ಕನ್ನಡತಿಯಲ್ಲಿ ಬಿಗ್ ಟ್ವಿಸ್ಟ್.. ಹರ್ಷ ಭುವಿ ಮದುವೆಗೆ ವಿಲ್ಲನ್ ಆಗಿ ನಿಲ್ಲೋರು ಯಾರು ಗೊತ್ತೇ??
ಕನ್ನಡತಿ ಧಾರಾವಾಹಿಯಲ್ಲಿ ದಿನೇ ದಿನೇ ಒಂದಾದ ನಂತರ ಮತ್ತೊಂದು ರೋಚಕ ಟ್ವಿಸ್ಟ್ ಗಳು ಸಿಗುತ್ತಿವೆ. ಭುವಿ ಹರ್ಷ ಒಬ್ಬರ ಪ್ರೀತಿಯನ್ನು ಮತ್ತೊಬ್ಬರು ಒಪ್ಪಿಕೊಳ್ಳಬೇಕು ಎಂದು ವೀಕ್ಷಕರು ಕಾತುರರಾಗಿ ಕಾಯುತ್ತಿದ್ದರು. ಮೊದಲಿಗೆ ವರುಧಿನಿಯ ಕಾರಣದಿಂದ ಪ್ರೀತಿ ಒಪ್ಪಿಕೊಳ್ಳಲು ಭುವಿ ಸ್ವಲ್ಪ ಸಮಯ ತೆಗೆದುಕೊಂಡರು ಸಹ ನಂತರ ಹರ್ಷನ ಪ್ರೀತಿಯನ್ನು ಒಪ್ಪಿಕೊಂಡಳು, ಇನ್ನೇನು ಹರ್ಷ ಭುವಿ ಪ್ರೀತಿಯ ಸನ್ನಿವೇಶಗಳನ್ನು ನೋಡುತ್ತಾ ಸಂತೋಷವಾಗಿದ್ದ ವೀಕ್ಷಕರಿಗೆ ಅಮ್ಮಮ್ಮನಿಗೆ ಉಂಟಾದ ಅನಾರೋಗ್ಯ ಆತಂಕ ಉಂಟಾಗುವ ಹಾಗೆ ಮಾಡಿತು.
ಅಮ್ಮಮ್ಮ ಇನ್ನು ಹೆಚ್ಚು ದಿನ ಬದುಕುಳಿಯುವುದಿಲ್ಲ ಎಂದು ವೈದ್ಯರು ಹೇಳಿದ ಕಾರಣ, ಅವರ ಕೊನೆಯ ಆಸೆ, ಮದುವೆ ನೋಡುವ ಆಸೆಯನ್ನು ಈಡೇರಿಸಲು ಹರ್ಷ ಮುಂದಾಗಿದ್ದಾನೆ. ಹಸಿರುಪೇಟೆಯಲ್ಲಿ ಭುವಿ ಮನೆಯಲ್ಲಿ ಹೆಣ್ಣು ಕೇಳುವ ಸಲುವಾಗಿ, ಹರ್ಷ ಮತ್ತು ಅಮ್ಮಮ್ಮ ಬಂದಿದ್ದಾರೆ. ಇಲ್ಲಿ ಮತ್ತೊಂದು ಟ್ವಿಸ್ಟ್ ಎನ್ನುವ ಹಾಗೆ ವರುಧಿನಿ ಸಹ ಹಸಿರುಪೇಟೆಗೆ ಬಂದಿದ್ದಾಳೆ. ತಾನು ಇಷ್ಟಪಟ್ಟ ಹುಡುಗನನ್ನು ತನ್ನ ಬೆಸ್ಟ್ ಫ್ರೆಂಡ್ ಮದುವೆ ಆಗಲು ಒಪ್ಪಿಗೆ ನೀಡಿದ್ದಾಳೆ ಎನ್ನುವ ಸತ್ಯ ಒಪ್ಪಿಕೊಳ್ಳಲು ವರುಧಿನಿಗೆ ಕಷ್ಟವಾಗುತ್ತಿದೆ. ಆದರೆ ಹರ್ಷನ ಜೊತೆ ಮಾತನಾಡಿದ ನಂತರ ಮನಸ್ಸು ಬದಲಾಯಿಸಿದ್ದಾಳೆ ವರುಧುನಿ.
