ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಮತ್ತೊಂದು ಕಹಿ ಸುದ್ದಿ ನೀಡಲು ಮುಂದಾಯಿತೇ ನಂದಿನಿ?? ನಡೆಯುತ್ತಿರುವುದಾದರೂ ಏನು ಗೊತ್ತೇ??
ರಾಜ್ಯದಲ್ಲಿ ಸಧ್ಯಕ್ಕೆ ಎಲ್ಲದರ ಬೆಲೆ ಹೆಚ್ಚಾಗುತ್ತಿದೆ. ಪೆಟ್ರೋಲ್, ಡೀಸೆಲ್, ದಿನನಿತ್ಯ ಉಪಯೋಗಿಸುವ ವಸ್ತುಗಳು ಎಲ್ಲದರ ಬೆಲೆಯನ್ನು ಜಾಸ್ತಿ ಮಾಡಿ, ಸರ್ಕಾರ ಸಾಮಾನ್ಯ ಜನರಿಗೆ ಶಾಕ್ ಕೊಟ್ಟಿದೆ. ಇನ್ನುಮುಂದೆ ಬಸ್ ಟಿಕೆಟ್ ದರಗಳು, ಪ್ರವಾಸಿ ಟ್ಯಾಕ್ಸಿ ದರಗಳು ಸಹ ಹೆಚ್ಚಾಗುತ್ತಿದೆ. ಇದೀಗ ವಿದ್ಯುತ್ ದರದಲ್ಲಿ ಸಹ ಒಂದು ಯೂನಿಟ್ ಗೆ 45 ಪೈಸೆ ಹೆಚ್ಚಳವಾಗಿದೆ. ಇದೆಲ್ಲದರ ನಡುವೆ ಈಗ ಹಾಲಿನ ಬೆಲೆಯನ್ನು ಸಹ ಹೆಚ್ಚಿಸಲು ಹಾಲಿನ ಒಕ್ಕೂಟಗಳು ನಿರ್ಧಾರ ಮಾಡಿವೆ, ನಂದಿನಿ ಹಾಲಿನ ಬೆಲೆ ಸಹ ಹೆಚ್ಚಾಗಲಿದೆ ಎಂದು ಮಾಹಿತಿ ಸಿಕ್ಕಿದೆ.
ಕರ್ನಾಟಕದಲ್ಲಿ ಒಟ್ಟಾಗಿ 14 ಹಾಲಿನ ಒಕ್ಕೂಟಗಳಿವೆ. ಅವುಗಳಲ್ಲಿ 13 ಒಕ್ಕೂಟಗಳು ಹಾಲಿನ ದರವನ್ನು ಹೆಚ್ಚಿಸಬೇಕು ಎಂದು ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ ಹಾಲಿನ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಒಂದು ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಿ ಎಂದು ಹಾಲಿನ ಒಕ್ಕೂಟಗಳು ಮನವಿ ಮಾಡಿವೆ. ಆದರೆ ಕೆ.ಎಂ.ಎಫ್ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ, ಕೆ.ಎಂ.ಎಫ್ ಸಂಸ್ಥೆಯು ಒಂದು ಲೀಟರ್ ಗೆ 2 ರೂಪಾಯಿ ಹೆಚ್ಚಳ ಮಾಡಿದರೆ ಸಾಕು ಎಂದು ಮನವಿ ಮಾಡಿದ್ದಾರೆ. ಮತ್ತೊಂದು ಕಡೆ ಖ್ಯಾತ ರಾಜಕಾರಣಿ ಹೆಚ್.ಡಿ.ರೇವಣ್ಣ ಅವರು ಮಾತನಾಡಿ, ಹಾಸನದಲ್ಲಿ ಸಹ ಒಂದು ಹಾಲಿನ ಒಕ್ಕೂಟ ಇದೆ, ಅಲ್ಲಿಗೆ 12 ಲಕ್ಷ ಲೀಟರ್ ಬರುತ್ತದೆ, ಆದರೆ ನಾವು ಹಾಲಿನ ದರ ಹೆಚ್ಚಳ ಮಾಡಿ ಎಂದು ಕೇಳಿಲ್ಲ ಎಂದಿದ್ದಾರೆ ರೇವಣ್ಣ ಅವರು.

ಈ ಬೇಡಿಕೆಗೆ ಸಿಎಂ ಅವರು ಒಪ್ಪಿಗೆ ನೀಡಿದರೆ, ಇನ್ನುಮುಂದೆ ಹಾಲಿನ ದರ ಹೆಚ್ಚಾಗಲಿದೆ. ಉತ್ಪಾದನೆ ಮಾಡಲು ಖರ್ಚಾಗುವ ಹಣ ದುಬಾರಿ ಎನ್ನುವ ಕಾರಣ ನೀಡಿ, ಹಾಲಿನ ದರ್ ಏರಿಕೆ ಮಾಡಲು ಪ್ರಸ್ತಾವನೆ ಹೂಡಿವೆ ಹಾಲಿನ ಒಕ್ಕೂಟಗಳು. ಈಗಾಗಲೇ ಅಡುಗೆ ಮಾಡುವ ತೈಲ, ಹಾಗೂ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗಿರುವ ಕಾರಣ ಹೋಟೆಲ್, ಬೇಕರಿಗಳಲ್ಲಿ ಸಹ ತಿನಿಸುಗಳ ಬೆಲೆ ಏರಿಕೆ ಮಾಡಲಾಗಿದೆ. ಒಂಡಿ ವೇಳೆ ಹಾಲಿನ ಬೆಲೆ ಸಹ ಹೆಚ್ಚಾದರೆ, ಜನರ ಮೇಲೆ ಪರಿಣಾಮ ಬೀರುವುದು ಖಂಡಿತ. ಹಾಲಿನ ಬೆಲೆಯೂ ಹೆಚ್ಚಳವಾಗುತ್ತಾ ಎಂದು ಕಾದು ನೋಡಬೇಕಿದೆ.