Neer Dose Karnataka
Take a fresh look at your lifestyle.

ಸತತ ಸೋಲನ್ನು ಕಾಣುತ್ತಿರುವ ಮುಂಬೈ ತಂಡದ ಕುರಿತು ಮಾತನಾಡಿದ ರವಿಶಾಸ್ತ್ರಿ, ರೋಹಿತ್ ನಾಯಕತ್ವನನ್ನು ಪ್ರಶ್ನಿಸಿ ಹೇಳಿದ್ದೇನು ಗೊತ್ತೇ?

ಐಪಿಎಲ್ 15ನೇ ಆವೃತ್ತಿ ಶುರುವಾಗಿ ಭರ್ಜರಿಯಾಗಿ ನಡೆಯುತ್ತಿದೆ. ಎಲ್ಲಾ ತಂಡಗಳು ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಈ ವರ್ಷ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟ ಕೈಕೊಟ್ಟ ಹಾಗಿದೆ. ಇದುವರೆಗೂ ಆಡಿದ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಒಂದು ಪಂದ್ಯವನ್ನು ಗೆದ್ದಿಲ್ಲ. ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ತಂಡ ಈ ಬಾರಿ ಒಂದು ಪಂದ್ಯ ಗೆಲ್ಲುವುದಕ್ಕೆ ಕಷ್ಟಪಡುತ್ತಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಕೆಕೆಆರ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಹೀನಾಯವಾದ ಸೋಲು ಕಂಡಿತು. ಇದರಿಂದ ತಂಡದ ನಾಯಕ ರೋಹಿತ್ ಶರ್ಮಾ ಅವರ ಬಗ್ಗೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡೆತ್ ಓವರ್ ಗಳಲ್ಲಿ ಬೌಲರ್ ಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ ರವಿಶಾಸ್ತ್ರಿ ಅವರು..”ಈ ಬಾರಿ ಜಸ್ಪ್ರೀತ್ ಬುಮ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ಉತ್ತಮವಾದ ಬೌಲರ್ ಗಳು ಇಲ್ಲದೆ ಇರುವ ಕಾರಣ, ಡೆತ್ ಓವರ್ ಗಳಿಗಾಗಿ ಒಬ್ಬರು ಅಥವಾ ಇಬ್ಬರು ಬೌಲರ್ ಗಳನ್ನು ಉಳಿಸಿಕೊಳ್ಳಬೇಕಾಗುತ್ತದೆ. ನಿರ್ಣಾಯಕ ಸಮಯದಲ್ಲಿ ಜಸ್ಪ್ರೀತ್ ಬುಮ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ಇನ್ನಿಂಗ್ಸ್ ಮುಗಿಯುವ ವರೆಗೂ ಅವರನ್ನು ಉಳಿಸಿಕೊಳ್ಳಲು ಆಗುವುದಿಲ್ಲ, ಆದರೆ ಮೊದಲ 6 ಓವರ್ ವಳಲ್ಲಿ ಎರಡರಿಂದ ಮೂರು ವಿಕೆಟ್ ತೆಗೆಯುವ ಪ್ರಯತ್ನ ಮಾಡಿ, ಎದುರಾಳಿ ತಂಡದ ಮೇಲೆ ಒತ್ತಡ ಹಾಕಬೇಕು. ನಂತದ ಡೆತ್ ಓವರ್ ಗಳನ್ನ ಬಳಸಿಕೊಳ್ಳಬೇಕು.

ಈ ಬಾರಿ ಮುಂಬೈ ಇಂಡಿಯನ್ಸ್ ತಂಡ ಪ್ರಮುಖವಾದ ಬೌಲರ್ ಗಳನ್ನು ಹೊಂದಿಲ್ಲ. ಹಾಗಾಗಿ ಮುಂಬೈ ಇಂಡಿಯನ್ಸ್ ತಂಡ ಜಸ್ಪ್ರೀತ್ ಬುಮ್ರ ಅವರನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಆ ರೀತಿ ಮಾಡದೆ ಇರುವುದೇ ತಂಡದ ಸೋಲಿಗೆ ಕಾರಣವಾಗಿದೆ. ” ಎಂದು ಹೇಳಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕಳೆದ ಮ್ಯಾಚ್ ನಲ್ಲಿ ಹೀನಾಯವಾದ ಸೋಲು ಕಂಡಿತು ಮುಂಬೈ. ಕೆಕೆಆರ್ ತಂಡದ ಪ್ಯಾಟ್ ಕಮಿನ್ಸ್ ಕೇವಲ 14 ಎಸೆತಗಳಲ್ಲಿ 56 ರನ್ ಭಾರಿಸಿ, ಭರ್ಜರಿ ಜಯ ಸಾಧಿಸಿದರು. ಇದುವರೆಗೂ ಒಂದು ಮ್ಯಾಚ್ ಅನ್ನು ಗೆಲ್ಲದ ಮುಂಬೈ ಇಂಡಿಯನ್ಸ್ ತಂಡ ಇನ್ನುಮುಂದೆ ತಮ್ಮ ತಪ್ಪುಗಳನ್ನು ಅರಿತು ಪಂದ್ಯಗಳನ್ನು ಆಡಬೇಕಿದೆ.

Comments are closed.