ನಮಗೆ ಈ ಮದುವೆ ಫಾರ್ಮಾಲಿಟಿ ಅಷ್ಟೇ, ಈಗಾಗಲೇ ನಾವು ಗಂಡ ಹೆಂಡತಿ ಆಗಿದ್ದೇವೆ ಎಂದು ತನ್ನ ಭುವಿ ಬಗ್ಗೆ ಹರ್ಷ ಹೇಳಿದ ಮಾತು, ವರುಧಿನಿಗೆ ಗಾಯದ ಮೇಲೆ ಬರೆ ಎಳೆದ ಹಾಗಾಯಿತು. ಆ ಮಾತು ಕೇಳಿ ಅರ್ಥ ಮಾಡಿಕೊಂಡ ವರುಧಿನಿ, ಭುವಿ ಬಳಿ ಹೋಗಿ, ನೀನು ಹರ್ಷನನ್ನೇ ಮದುವೆಯಾಗು, ನಾನು ನಿನ್ನ ಅಜ್ಜಿಯನ್ನು ಒಪ್ಪಿಸುತ್ತೇನೆ ಎಂದು, ಅಜ್ಜಿಯನ್ನು ಕೂಡ ಒಪ್ಪಿಸಿದ್ದಾಳೆ. ಹರ್ಷನ ಮೇಲೆ ಹುಚ್ಚು ಪ್ರೀತಿ ಇಟ್ಟುಕೊಂಡಿದ್ದ ವರುಧಿನಿ ನಿಜಕ್ಕೂ ಬದಲಾಗಿದ್ದಾಳಾ ಅಥವಾ ಇದು ನಾಟಕವೇ ಎನ್ನುವ ಕುತೂಹಲ ವೀಕ್ಷಕರಿಗೆ.
ಜೊತೆಗೆ ಸಾನಿಯಾ ಈಗಾಗಲೇ ವರುಧಿನಿ ಮನಸ್ಸಿನಲ್ಲಿ ಇಲ್ಲಸಲ್ಲದನ್ನ ತುಂಬಿಸಿದ್ದಾಳೆ, ಹಾಗಾಗಿ ವರುಧಿನಿ ಏನೋ ಪ್ಲಾನ್ ಮಾಡಿಕೊಂಡೆ ಈ ರೀತಿ ಮಾಡುತ್ತಿದ್ದಾಳೆ ಎಂದು ಅನುಮಾನ ವ್ಯಕ್ತವಾಗಿದೆ. ಜೊತೆಗೆ ಸಾನಿಯಾ ಸಹ ಆಸ್ತಿಗಾಗಿ ಹರ್ಷ ಭುವಿ, ಮದುವೆ ಮುರಿಯಲು ಬೇರೆ ಬೇರೆ ಪ್ಲಾನ್ ಗಳನ್ನೇ ಹಾಕಿಕೊಂಡಿದ್ದಾಳೆ. ಮತ್ತೊಂದು ಕಡೆ ಭುವಿಯ ಅಜ್ಜಿಗೆ ಈ ಮದುವೆ ಇಷ್ಟವಿಲ್ಲ. ಭುವಿಗೆ ಅಷ್ಟು ಶ್ರೀಮಂತ ಹುಡುಗ, ಜೊತೆಗೆ ಅಷ್ಟು ದೂರಕ್ಕೆ ಮದುವೆ ಮಾಡಿಕೊಟ್ಟರೆ, ಭುವಿ ತನ್ನ ಮಾತನ್ನು ಕೇಳುತ್ತಾಳಾ ಎಂದು ಅಜ್ಜಿ ಯೋಚನೆ ಮಾಡುತ್ತಿದ್ದಾರೆ. ಈಗ ಮದುವೆ ಸಮಯದಲ್ಲಿ ಭುವಿಗೆ ವಿಲ್ಲನ್ ಆಗುವುದು ಯಾರು? ಸಾನಿಯಾ ನ? ವರುಧಿನಿ ನ? ಅಥವಾ ಅಜ್ಜಿನಾ ಎಂದು ಕಾದು ನೋಡಬೇಕಿದೆ.
Comments are closed.