ಇಂದು ಬಿಡಿ, ಅಂದಿನ ಕಾಲದಲ್ಲಿಯೇ ದರ್ಶನ್ ರವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆದವರು ಯಾರು ಗೊತ್ತೇ??
ಅಭಿಮಾನಿಗಳ ಪ್ರೀತಿಯ ಡಿಬಾಸ್, ನಟ ದರ್ಶನ್ ಅವರನ್ನು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಕರೆಯುತ್ತಾರೆ. ದರ್ಶನ್ ಅವರು ಇತ್ತೀಚಿನ ದಿನಗಳಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎನ್ನಿಸಿಕೊಂಡವರಲ್ಲ, ಹಲವು ವರ್ಷಗಳ ಹಿಂದೆಯೇ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ದರ್ಶನ್ ಅವರಿಗೆ ಹರಿಯ ಪತ್ರಕರ್ತರೊಬ್ಬರು ಹೆಸರು ನೀಡಿದ್ದರು. ಆ ಪತ್ರಕರ್ತರು ವಿಷ್ಣುದಾದ ಅವರ ದೊಡ್ಡ ಅಭಿಮಾನಿ ಹಾಗೂ ಚಂದನವನದಲ್ಲಿ ನಟನಾಗಿದ್ದರು. ಹಾಗಿದ್ದರೆ ಆ ವ್ಯಕ್ತಿ ಯಾರು? ದರ್ಶನ್ ಅವರಿಗೆ ಆ ರೀತಿಯ ಹೆಸರು ಕೊಟ್ಟಿದ್ದೇಕೆ? ತಿಳಿಸುತ್ತೇವೆ ನೋಡಿ…
ದರ್ಶನ್ ಅವರಿಗೆಕ ಚಾಲೆಂಜಿಂಗ್ ಸ್ಟಾರ್ ಎನ್ನುವ ಬಿರುದ್ದನ್ನ ಸುಮ್ಮನೆ ಕೊಟ್ಟಿಲ್ಲ, ಆದರೆ ಹಿಂದೆ ಒಂದು ನೋವಿನ ಸಂಗತಿ ಇದೆ, ನಾನು ಹೀರೋ ಆಗೇ ಆಗ್ತೀನಿ ಎಂದು ದರ್ಶನ್ ಅವರು ಚಾಲೆಂಜ್ ಮಾಡಿ, ಗಾಂಧಿನಗರದಲ್ಲಿ ಕಟೌಟ್ ನಿಲ್ಲುವ ಹಾಗೆ ಮಾಡಿದರು. ಹಾಲು ಮಾರುತ್ತಿದ್ದ ಹುಡುಗ ಹೀರೋ ಆಗಿ ಯಶಸ್ಸು ಕಂಡರು. ದರ್ಶನ್ ಅವರು ಅಭಿನಯಿಸಿದ ಸಾಕಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಕಲಾಸಿಪಾಳ್ಯ, ಮೆಜೆಸ್ಟಿಕ್, ದತ್ತ, ಗಜ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ನಮ್ಮ ಪ್ರೀತಿಯ ರಾಮು, ತಾರಕ್, ಇತ್ತೀಚಿನ ರಾಬರ್ಟ್, ಹೀಗೆ ಹೇಳುತ್ತಾ ಹೋದರೆ ಸಿನಿಮಾಗಳ ಸಂಖ್ಯೆ ಬೆಳೆಯುತ್ತಾ ಹೋಗುತ್ತದೆ. ಹೀಗೆ ದರ್ಶನ್ ಅವರ ಸಕ್ಸಸ್ ರೇಟ್ ಕಂಡ ಹಿರಿಯಪತ್ರಕರ್ತರು ಬಾಕ್ಸ್ ಆಫೀಸ್ ಸುಲ್ತಾನ್ ಎಂದು ದರ್ಶನ್ ಅವರನ್ನು ಕರೆದರು. ಆ ಪತ್ರಕರ್ತ ಮತ್ಯಾರು ಅಲ್ಲ..
30 ವರ್ಷಕ್ಕಿಂತ ಹೆಚ್ಚಿನ ಸಮಯ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಸಿನಿಮಾ ರಂಗದಲ್ಲೂ ಸೇವೆ ಸಲ್ಲಿಸಿರುವ ವಿಜಯ ಸಾರಥಿ. ಇವರು ವಿಷ್ಣುದಾದ ಅವರ ದೊಡ್ಡ ಅಭಿಮಾನಿ ಆಗಿದ್ದರು, ಜೊತೆಗೆ ವಿಷ್ಣು ದಾದ ಅವರ ಸಿನಿಮಾಗಳಲ್ಲಿ ಇವರಿಗೆ ನಟಿಸುವ ಅವಕಾಶ ಸಹ ಸಿಕ್ಕಿತ್ತು. ಯಜಮಾನ, ಸಿಂಹಾದ್ರಿಯ ಸಿಂಹ ಅಂತಹ ಸಿನಿಮಾಗಳಲ್ಲಿ ವಿಜಯಸಾರಥಿ ಅವರು ನಟಿಸಿದ್ದರು. ನಟ ದರ್ಶನ್ ಅವರು ಸಹ ಆರಂಭದ ದಿನಗಳಲ್ಲೇ ವಿಷ್ಣುವರ್ಧನ್ ಅವರೊಡನೆ ನಟಿಸಿದ್ದರು. ಈ ಬಂಧನ ಸಿನಿಮಾದಲ್ಲಿ, ವಿಷ್ಣುದಾದ ಅವರ ಸಾಕುಮಗನ ಪಾತ್ರದಲ್ಲಿ ನಟಿಸಿದ್ದರು, ನಟ ದರ್ಶನ್. ಹೀಗೆ ಈ ಹಿರಿಯ ಪತ್ರಕರ್ತರು, ದರ್ಶನ್ ಅವರ ಸಕ್ಸಸ್ ನೋಡಿ, ಬಾಕ್ಸ್ ಆಫೀಸ್ ಸುಲ್ತಾನ್ ಎನ್ನುವ ಹೆಸರು ನೀಡಿದರು. ಅದೇ ರೀತಿ ದರ್ಶನ್ ಅವರು, ತೆರೆಯ ಮೇಲೆ ಮತ್ತು ನಿಜ ಜೀವನದಲ್ಲಿ ಎರಡು ಥರದಲ್ಲೂ ಸಕ್ಸಸ್ ಕಂಡಿದ್ದಾರೆ.
Comments are closed.