ಕೆಜಿಎಫ್ 2 ಚಿತ್ರಮಂದಿರದಲ್ಲಿ ನೋಡುತ್ತೀರಾ?? ಹಾಗಿದ್ದರೆ ನಿಮಗೆ ಇದೆ ಬಿಗ್ ಸುರ್ಪ್ರೈಸ್. ಚಿತ್ರತಂಡದಿನ ಮತ್ತೊಂದು ಪ್ಲಾನ್. ಪ್ರಭಾಸ್ ಫ್ಯಾನ್ಸ್ ಫುಲ್ ಕುಶ್..
‘ಏಪ್ರಿಲ್14’ ಕನ್ನಡ ಚಿತ್ರರಂಗಕ್ಕೂ ಮತ್ತು ಯಶ್ ಅಭಿಮಾನಿಗಳಿಗೂ ಹಬ್ಬ ಎಂದರೆ ತಪ್ಪಾಗಲಾರದು. ಯಾಕೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಅಂದು ಭಾಗ ಒಂದರ ಮೂಲಕ ನಮ್ಮ ಕನ್ನಡ ಚಿತರಂಗದತ್ತ ಇಡೀ ಪ್ರಪಂಚವೇ ತಿರುಗಿ ನೋಡಿಸಿದಂತ “ಕೆ ಜಿ ಎಫ್ ಚಾಪ್ಟರ್ 2” ಬಿಡುಗಡೆ ಆಗಲಿದೆ. ಈ ಚಿತ್ರದ ಮೇಲೆ ಬಹಳ ನಿರೀಕ್ಷೆಯಿದ್ದು ಕೇವಲ ಕನ್ನಡದಲ್ಲಿ ಅಲ್ಲದೆ ಪಂಚಭಾಷೆ ಗಳಲ್ಲಿ ಈ ಸಿನೆಮಾ ಬಿಡುಗಡೆಯಾಗಲಿದೆ.ಈಗಂತೂ ಈ ಸಿನೆಮಾದವರು ಪ್ರಚಾರ ಶುರು ಮಾಡಿ ದಿನಕ್ಕೊಂದು ಅಪ್ಡೇಟ್ ನೀಡುತ್ತಿದ್ದಾರೆ. ಇದೀಗ ಈ ಸಿನೆಮಾ ಬಗ್ಗೆ ಹಿಂದಿ ಮಾಧ್ಯಮಗಳ ಪ್ರಕಾರ ಒಂದು ದೊಡ್ಡ ಸೂರ್ಪ್ರೈಸ್ ಇರುವುದಾಗಿ ತಿಳಿಸಿದೆ. ಏನಿರಬಹುದು ಸೂರ್ಪ್ರೈಸ್ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ..
ಇದೀಗ ‘ಯಶ್’ ಅಭಿಮಾನಿಗಳಿಗಲ್ಲದೆ ‘ಡಾರ್ಲಿಂಗ್ ಪ್ರಭಾಸ್’ ಅವರ ಅಭಿಮಾನಿಗಳಿಗೂ ಖುಷಿಯ ವಿಚಾರವನ್ನು ಹಿಂದಿ ಮಾಧ್ಯಮಗಳು ತಿಳಿಸಿದೆ. ಅದೇನಪ್ಪ ಅಂತಿರ ಏಪ್ರಿಲ್ 14ರಂದು ರಿಲೀಸ್ ಆಗುವ ‘ಕೆಜಿಎಫ್ 2’ ಸಿನೆಮಾದಲ್ಲಿ “ಸಲಾರ್” ಚಿತ್ರದ ‘ಟೀಸರ್’ ಅಟ್ಯಾಚ್ ಆಗಿರಲಿದೆ ಎಂದು ಇದೀಗ ಸುದ್ದಿ ಹರಿದಾಡುತ್ತಿದೆ. ಏಕೆಂದರೆ ಕೆಜಿಎಫ್ 2 ಸಿನೆಮಾ ಗೆ “ಹೊಂಬಾಳೆ ಫಿಲ್ಮ್ಸ್” ಬಂಡವಾಳ ಹೂಡಿ “ಪ್ರಶಾಂತ್ ನೀಲ್” ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಹಾಗಾಗಿ ‘ಡಾರ್ಲಿಂಗ್ ಪ್ರಭಾಸ್’ ಅಭಿನಯದ ಸಲಾರ್ ಚಿತ್ರಕ್ಕೂ ಈ ಜೋಡಿಯ ಕಾಂಬಿನೇಷನ್ ನಲ್ಲಿಯೇ ಮೂಡಿಬಂದಿರುವ ಕಾರಣ ಈ ಚಿತ್ರದ ಪ್ರಚಾರವನ್ನು ಇಡೀ ಭಾರತವೇ ಕಾಯುತ್ತಿರುವ ಚಿತ್ರದಲ್ಲಿ ಸೇರಿಸಿ ಪ್ರಚಾರ ಮಾಡುವ ಉದ್ದೇಶದಿಂದ ‘ಸಲಾರ್ ಚಿತ್ರದ ಟೀಸರ್’ ನನ್ನು ‘ಕೆಜಿಎಫ್ 2’ ಚಿತ್ರದಲ್ಲಿ ಅಟ್ಯಾಚ್ ಮಾಡಲಾಗಿದೆ ಎಂದು ಹಲವಾರು ಮೂಲಗಳು ತಿಳಿಸಿವೆ.
ಈಗಿನ ಬಹುಬೇಡಿಕೆಯ ಚಿತ್ರಗಳು ಈ ಟ್ಯಾಕ್ಟಿಕ್ಸ್ ಗಳನ್ನು ಉಪಯೋಗಿಸಿಕೊಳ್ಳುತ್ತಾ. ಅತಿ ನೀರಿಕ್ಷೆ ಇರುವ ಸಿನಿಮಾಗಳಿಗೆ ಬೇಕಾದ ಚಿತ್ರದ ಟೀಸರ್ ಅಥವಾ ಟ್ರೈಲರ್ ಅಟ್ಟ್ಯಾಚ್ ಮಾಡಿ ಪ್ರಚಾರ ಮಾಡುತ್ತಾ ತಮ್ಮ ಸಿನೆಮಾ ಪ್ರೊಮೋಷನ್ ಸದ್ದಿಲ್ಲದೆ ಮಾಡುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಈ ಹಿಂದೆ ಪ್ರಭಾಸ್ ಅಭಿನಯದ “ಬಾಹುಬಲಿ 2” ಚಿತ್ರದಲ್ಲಿ ‘ಪ್ರಭಾಸ್’ ಅಭಿನಯದ “ಸಾಹೋ” ಚಿತ್ರದ ಟೀಸರ್ ಬಿಡುಗಡೆ ಯಾಗಿತ್ತು. ಇದೀಗ ಅದೇ ಮಾದರಿಯಲ್ಲಿ ‘ಯಶ್’ ಚಿತ್ರದ ಜೊತೆಗೆ ‘ಪ್ರಭಾಸ್’ ಅಭಿನಯದ ‘ಸಲಾರ್’ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.
ಇನ್ನು ಯಶ್ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನನ್ನು ಕಣ್ ತುಂಬಿಕೊಳ್ಳಲು ತುದಿಗಾಲಿನಲ್ಲಿ ಕಾದಿದ್ದಾರೆ. ಸಿನೆಮಾಗಳ ಸತತ ಸೋಲುಗಳಿಂದ ಕುಗ್ಗಿರುವ ಪ್ರಭಾಸ್ ಅಭಿನಯದ ಈ ಚಿತ್ರದ ಟೀಸರ್ ಎಲ್ಲರ ಮನಸ್ಸು ಗೆದ್ದು, ಈ ಚಿತ್ರ ಉತ್ತಮ ಪ್ರದರ್ಶನ ಪಡೆಯಲಿ ಎಂದು ನಾವೆಲ್ಲರೂ ಆಶಿಸೋಣ.
Comments are closed.