ನಟಿಯಾಗಿ ಮಾಲಾಶ್ರೀ ರವರು ಮಾಡಿರುವ ಈ ದಾಖಲೆಯನ್ನು ಯಾರು ಕೂಡ ಅಳಿಸಲು ಸಾಧ್ಯವಿಲ್ಲ ಯಾವುದು ಗೊತ್ತೇ ಆ ದಾಖಲೆ??
ಕನ್ನಡ ಚಿತ್ರರಂಗದಲ್ಲಿ ಲೇಡಿ ಟೈಗರ್ ಎಂದು ಹೆಸರು ಪಡೆದುಕೊಂಡಿರುವವರು ನಟಿ ಮಾಲಾಶ್ರೀ. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗವನ್ನು ಆಳಿದ ಖ್ಯಾತ ನಟಿಯರಲ್ಲಿ ಇವರು ಸಹ ಒಬ್ಬರು. ನಟಿ ಮಾಲಾಶ್ರೀ ಅವರು ಆಗಿನ ಕಾಲದ ಯುವಕರ ಕನಸಿನ ಕನ್ಯೆ ಆಗಿದ್ದರು. ಈಗಲೂ ಸಹ ಮಾಲಾಶ್ರೀ ಅವರಿಗೆ ಅಷ್ಟೇ ಕ್ರೇಜ್ ಇದೆ. ನಟಿ ಮಾಲಾಶ್ರೀ ಹಲವು ದಾಖಲೆಗಳನ್ನು ಮಾಡಿದ್ದಾರೆ, ಇವರು ಮಾಡಿರುವ ಒಂದು ಸಿನಿಮಾದ ದಾಖಲೆಯನ್ನು ಇದುವರೆಗೂ ಮತ್ಯಾವ ನಾಯಕಿಯು ಮುರಿದಿಲ್ಲ. ಆ ದಾಖಲೆ ಏನು ಗೊತ್ತಾ?
ನಟಿ ಮಾಲಾಶ್ರೀ ಹಲಗು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಾಫ್ಟ್ ಆದ ಹೋಮ್ಲಿ ಪಾತ್ರಗಳು, ರಗಡ್ ಆದ ಪಾತ್ರಗಳು ಹೀಗೆ ಅನೇಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಾಗೆ ನಟಿಸಿರುವ ಸಿನಿಮಾಗಳಲ್ಲಿ ಮರೆಯಲಾಗದ ಒಂದು ಸಿನಿಮಾ, ಹಲೋ ಸಿಸ್ಟರ್. ಈ ಸಿನಿಮಾದಲ್ಲಿ ಮಾಲಾಶ್ರೀ ಅವರು ಬಹಳ ವಿಭಿನ್ನವಾದ ಪಾತ್ರದಲ್ಲಿ ನಟಿಸಿದ್ದರು, ಇವರಿಗೆ ನಾಯಕನಾಗಿ ನಟ ಶಶಿಕುಮಾರ್, ನಟ ಶ್ರೀಧರ್ ಹಾಗೂ ಇನ್ನಿತರರು ಅಭಿನಯಿಸಿದ್ದರು. ಈ ಸಿನಿಮಾದ ಆ ವಿಶೇಷತೆ ಏನೆಂದರೆ, ಮಾಲಾಶ್ರೀ ಅವರು ಏಳು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಒಬ್ಬ ನಾಯಕ ಏಳು ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದೇ ಕಷ್ಟ, ಅಂಥದ್ರಲ್ಲಿ ಮಾಲಾಶ್ರೀ ಅವರು ಏಳು ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಸಿನಿಮಾದ ಕಥೆ ಬರೆದು ನಿರ್ದೇಶನ ಮಾಡಿದ್ದು, ಓಂ ಸಾಯಿ ಪ್ರಕಾಶ್ ಅವರು, ಒಂದು ದೇಹದಿಂದ ಆತ್ಮವು ಹೊರಬಂದರೆ, ಇನ್ಯಾವ ದೇಹಕ್ಕೂ ಆ ಆತ್ಮ ಹೋಗಲು ಸಾಧ್ಯವಿಲ್ಲ ಎನ್ನುವುದರ ಮೇಲೆ ಹೆಣೆದಿದ್ದ ಕಥೆ ಇದಾಗಿತ್ತು.
