ಪುಷ್ಪ ಸಕ್ಸಸ್ ನಂತರ ಬೇಡಿಕೆ ಮತ್ತು ಸಂಭಾವನೆ ಹೆಚ್ಚಿಸಿಕೊಂಡಿರುವ ರಶ್ಮಿಕಾ ನಿವಾಸಗಳು ಎಲ್ಲೆಲ್ಲಿದೆ ಗೊತ್ತೇ? ರಶ್ಮಿಕಾ ಬಳಿ ಇಷ್ಟೊಂದು ಮನೆಗಳಿವೆಯೇ??
ನಟಿ ರಶ್ಮಿಕಾ ಮಂದಣ್ಣ ಈಗ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿ, ರಶ್ಮಿಕಾ ಅವರಿಗೆ ದೊಡ್ಡ ದೊಡ್ಡ ಅವಕಾಶಗಳನ್ನು ತಂದು ಕೊಟ್ಟಿದೆ. ಸ್ಯಾಂಡಲ್ ವುಡ್ ಇಂದ ಶುರುವಾದ ಪಯಣ ಇಂದು ಬಾಲಿವುಡ್ ವರೆಗೂ ತಲುಪಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಬಹುವರ್ಷಗಳ ಕನಸು ಸಹ ಇತ್ತೀಚೆಗೆ ನೆರವೇರಿತು. ತಮಿಳಿನ ಖ್ಯಾತ ನಟ ವಿಜಯ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಯಶಸ್ಸು ಕೀರ್ತಿ ಜೊತೆಗೆ ಐಶ್ವರ್ಯ ಸಹ ರಶ್ಮಿಕಾ ಅವರತ್ತ ಬರುತ್ತಿದೆ, ನಟಿ ರಶ್ಮಿಕಾ ಮಂದಣ್ಣ ಈಗ ಯಾವ ಯಾವ ನಗರಗಳಲ್ಲಿ ಮನೆ ಹೊಂದಿದ್ದಾರೆ ಗೊತ್ತಾ?
ಕಿರಿಕ್ ಪಾರ್ಟಿ ಸಿನಿಮಾ ಇಂದ ಶುರುವಾದ ರಶ್ಮಿಕಾ ಅವರ ಸಿನಿಜರ್ನಿ ಈಗ ಪುಷ್ಪ ಸಿನಿಮಾ ವರೆಗು ಯಶಸ್ಸನ್ನೇ ಕಂಡಿದೆ. ಬಾಲಿವುಡ್ ಗೆ ಒಂದು ಮ್ಯೂಸಿಕ್ ಆಲ್ಬಂ ಮೂಲಕ ಎಂಟ್ರಿ ಕೊಟ್ಟ ರಶ್ಮಿಕಾ ಇಂದು ಬಾಲಿವುಡ್ ನಲ್ಲಿ ಸಹ ಬಹುಬೇಡಿಕೆ ಹೊಂದಿದ್ದಾರೆ. ರಶ್ಮಿಕಾ ಅವರು ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದು ಆ ಎರಡು ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿದೆ. ಇತ್ತೀಚೆಗೆ ರಣಬೀರ್ ಕಪೂರ್ ಅವರ ಅನಿಮಲ್ ಸಿನಿಮಗು ನಾಯಕಿಯಾಗಿ ಆಯ್ಕೆಯಾದರು ರಶ್ಮಿಕಾ. ಎಲ್ಲಾ ಇಂಡಸ್ಟ್ರಿಗಳಲ್ಲೂ ರಶ್ಮಿಕಾ ಅವರದ್ದೇ ಹವಾ ಎಂದರೆ ತಪ್ಪಾಗುವುದಿಲ್ಲ.
ಇನ್ನು ಪುಷ್ಪ ಸಿನಿಮಾ ಯಶಸ್ಸಿನ ನಂತರ ನಟಿ ರಶ್ಮಿಕಾ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ರಶ್ಮಿಕಾ ಅವರ ಮನೆಗಳ ಬಗ್ಗೆ ಹೇಳುವುದಾದರೆ, ಕೂರ್ಗ್ ನಲ್ಲಿ ರಶ್ಮಿಕಾ ಅವರಿಗೆ ಒಂದು ಸ್ವಂತ ಮನೆ ಇದೆ, ಹೈದರಾಬಾದ್ ನಲ್ಲಿ ಸಹ ರಶ್ಮಿಕಾ ಐಷಾರಾಮಿ ಮನೆಯೊಂದನ್ನು ಖರೀದಿ ಮಾಡಿದರು. ಕಳೆದ ಹೊಸವರ್ಷದ ಸಮಯದಲ್ಲಿ ಗೋವಾದಲ್ಲಿ ಕೂಡ ಹೊಸ ಮನೆ ಖರೀದಿ ಮಾಡಿದರು. ಹಿಂದಿ ಸಿನಿಮಾಗಳ ಚಿತ್ರೀಕರಣ ಹೆಚ್ಚಾದ ಬಳಿಕ ಮುಂಬೈನಲ್ಲೂ ಹೊಸ ಮನೆ ಖರೀದಿ ಮಾಡಿದರು ರಶ್ಮಿಕಾ. ಇದಲ್ಲದೆ ಬೆಂಗಳೂರಿನಲ್ಲೂ ಸ್ವಂತ ಮನೆ ಹೊಂದಿದ್ದಾರೆ. ಚಿಕ್ಕ ವಯಸ್ಸಿಗೆ ಇಷ್ಟು ಸಾಧನೆ ಮಾಡಿ, ಇಷ್ಟೆಲ್ಲಾ ಆಸ್ತಿ ಖರೀದಿ ಮಾಡಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ.
Comments are closed.