ಅದೆಷ್ಟೋ ಜನ ಮಾಲಾಶ್ರೀ ರಾಮಾಚಾರಿಗೆ ಬೇಡ ಬೇಡ ಎಂದರೂ ರವಿಚಂದ್ರನ್ ರವರು ಮಾಲಾಶ್ರೀ ರವರನ್ನೇ ಆಯ್ಕೆ ಮಾಡಿದ್ದು ಯಾಕೆ ಗೊತ್ತೇ?
ನಮ್ಮ ರಾಮಾಚಾರಿ ಯಾರೆಂದು ನಿಮಗೆ ಗೋತ್ತಲ್ವಾ ಅವರೇ ರೀ, ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ಇವರು ಸಿನೆಮಾ ಮಾಡುತ್ತಾರೆ ಎಂದರೆ ಕಣ್ಣಿಗೆ ಹಬ್ಬ ಮತ್ತು ಮನೋರಂಜನೆಗೆ ಕಡಿಮೆ ಇರುವುದಿಲ್ಲ ಎನ್ನುವುದು ಇಡೀ ಕರ್ನಾಟಕಕ್ಕೆ ತಿಳಿದಿರುವ ವಿಚಾರ. ಇವರು ನಿರ್ದೇಶಕನಾಗಿಯೂ ಮತ್ತು ನಾಯಕ ನಟನಾಗಿಯು ಫುಲ್ ಮಾರ್ಕ್ಸ್ ತೆಗೆದುಕೊಂಡಿದ್ದಾರೆ. ನಿರ್ದೇಶಕ ಎಂದು ಕ್ಯಾಪ್ ಹಾಕಿ ನಿಂತರೆ ಆ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವಲ್ಲಿ ಎರಡನೇ ಮಾತೆ ಇಲ್ಲಾ. ಇವರ ಸಿನಿಮಾಗಳಿಗೆ ನಾಯಕ ನಟಿಯನ್ನು ಆಯ್ಕೆ ಮಾಡುವುದರಲ್ಲಿಯೂ ಕೂಡ ಬಹಳ ಸೂಕ್ಷ್ಮವಾಗಿ ಗಮನಿಸಿ ಸಖತ್ ಪರ್ಫೆಕ್ಟ್ ಮ್ಯಾಚ್ ಹುಡುಕಿ ಆ ಜೋಡಿ ಒಂದು ಮಾದರಿಯಾಗುವಂತೆ ತೆರೆಯ ಮೇಲೆ ತೋರಿಸುವ ಸ್ಟಾರ್ ನಿರ್ದೇಶಕ. ಹೀಗೆ ರಾಮಚಾರಿ ಚಿತ್ರದಲ್ಲಿ ನಾಯಕ ನಟಿಯಾಗಿ ತಮ್ಮ ಸ್ನೇಹಿತೆಯನ್ನೇ ಆಯ್ಕೆ ಮಾಡಿರುತ್ತಾರೆ, ಆದರೆ ಅದೆಷ್ಟೋ ಮಂದಿ ಇವರು ಬೇಡ ಎಂದು ಅಭಿಪ್ರಾಯಪಟ್ಟರೂ ಸಹ ರವಿಚಂದ್ರನ್ ಅವರು ಆ ನಟಿಯನ್ನೇ ಆಯ್ಕೆ ಮಾಡಿ ಫುಲ್ ಮಾರ್ಕ್ಸ್ ಪಡೆದುಕೊಂಡ್ರು. ಆ ನಟಿ ಯಾರೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ..
