ಕೊನೆಗೂ ಮಂಜು ಪಾವಗಡ ರವರಿಗೆ ಕುಲಾಯಿಸಿದ ಅದೃಷ್ಟ. ಕಿರುತೆರೆಯಲ್ಲಿ ಗಿಚ್ಚಿ ಗಿಲಿಗಿಲಿಯಲ್ಲಿ ಮಂಜು ಏನು ಮಾಡಲಿದ್ದಾರೆ ಗೊತ್ತೇ??
ಕಿರುತೆರೆಯಲ್ಲಿ ಇತ್ತೀಚೆಗೆ ಮನೋರಂಜನೆಗೆ ಕಡಿಮೆ ಇಲ್ಲಾ. ನಮ್ಮ “ಕಲರ್ಸ್ ಕನ್ನಡ”ವಾಹಿನಿ ವೀಕ್ಷಕರಿಗೆ ಹಲವಾರು ವಿಭಿನ್ನ ಧಾರಾವಾಹಿಗಳು ಮತ್ತು ಶೋಗಳ ಮೂಲಕ ಮನೋರಂಜನೆ ನೀಡುತ್ತಿದೆ. ಇದೀಗ ಪ್ರತಿ ವಾರ ಪ್ರಸಾರವಾಗುತ್ತಿದ್ದ ಮಸ್ತ್ ಮನೋರಂಜನೆ ನೀಡುತ್ತಿದ್ದಮಕ್ಕಳ ಕಾರ್ಯಕ್ರಮ “ನನ್ನಮ್ಮ ಸೂಪರ್ ಸ್ಟಾರ್”. ಈ ಶೋ ನಮ್ಮ ಕರ್ನಾಟಕದಲ್ಲಿ ಎಲ್ಲರ ಮನಸನ್ನು ಗೆದ್ದು ಭರ್ಜರಿ ಮುನ್ನಡೆ ಪಡೆದು ಟಿ.ಆರ್.ಪಿ ಪಡೆದುಕೊಂಡಿತ್ತು. ಈ ಶೋ ಮುಗಿಯುವ ಹಂತ ಬರುತ್ತಿದ್ದಂತೆ ಕಲರ್ಸ್ ಕನ್ನಡ ವೀಕ್ಷಕರಿಗೆ ಒಂದು ಗೊಂದಲ ಮೂಡಿತ್ತು. ಆ ಗೊಂದಲವನೆಲ್ಲಾ ಬಗೆ ಹರಿಸಲು “ನನ್ನಮ್ಮ ಸೂಪರ್ ಸ್ಟಾರ್” ಶೋ ನ ಫಿನಾಲೆಯಲ್ಲಿ ಈ ಶೋ ಮುಗಿದ ನಂತರ ಪ್ರಸಾರವಾಗುವ ಹೊಸ ಶೋ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆ ಶೋ ಯಾವುದು ಎಂದು ನಿಮಗೆಲ್ಲ ತಿಳಿದಿರುತ್ತದೆ.
‘ನನ್ನಮ್ಮ ಸೂಪರ್ ಸ್ಟಾರ್’ ಶೋ ನ ಫಿನಾಲೆಯಲ್ಲಿ ಈ ಶೋ ಮುಗಿದ ನಂತರ “ಗಿಚ್ಚಿ ಗಿಲಿ ಗಿಲಿ” ಎಂಬ ಕಾಮಿಡಿ ಶೋ ಪ್ರಸಾರವಾಗುವುದು ಎಂದು ತಿಳಿಸಿದ್ದರು. ಶೋ ಮುಗಿದ ನಂತರ ಯಾವ ಶೋ ಬರಬಹುದು ಎಂಬ ಗೊಂದಲಕ್ಕೆ ಉತ್ತರ ಕೊಟ್ಟರು. ನಂತರ ಈ ಶೋಗಳ ಜಡ್ಜಸ್ ಯಾರಿರ ಬಹುದು ಎಂದು ಹಲವಾರು ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ. ಹಾಗಿದ್ದರೆ ಯಾರು ಈ ಶೊ ನ ಜಡ್ಜಸ್ ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ..
