ಯುಗಾದಿ ಹಬ್ಬ ಆಚರಿಸಬೇಕಿದ್ದ ಹುಡುಗಿ ಸೇರಿದ್ದು ಸಾವಿನ ಮನೆಗೆ.. 27 ವರ್ಷದ ಗಾನವಿ ಜೀವನಕ್ಕೆ ಗಂಡನೇ ವಿಲ್ಲನ್ ಆಗಿ ಮಾಡಿದ್ದೇನು ಗೊತ್ತೇ??
ಪ್ರೀತಿ ಕುರುಡು ಎಂದು ಹೇಳುತ್ತಾರೆ..ಅದು ಅಕ್ಷರಶಃ ನಿಜವೇ.. ಕಣ್ಣಿಗೆ ಕಂಡಿದ್ದನ್ನು ಪ್ರಮಾಣಿಸಿ ನೋಡದೆ, ಪ್ರೀತಿಸಿ ಮದುವೆಯಾದರೆ ಅದರಿಂದ ತೊಂದರೆಗೆ ಒಳಗಾಗುವುದೇ ಹೆಚ್ಚು. ಇದೆ ರೀತಿ ಹುಡುಗನ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ, ಮದುವೆಯಾಗಿ, ಈಗ ಆ ಹುಡುಗಿ ಈ ಪ್ರಪಂಚದಲ್ಲಿಯೇ ಇಲ್ಲವಾಗಿದ್ದಾರೆ. ಬದುಕಿ ಬಾಳಬೇಕಿದ್ದ, 27 ವರ್ಷದ ಹುಡುಗಿಯ ಜೀವನ ತಪ್ಪು ನಿರ್ಧಾರದಿಂದ ಪ್ರಾಣಕ್ಕೆ ಕುತ್ತು ತಂದಿತು. ಯುಗಾದಿ ಹಬ್ಬದ ದಿನ ಎಲ್ಲರೂ ಸಂತೋಷವಾಗಿ ಹಬ್ಬ ಆಚರಿಸುತ್ತಿದ್ದರೆ, ಗಾನವಿ ತಂದೆ ತಾಯಿ ಮನೆಯಲ್ಲಿ ಸೂತಕ ತುಂಬಿಕೊಂಡಿತ್ತು. ಅಷ್ಟಕ್ಕೂ ಆ ಹುಡುಗಿಯ ಜೀವನದಲ್ಲಿ ನಡೆದಿದ್ದೇನು? ತಿಳಿಸುತ್ತೇವೆ ನೋಡಿ..
27 ವರ್ಷದ ಈ ಹುಡುಗಿಯ ಹೆಸರು ಗಾನವಿ. ಈಕೆ ಮೂಲತಃ ಚಿಕ್ಕಮಗಳೂರಿನ ಹುಡುಗಿ. ಎಂಎ ಓದಿ, ಒಳ್ಳೆಯ ಕಂಪೆನಿಯಲ್ಲಿ ಕೆಲಸ ಸಿಕ್ಕಿದ ಕಾರಣ, ಆಕೆ ಬೆಂಗಳೂರಿಗೆ ಹೋಗಿ ಕೆಲಸ ಮಾಡುತ್ತಿದ್ದಳು. ಕೆಲಸ ಮಾಡುತ್ತಿದ್ದ ಜಾಗದಲ್ಲಿ ಆಕೆಗೆ ನಂದೀಪ ಎನ್ನುವ ಹುಡುಗನ ಪರಿಚಯವಾಗಿ, ಇಬ್ಬರ ನಡುವೆ ಸ್ನೇಹ ಚಿಗುರಿತು. ಈಕೆಯನ್ನು ಮಾತುಗಳಿಂದಲೇ ಮರಳು ಮಾಡಿದ ನಂದೀಪ, ಪ್ರೀತಿ ಪ್ರೇಮ ಎಂದು ಶುರು ಮಾರಿಕೊಂಡನು. ನಂತರ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿದರು. ಎರಡು ಕುಟುಂಬದವರನ್ನು ಒಪ್ಪಿಸಿ ಇಬ್ಬರು ಮದುವೆಯಾದರು. ಆದರೆ ನಂದೀಪ ಮತ್ತು ಆತನ ಕುಟುಂಬದ ನಿಜ ಸ್ವರೂಪದ ಬಗ್ಗೆ ಗೊತ್ತಾಗಿದ್ದು, ಮದುವೆಯಾದ ನಂತರ.
ಮದುವೆ ನಂತರ ಗಾನವಿ ಕೆಲಸ ಬಿಟ್ಟು, ಒಳ್ಳೆಯ ಗೃಹಿಣಿ ಆಗಬೇಕು ಎಂದುಕೊಂಡು, ಕೆಲಸಕ್ಕೆ ರಿಸೈನ್ ಮಾಡಿದ್ದಳು. ಮದುವೆ ಸಮಯದಲ್ಲೇ, 15 ಗ್ರಾಮ್ ಬಂಗಾರ ಮತ್ತು ಸಾಕಷ್ಟು ಹಣ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು. ವರದಕ್ಷಿಣೆ ಕೊಟ್ಟಿದ್ದರೂ ಸಹ, ನಂದೀಪ ಮತ್ತು ಆತನ ತಾಯಿ ಇನ್ನಷ್ಟು ಹಣ ತರಬೇಕು ಎಂದು ಗಾನವಿಗೆ ಹಿಂಸೆ ಕೊಡಲು ಶುರುಮಾಡಿದರು. ದೈಹಿಕವಾಗಿ ಕೂಡ ಹಿಂಸೆ ಕೊಡುತ್ತಿದ್ದರು. ಇವರುಗಳು ಕೊಡುವ ಹಿಂಸೆ ತಡೆಯಲಾಗದೆ, ಗಂಡನ ಮನೆ ಬಿಟ್ಟು ಮೂರು ತಿಂಗಳ ಹಿಂದೆ ಗಾನವಿ ತಂದೆಯ ಮನೆಗೆ ಬಂದುಬಿಟ್ಟಿದ್ದಳು.