ನಾಯಕಿ ಮಾಲಾ, ಸಿನಿಮಾದಲ್ಲಿ ಖಳನಾಯಕರಿಂದ ಸತ್ತು ಹೋಗುತ್ತಾಳೆ, ಆಕೆಯನ್ನು ಯಮಲೋಕಕ್ಕೆ ಕರೆದುಕೊಂಡು ಹೋದಾಗ, ಸಾಯಬೇಕಿದ್ದು, ಮಾಲಾಶ್ರೀ ಅಲ್ಲ ಶುಭಶ್ರೀ, ತಪ್ಪಾಗಿ ಮಾಲಾಶ್ರೀಗೆ ಹೀಗಾಗಿದೆ ಎಂದು ಗೊತ್ತಾಗುತ್ತದೆ. ಆಗ ಮಾಲಾಶ್ರೀ ಜಗಳವಾಡಲು ಶುರು ಮಾಡುತ್ತಾಳೆ. ಆಗ ಬ್ರಹ್ಮದೇವನು, ಒಂದೇ ರೀತಿಯ 7 ಜನರನ್ನು ಸೃಷ್ಟಿ ಮಾಡಿರುವುದಾಗಿ ಹೇಳಿ, ಯಾರದ್ದಾದರು ಒಂದು ದೇಹಕ್ಕೆ ಮಾಲಾ ಆತ್ಮವನ್ನು ಹೇಳುತ್ತಾರೆ. ಆಗ ಎಲ್ಲಾ ಪಾತ್ರಗಳ ಪರಿಚಯವಾಗುತ್ತದೆ. ಅಲಮೇಲು, ಅಸಾಹಾಯಕ ಮುದುಕಿ, ಮ್ಯಾಜಿಕ್ ಲೇಡಿ ಅಮ್ಮುಕುಟ್ಟಿ, ರುಧ್ರಮ್ಮ ದೇವಿ ಅಥವಾ ಚೂರಿ ಚಿಕ್ಕಮ್ಮ, ಮೂಗಿ ಮತ್ತು ಶ್ರೀಮಂತ ಮಹಿಳೆ. ಈ ಎಲ್ಲರನ್ನು ನೋಡಿದ ಮಾಲಾ, ಎಲ್ಲರ ಜೀವನದ ಜಂಜಾಟ ನೋಡಿ, ಯಾರ ದೇಹಕ್ಕೂ ಹೋಗಲು ಇಷ್ಟಪಡುವುದಿಲ್ಲ.
ಕೊನೆಗೆ ಶ್ರೀಮಂತ ಮಹಿಳೆಯ ಜೊತೆ ತನ್ನ ಮಾವ ಮದುವೆ ಆಗುತ್ತಿರುವ ವಿಚಾರ ಗೊತ್ತಾಗಿ, ಆಕೆಯ ದೇಹಕ್ಕೆ ಹೋಗುತ್ತಾಳೆ. ನಂತರ ವಿಲ್ಲನ್ ಗಳ ಸೆದೆ ಬಡಿಯುತ್ತಾಳೆ. ಹಾಗೆ ತನ್ನ ಮಾವನನ್ನು ಹೇಗೆ ಸೇರಿಕೊಳ್ಳುತ್ತಾಳೆ ಎನ್ನುವುದೇ ಸಿನಿಮಾ ಕಥೆ. ಈ ಸಿನಿಮಾ ನಿರ್ಮಾಣ ಮಾಡಿದ್ದು, ರಾಮು ಅವರು. ಪುರುಷ ಪ್ರಧಾನ ಸಿನಿಮಾಗಳನ್ನು ಹೆಚ್ಚಾಗಿ ಮಾಡಿದ್ದ ರಾಮು ಅವರು, ತಮ್ಮ ಬ್ಯಾನರ್ ಮೂಲಕ ಹೊಸ ಪ್ರಯೋಗ ಮಾಡಬೇಕು ಎಂದುಕೊಂಡಾಗ, ಮೂಡಿಬಂದ ಸಿನಿಮಾ ಹಲೋ ಸಿಸ್ಟರ್. ಈ ಸಿನಿಮಾದಲ್ಲಿ ಹಿರಿಯಕಲಾವಿದರ ಬಹು ತರಾಗಣವೇ ಇತ್ತು. ಮಾಲಾಶ್ರೀ ಅವರ ಬಗ್ಗೆ ವಿಭಿನ್ನ ಪಾತ್ರಗಳನ್ನು ಬೇರೆ ನಟಿಯರು ಮಾಡಿರಲು ಸಾಧ್ಯವಿಲ್ಲ. ಇನ್ನು ಮುಂದೆ ಯಾರಾದರೂ ಈ ರೆಕಾರ್ಡ್ ಬ್ರೇಕ್ ಮಾಡುತ್ತಾರಾ ಎಂದು ಕಾದು ನೋಡಬೇಕಿದೆ
Comments are closed.