ಈ “ಗಿಚ್ಚಿ ಗಿಲಿ ಗಿಲಿ” ಶೋ ನ ಜಡ್ಜಸ್ ಗಳಾಗಿ ಈ ಹಿಂದೆ ಕಲರ್ಸ್ ಕನ್ನಡದ ಪ್ರಖ್ಯಾತ ಶೋ ಗಳ ಜಡ್ಜಸ್ ಆಗಿದ್ದವರೆ ಈ ಶೋ ಗು ಜಡ್ಜಸ್ ಗಳಾಗಿ ಆಯ್ಕೆ ಯಾಗಿದ್ದಾರೆ. ಹೌದು! ಈ ಹಿಂದೆ “ಮಜಾ ಭಾರತದ” ಜಡ್ಜಸ್ ಗಳಾಗಿದ್ದ ಕನ್ನಡದ ಹೆಮ್ಮೆಯ ನಟಿ “ಶೃತಿ” ಮತ್ತು ಕರ್ನಾಟಕದ ಟಾಕಿಂಗ್ ಸ್ಟಾರ್ “ಸೃಜನ್ ಲೋಕೇಶ್” ಅವರು ಈ ಕಾಮಿಡಿ ಶೊ ಗಳ ಜಡ್ಜಸ್ ಗಳಾಗಿ ಆಯ್ಕೆಯಾಗಿದ್ದಾರೆ. ಇದೆಲ್ಲಾ ಮುಗಿದ ನಂತರ ಗೊಂದಲ ಕಾಡುವುದು ಈ ಶೋ ನಿರೂಪಕರು ಯಾರು ಎಂಬುದು, ಇದೀಗ ಆ ಗೊಂದಲಕ್ಕೂ ಉತ್ತರ ದೊರಕಿದೆ, ಅವರೇ ‘ಬಿಗ್ ಬಾಸ್’ ವಿಜೇತರಾದ “ಮಂಜು ಪಾವಗಡ”, ಮಂಜು ಅಗರಿಗೆ ಸಾಥ್ ನೀಡಲು ‘ಸ್ಟಾರ್ ಸ್ಪೋರ್ಟ್ಸ್’ ನಿರೂಪಕಿಯಾಗಿರುವ “ರೀನಾ ಡಿಸೋಜಾ” ಅವರು ಆಯ್ಕೆಯಾಗಿದ್ದಾರೆ.
ಈ ಮೂಲಕ ‘ರೀನಾ ಡಿಸೋಜಾ’ ಅವರು ಮೊಟ್ಟ ಮೊದಲ ಬಾರಿಗೆ ಕನ್ನಡದ ಶೋ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಾಲ್ಕು ಜನರ ಕಾಂಬಿನೇಶನ್ ನಲ್ಲಿ ಈ ಕಾಮಿಡಿ ಶೊ ಹೇಗೆ ಮೂಡಿ ಬಂದು ಜನರ ಮನಸ್ಸನ್ನು ಗೆಲ್ಲಲಿದೆ ಎಂದು ನಾವು ಕಾದು ನೋಡಬೇಕಿದೆ. ಈ ಶೋ ನಲ್ಲಿ ಹಲವಾರು ಸೆಲೆಬ್ರೆಟಿಗಳು ಸ್ಪರ್ಧಿಯಾಗಿ ಬರಲಿದ್ದಾರೆ ಎಂಬ ಗಾಳಿ ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಈ ಶೋ ಸ್ಪರ್ದಿಗಳು ಯಾರೆಂದು ಇದೇ ಶನಿವಾರದಂದು ರಿವೀಲ್ ಆಗಲಿದೆ. ಅಲ್ಲಿಯ ವರೆಗೂ ನಾವೆಲ್ಲರೂ ಕುತೂಹಲದಿಂದ ಕಾದು ನೋಡಬೇಕಿದೆ. ಆದರೆ ಒಂದೊಂತು ನಿಜ ಈ ನಾಲ್ಕು ಜನ ಸೇರಿ ನೆಡೆಸಿಕೊಳ್ಳುತ್ತಿರುವ ಈ ಶೊನಲ್ಲಿ ನಾನ್ ಸ್ಟಾಪ್ ನಗು ಮಾತ್ರ ಪಕ್ಕ ಎಂದೇ ಎಷ್ಟೋ ಜನ ಭಾವಿಸಿದ್ದಾರೆ.
Comments are closed.