9 ಹುಡುಗಿಯರನ್ನು ಮದುವೆಯಾಗಿ ಸಂತೋಷವಾಗಿದ್ದ ಆದರೆ ಒಂದು ಹೆಂಡತಿ ವಿಚ್ಚೇದನ ಕೇಳಿದ ಬಳಿಕ ಈತನ ಗುರಿ ಏನಂತೆ ಗೊತ್ತೇ??
ಪ್ರಪಂಚದಲ್ಲಿ ವಿಚಿತ್ರವಾದ ವ್ಯಕ್ತಿಗಳು ಹಾಗೂ ಅವರುಗಳಿಗೆ ಇರುವ ವಿಚಿತ್ರವಾದ ಆಸೆಗಳು, ನಂಬಿಕೆಗಳ ಬಗ್ಗೆ ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಹಲವು ಜನರಿಗೆ ಹಲವು ಬಗೆಯ ವಿಭಿನ್ನವಾದ ಹುಚ್ಚುಗಳು ನಂಬಿಕೆ, ಆಸೆಗಳು ಇರುತ್ತವೆ. ಇಲ್ಲೊಬ್ಬ ಖ್ಯಾತ ಮಾಡೆಲ್ ತನ್ನ ವಿಚಿತ್ರವಾದ ಆಸೆಯಿಂದ ಇಂದು ಅವನ ಜೀವನದಲ್ಲಿ ಏನು ಮಾಡಿಕೊಂಡಿದ್ದಾನೆ ನೋಡಿ..
ಈ ವ್ಯಕ್ತಿಯ ಹೆಸರು ಆರ್ಥರ್ ಒ ಉರ್ಸೋ. ಈ ವ್ಯಕ್ತಿ ಬ್ರೆಜಿಲ್ ನಲ್ಲಿ ಖ್ಯಾತ ಮಾಡೆಲ್ ಆಗಿದ್ದಾನೆ. ಈತನಿಗೆ ಒಂದು ವಿಚಿತ್ರವಾದ ನಂಬಿಕೆ ಇದೆ, ಇವರು ಏಕಪತ್ನಿತ್ವವನ್ನು ನಂಬುವದಿಲ್ಲ, ಅದನ್ನು ಇಷ್ಟಪಡುವುದು ಇಲ್ಲ. ಹಾಗಾಗಿ ಆರ್ಥರ್ ತಾನು ಒಬ್ಬ ಹುಡುಗಿಯನ್ನು ಮಾತ್ರ ಮದುವೆ ಆಗುವುದಿಲ್ಲ ಎಂದು ಹೇಳಿ, ಒಂದೇ ಬಾರಿ 9 ಹುಡುಗಿಯರ ಜೊತೆಗೆ ಮದುವೆಯಾಗಿದ್ದನು. ಬ್ರೆಜಿಲ್ ನಲ್ಲಿ ಒಂದೇ ಸಾರಿ ಇಷ್ಟು ಹುಡುಗಿಯರನ್ನು ಮದುವೆಯಾಗಲು ಅವಕಾಶವಿಲ್ಲ.
ಆದರೂ ಆರ್ಥುರ್ ತನಗೆ ಏಕಪತ್ನಿತ್ವದಲ್ಲಿ ನಂಬಿಕೆ ಇಲ್ಲ ಎಂದು ಹೇಳಿ, 9 ಹುಡುಗಿಯರನ್ನು ಮದುವೆ ಆಗಿದ್ದಾನೆ. ಆತನ ಹೆಂಡತಿಯರು ಸಹ ಚೆನ್ನಾಗಿ ಸಂಸಾರ ಮಾಡುತ್ತಿದ್ದರು. ಆದರೆ ಈಗ ಆರ್ಥುರ್ ನ ಒಬ್ಬ ಹೆಂಡತಿ ಆತನಿಗೆ ವಿಚ್ಛೇದನ ಕೊಡಲು ಮುಂದಾಗಿದ್ದಾಳೆ. ಇದರ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿರುವ ಆರ್ಥುರ್, ಆತನ ಪತ್ನಿ ಆಗಾಥಾ ಗೆ ಈ ರೀತಿ ಜೀವನ ಮಾಡಲು ಇಷ್ಟವಿಲ್ಲ. ಆಕೆ ನಾನು ಅವಳಿಗಾಗಿ ಮಾತ್ರ ಇರಬೇಕು ಎಂದು ಬಯಸುತ್ತಾಳೆ.
ನನಗೆ ಏಕಪತ್ನಿತ್ವದಲ್ಲಿ ನಂಬಿಕೆ ಇಲ್ಲ, ಆಕೆಗೆ ಈ ರೀತಿ ಇದ್ದರೆ, ನನಗೆ ಇಷ್ಟವಾಗುತ್ತಿಲ್ಲ ಎಂದು ಹೇಳಿದಳು. ಆದರೆ ನನಗೆ ಆಕೆ ಹೇಳುವ ಹಾಗೆ ಇರಲು ಸಾಧ್ಯವಿಲ್ಲ. ಆಕೆಗೆ ಖಂಡಿತವಾಗಿ ವಿಚ್ಛೇದನ ಕೊಡುತ್ತೇನೆ. ವಿಚ್ಛೇದನ ಕೊಡುತ್ತಿರುವ ಬಗ್ಗೆ ಬೇಸರ ಇದೆ ಎಂದು ಆರ್ಥುರ್ ನ್ಯೂಯಾರ್ಕ್ ಟೈಮ್ಸ್ ಗೆ ಮಾಹಿತಿ ನೀಡಿದ್ದಾರೆ. ಹಾಗೆಯೇ ಮತ್ತೊಂದು ಮಾಹಿತಿ ಸಿಕ್ಕಿರುವ ಪ್ರಕಾರ, ಆಗಾಥಾ ಏನೋ ಒಂದು ಪ್ಲಾನ್ ಮಾಡಿಯೇ ಆರ್ಥುರ್ ಜೊತೆಗೆ ಮದುವೆಯಾಗಿದ್ದ ಆತನ ಮೇಲಿದ್ದ ಪ್ರೀತಿಯಿಂದ ಅಲ್ಲ ಎನ್ನಲಾಗಿದೆ.
ಮಾಧ್ಯಮದ ಮುಂದೆ ಮಾತನಾಡಿರುವ ಆರ್ಥುರ್, ತನಗೆ 10 ಹುಡುಗಿಯರನ್ನು ಮದುವೆಯಾಗುವ ಬಯಕೆ ಇದೆ, ಈಕೆಗೆ ವಿಚ್ಛೇದನ ಕೊಡುವುದು ಖಂಡಿತ. ಮುಂದಿನ ದಿನಗಳಲ್ಲಿ ಇನ್ನು ಇಬ್ಬರು ಹುಡುಗಿಯರನ್ನು ಖಂಡಿತ ಮದುವೆ ಆಗುತ್ತೇನೆ ಎಂದಿದ್ದಾರೆ ಆರ್ಥುರ್.
Comments are closed.