನು ನೀಡುತ್ತಿದೆ. ಕಳೆದ ಬಾರಿ ಚಾಂಪಿಯನ್ಸ್ ಆಗಿದ್ದ ಸಿ.ಎಸ್.ಕೆ ತಂಡ ಸರಣಿ ಸೋಲುಗಳನ್ನು ಅನುಭವಿಸಿದೆ. ಕಳೆದ ಮೂರು ಪಂದ್ಯವನ್ನು ಕೊಲ್ಕತ್ತಾ, ಲಕ್ನೌ, ಪಂಜಾಬ್ ವಿರುದ್ಧ ಆಡಿ ಮುಖಭಂಗ ಆಗುವಂತೆ ಸತತ ಸೋಲುಗಳನ್ನು ಅನುಭವಿಸಿದೆ. ಈ ಬಾರಿ ಸಿ.ಎಸ್.ಕೆ ಗೆ ಕೆಟ್ಟ ಆರಂಭ ಸಿಕ್ಕಿದ್ದು, ಮುಂದಿನ ಪಂದ್ಯಗಳನ್ನು ಗೆಲಲ್ಲೇ ಬೇಕೆಂಬ ಪರಿಸ್ಥಿತಿ ಎದುರಾಗಿದೆ.
ಈ ಬಾರಿಯ 2022 ಸಾಲಿನ ಐಪಿಲ್ ನಲ್ಲಿ ಸಿ.ಎಸ್.ಕೆ ತಂಡಕ್ಕೆ ನಾಯಕನಾಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದರು. ಇದೀಗ ಸಿ.ಎಸ್.ಕೆ ಅಭಿಮಾನಿಗಳೆಲ್ಲ ಜಡೇಜಾ ಅವರ ನಾಯಕತ್ವದ ಬಗ್ಗೆ ಬಹಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿ.ಎಸ್.ಕೆ ತಂಡದ ಮಾಜಿ ಆಟಗಾರ್ಸ್ ಹರ್ಭಜನ್ ಸಿಂಗ್ ಅವರು ಮಾತನಾಡಿ ಸಿ.ಎಸ್.ಕೆ ಅಭಿಮಾನಿಗಳಿಗೆ ಜಡೇಜಾ ಅವರ ಮೇಲಿನ ಅಸಮಾಧಾನವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ ಬಜ್ಜಿ ಅವರು ಏನೆಲ್ಲ ಹೇಳಿರಬಹುದು ಎಂದು ನಿಮ್ಮಲ್ಲಿ ಕುತೂಹಲ ಮೂಡುವುದು ಸಹಜ, ನಿಮ್ಮ ಎಲ್ಲಾ ಕುತೂಹಲಕ್ಕೆ ಉತ್ತರ ಪಡೆಯಲು ಮುಂದಿನ ಸಾಲುಗಳನ್ನು ಓದಿ..
ಮಾಜಿ ಕ್ರಿಕೆಟಿಗ, ಚೆನ್ನೈ ತಂಡದಲ್ಲಿಯೂ ಆಟಗಾರನಾಗಿದ್ದ ಹರ್ಬಜನ್ ಸಿಂಗ್, ರವೀಂದ್ರ ಜಡೇಜಾರ ನಾಯಕತ್ವದ ಬಗ್ಗೆ ವಿಮರ್ಶೆ ಮಾಡಿದ್ದಾರೆ, ”ಜಡೇಜಾ ಇನ್ನೂ ಮುಂದೆ ಬಂದು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅವರು ನಾಯಕತ್ವದ ಜವಾಬ್ದಾರಿಯನ್ನು ಬಹುಪಾಲು ಧೋನಿ ಹೆಗಲಿಗೆ ವರ್ಗಾಯಿಸಿದ್ದಾರೆ. ಜಡೇಜಾ ಅವರು ಬೌಂಡರಿ ಬಳಿ ಫೀಲ್ಡಿಂಗ್ ಮಾಡಲು ನಿಂತಿರುತ್ತಾರೆ. ಇನ್ನು ಮಾಜಿ ಕ್ಯಾಪ್ಟನ್ ಧೋನಿಯವರು ಫೀಲ್ಡಿಂಗ್ ಮೇಲೆ ಮತ್ತು ಅಲ್ಲಿನ ಆಟಗಾರರಿಗೆ ಸಲಹೆಗಳನ್ನು ನೀಡುತ್ತಿರುತ್ತಾರೆ. ಅಲ್ಲಿನ ಬೌಲರ್ಸ್ ಗಳಿಗೆ ಟಿಪ್ಸ್ ಕೊಡುತಿರುತ್ತಾರೆ. ಜಡೇಜಾ ಅವರು ಬೌಂಡರಿ ಕಡೆಗೆ ಗಮನ ಹರಿಸಿ, ಆಟಗಾರರ ಮೇಲೆ ಗಮನ ಹರಸದಿದ್ದರೆ ಆಟಗಾರರ ಮೇಲೆ ಹತೋಟಿಗೆ ತೆಗೆದುಕೊಳ್ಳಲು ಕಷ್ಟವಾಗುತ್ತದೆ. ಇನ್ನು ಧೋನಿಯವರು ಕ್ಯಾಪ್ಟನ್ ಅಲ್ಲದಿದ್ದರೂ ಅವರ ನೇತೃತ್ವವೇ ಹೆಚ್ಚಾಗಿ ಅನ್ನಿಸುತ್ತಿರುತ್ತದೆ. ಹಾಗಾಗಿ ಜಡೇಜಾ ಅವರು ತಮ್ಮ ತಂಡದ ಆಟಗಾರರ ಮೇಲೆ ಸ್ವಲ್ಪ ಗಮನ ಹರಿಸಬೇಕು..” ಎಂದಿದ್ದಾರೆ ಹರ್ಭಜನ್ ಸಿಂಗ್. ಅಷ್ಟೇ ಅಲ್ಲದೆ ಜಡೇಜಾ ಅವರ ಬಗ್ಗೆ ಕೆಲ ಹೊಗಳಿಕೆಯ ಮಾತುಗಳನ್ನು ಸಹ ತಿಳಿಸಿದ್ದಾರೆ.
“ಸಿ.ಎಸ್.ಕೆ ತಂಡ ಜಡೇಜಾ ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಪಂದ್ಯವಾಡುತ್ತಿರುವುದು. ಇವರು ಒಳ್ಳೆಯ ಆಟಗಾರ. ಜಡೇಜಾ ಅವರು ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಈ ಮೂರು ವಿಭಾಗದ ಮೇಲೆ ಹಿಡಿತವಿರುವುದರಿಂದ ಇವರು ಉತ್ತಮ ನಾಯಕನಾಗಬಲ್ಲ ಸಾಮರ್ಥ್ಯ ಇವರಲ್ಲಿದೆ. ಜಡೇಜಾ ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಸಿ.ಎಸ್.ಕೆ ತಂಡ ಮತ್ತು ಅವರ ಅಭಿಮಾನಿಗಳು ಇಡಬಹುದು. ಈ ಸಮಯದಲ್ಲಿ ಜಡೇಜಾ ಅವರು ಜವಾಬ್ದಾರಿ ವಹಿಸಿ ಧೋನಿಯವರ ನಾಯಕತ್ವದ ನೆರಳಿನಲ್ಲಿ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡಲಿ..” ಎಂದು ಒಳ್ಳೆಯ ಮಾತುಗಳನ್ನಾಡಿದರು ಹರ್ಭಜನ್ ಸಿಂಗ್.
Comments are closed.