ನಾನು ಆ ಮನೆಗೆ ಮತ್ತೆ ಹೋಗುವುದಿಲ್ಲ, ನನ್ನನ್ನು ಸಾಯಿಸಿಬಿಡುತ್ತಾರೆ ಎಂದು ಹೇಳಿದ್ದಳು, ಆದರೆ ಅಲ್ಲಿಗೆ ಬಂದ ನಂದೀಪ, ಗಾನವಿಯನ್ನು ಇನ್ನುಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು, ಆಕೆಯ ತಂದೆ ತಾಯಿಗೆ ನಂಬಿಸಿ, ಗಾನವಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಆದರೆ ಮನೆಗೆ ಹೋದ ನಂತರ ಮತ್ತೆ ಎಲ್ಲರೂ ಸೇರಿ ಗಾನವಿಗೆ ಹಿಂಸೆ ಕೊಡಲು ಶುರು ಮಾಡುತ್ತಾರೆ. ಅಳಿಯನ ಮನೆಯವರು ಮಗಳಿಗೆ ಕೊಡುತ್ತಿರುವ ಹಿಂಸೆ ನೋಡಲಾಗದೆ, ಗಾನವಿ ತಂದೆ ಲೋಕಪ್ಪಗೌಡ, ಒಂದು ತಿಂಗಳ ಹಿಂದೆ ಸಹ 2 ಲಕ್ಷ ರೂಪಾಯಿ ಸಹ ಕೊಟ್ಟಿದ್ದರು.
ಆ ಹಣವು ಸಾಲದೆ ಮತ್ತೆ ಹಣ ಸಾಲದೆ ಮತ್ತೆ ಹಣಕ್ಕಾಗಿ ಪೀಡಿಸಲು ಶುರು ಮಾಡಿದರು. ದೈಹಿಕವಾಗಿ ಹಿಂಸೆ ನೀಡುವುದನ್ನು, ಗಾನವಿ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದಳು. ಇದರ ಬಗ್ಗೆ ತಿಳಿದು, ಮತ್ತೆ ಗಾನವಿಗೆ ಹೊಡೆದು ಬಡಿದು ಮಾಡಿ, ಕೊನೆಗೆ ಗಂಡ, ಅತ್ತೆ ಮಾವ ಎಲ್ಲರೂ ಸೇರಿ ಗಾನವಿಗೆ ಇಲಿ ಪಾಷಾಣ ತಿನ್ನಿಸಿಬಿಟ್ಟರು.ಕೊನೆಗೆ ಗಾನವಿ ಹಿಂಸೆಯಿಂದ ನರಳಾಡಲು ಶುರುಮಾಡಿದ ಮೇಲೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್ ಮಾಡಿ, ಎರಡು ದಿನಗಳ ನಂತರ ಗಾನವಿಯ ತಂದೆ ತಾಯಿಗೆ ಕರೆಮಾಡಿ, ನಿಮ್ಮ ಮಗಳನ್ನು ಜಾಂಡೀಸ್ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಹೇಳಿದ್ದಾರೆ.
ಗಾಬರಿಗೊಂಡು ಆಸ್ಪತ್ರೆಗೆ ಬಂದ ಗಾನವಿಯ ತಂದೆ ತಾಯಿ ಮಗಳನ್ನು ನೋಡಿ ಶಾಕ್ ಆಗಿದ್ದು, ತಂದೆ ತಾಯಿಯನ್ನು ನೋಡಿದ ಗಾನವಿ ನಡೆದ ವಿಚಾರವನ್ನೆಲ್ಲ ತಿಳಿಸಿದಳು. ಗಾನವಿಯನ್ನು ಮದುವೆಯಾಗುವ ಮೊದಲೇ, ನಂದೀಪನಿಗೆ ಮತ್ತೊಂದು ಹುಡುಗಿಯ ಜೊತೆ ಪ್ರೀತಿಯಾಗಿತ್ತ ಎನ್ನುವ ವಿಚಾರ ಸಹ ತಿಳಿದುಬಂದಿತು. ಆದರೆ ಕಳೆದ ವಾರ ಇದ್ದ ಯುಗಾದಿ ಹಬ್ಬದ ದಿನ, ಚಿಕಿತ್ಸೆಗಳು ಫಲ ನೀಡದೆ ಗಾನವಿ ಇನ್ನಿಲ್ಲವಾದಳು. ಸಾಕಷ್ಟು ಆಸ್ ಕನಸು ಕಟ್ಟಿಕೊಂಡು ಮದುವೆಯಾದ ಗಾನವಿಯ ಜೀವನ ಕೊನೆಯಾಗಿದ್ದು ಹೀಗೆ.. ಯಾರನ್ನಾದರೂ ಪ್ರೀತಿಸುವ, ನಂಬಲು ಮೊದಲು ಅವರ ಬಗ್ಗೆ ತಿಳಿದುಕೊಳ್ಳಿ. ಈಗ ಆ ತಂದೆ ತಾಯಿಯ ನೋವನ್ನು ಭರಿಸುವ ಶಕ್ತಿ ಯಾರಿಗೂ ಇಲ್ಲ..
Comments are closed.