ಈ ಸಿನೆಮಾ ನಟಿಯಾಗಿ ಮೊದಲ ಬಾರಿಗೆ ಖುಷ್ಬೂ ರವರು ಆಯ್ಕೆಯಾಗಿದ್ದರು. ಆದರೆ ಕಾರಣಾಂತರದಿಂದ ಈ ಸಿನೆಮಾ ಮಾಡುವುದಿಲ್ಲ ಎಂದು ರವಿಚಂದ್ರನ್ ಅವರಿಗೆ ತಿಳಿಸಿದರು. ಆ ಸಂಧರ್ಭದಲ್ಲಿ ತಮ್ಮ ಪ್ರೀತಿಯ ಸ್ನೇಹಿತೆಯನ್ನು ಅಚಾನಕ್ ಆಗಿ ಭೇಟಿಯಾದರು ಆ ಸ್ನೇಹಿತೆ ಯಾರು ಗೊತ್ತಾ, ಅದುವೇ ಆಗಲೇ ಹಿಟ್ ಸಿನೆಮಾಗಳನ್ನು ನೀಡುತ್ತಿದ್ದ ಮಾಲಾಶ್ರೀ ಅವರು. ಇವರಿಬ್ಬರು ತುಂಬಾ ಒಳ್ಳೆಯ ಸ್ನೇಹಿತರಾಗಿದ್ದರು. ಎಷ್ಟರಮಟ್ಟಿಗೆ ಎಂದರೆ ಸಿಕ್ಕಾಗೆಲ್ಲ ಒಬ್ಬರೊನೊಬ್ಬರು ಕಾಲೆಳೆದುಕೊಳ್ಳುವಷ್ಟು ಆತ್ಮೀಯವಾದ ಭಂಧವನ್ನು ಹೊಂದಿದ್ದವರು.ಹೀಗೆ ಅಕಸ್ಮಾತ್ ಭೇಟಿಯಾದ ರವಿಚಂದ್ರನ್ ಅವರನ್ನು ಮಾಲಾಶ್ರೀ ಅವರು ನನ್ನ ಒಟ್ಟಿಗೆ ಯಾವಾಗ ಸಿನೆಮಾ ಮಾಡ್ತೀರಾ ಅಂತ ಕೇಳಿದಾಗ, ರವಿ ಮಾಮ ಆದಷ್ಟು ಬೇಗ ಎಂದಿದ್ದರು.
ಅದೇ ಯಾವಾಗ ಎಂದಾಗ, ರವಿ ಮಾಮ ನಾನು ನಿಂಗ್ ಫೋನ್ ಮಾಡ್ತೀನಿ ಅವಾಗ ನೀನು ಹೂ ಅಂತ ಹೇಳ್ಬೇಕು, ಬೇರೇನೂ ಮಾತಾಡುವ ಹಾಗಿಲ್ಲ ಎಂದಿದ್ದರು. ನಮ್ಮ ಕ್ರೇಜಿಸ್ಟಾರ್ ಕೊಟ್ಟ ಮಾತಿನಂತೆ ಕೆಲ ದಿನ ಕಳೆದ ಬಳಿಕ ಮಾಲಾಶ್ರೀ ಅವ್ರಿಗೆ ಕರೆ ಮಾಡಿದರು. ಮಾಲಾಶ್ರೀ ಅವರು ರವಿಚಂದ್ರನ್ ಅವರು ಹೇಳಿದಂತೆ ಹೂ ಎಂದರು. ಹೀಗೆ ಇವರಿಬ್ಬರ ರಾಮಚಾರಿಯ ಸಿನೆಮಾ ಒಪ್ಪಂದವಾಯಿತು. ಮಾಲಾಶ್ರೀ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳಲು,ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ 13 ದಿನಗಳ ಕಾಲ ಹಗಲು ರಾತ್ರಿಯೆನ್ನದೆ ಕೆಲಸ ಮಾಡಿ ಈ ಸಿನೆಮಾ ಮಾಡಿಕೊಟ್ಟರು. ಇವರಿಬ್ಬರ ಈ ಸಿನೆಮಾಗೆ ಚಿತ್ರತಂಡ ಮತ್ತು ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿ ಬಹಳ ದಿನಗಳ ಕಾಲ ಹೌಸ್ ಫುಲ್ ಪ್ರದರ್ಶನ ಪಡೆದು, ಸಾಕಷ್ಟು ಅವಾರ್ಡ್ ಪಡೆದುಕೊಂಡಿತ್ತು.
Comments are closed.