ಕಿಚ್ಚ ಸುದೀಪ್ ರವರ ಪ್ರೇಮ್ ಕಾಹನಿ ಬಗ್ಗೆ ನಿಮಗೆ ಗೊತ್ತೇ?? ಮಲಯಾಳಿ ಹುಡುಗಿಗೆ ಪ್ರಪೋಸ್ ಮಾಡಿದ್ದು ಹೇಗೆ ಗೊತ್ತೇ ??
ಚಂದನವನದಲ್ಲಿ ಎಲ್ಲರೂ ಇಷ್ಟಪಡುವ ಜೋಡಿಗಳಲ್ಲಿ ಒಂದು ಜೋಡಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ ಜೋಡಿ. ಈ ಕ್ಯೂಟ್ ಜೋಡಿಗೆ ಅದೆಷ್ಟು ಅಭಿಮಾನಿಗಳಿದ್ದಾರೆ ಎಂದು ಲೆಕ್ಕ ಹೇಳುವುದು ಕಷ್ಟ. ಪ್ರಿಯಾ ರಾಧಾಕೃಷ್ಣನ್ ಅವರು ಮೂಲತಃ ಮಲಯಾಳಿ, ಇವರನ್ನು ಸುದೀಪ್ ಅವರು ಇಷ್ಟಪಟ್ಟು ಮದುವೆಯಾಗಿದ್ದು ಹೇಗೆ? ಮಲಯಾಳಿ ಹುಡುಗಿಗೆ ಸುದೀಪ್ ಅವರು ಪ್ರೊಪೋಸ್ ಮಾಡಿದ್ದು ಹೇಗೆ? ಇವರಿಬ್ಬರು ಡೈವೋರ್ಸ್ ಗೆ ಅಪ್ಲೈ ಮಾಡಿ, ಮತ್ತೆ ಒಂದಾಗಿದ್ದು ಹೇಗೆ? ತಿಳಿಸುತ್ತೇವೆ ನೋಡಿ…
ಸುದೀಪ್ ಅವರು ಓದಿದ್ದು, ಬೆಳೆದದ್ದು ಎಲ್ಲವು ಶಿವಮೊಗ್ಗದಲ್ಲಿ, ಇಂಜಿನಿಯರಿಂಗ್ ಓದಲು ಬೆಂಗಳೂರಿಗೆ ಬಂದರು. ಆ ಸಮಯದಲ್ಲಿ ಥಿಯೇಟರ್ ಒಂದರಲ್ಲಿ ಪ್ರಿಯಾ ಮತ್ತು ಸುದೀಪ್ ಅವರು ಮೊದಲ ಬಾರಿಗೆ ಭೇಟಿಯಾದರು. ನಂತರ ಕಾಮನ್ ಫ್ರೆಂಡ್ ಒಬ್ಬರ ಮೂಲಕ ಇವರಿಬ್ಬರ ನಡುವೆ ಸ್ನೇಹ ಶುರುವಾಯಿತು. ಇಬ್ಬರು ಬೆಸ್ಟ್ ಫ್ರೆಂಡ್ಸ್ ಆದರು, ಆದರೆ ಆ ಸಮಯದಲ್ಲಿ ಪ್ರಿಯಾ ಅವರು ಸುದೀಪ್ ಅವರ ಜೊತೆ ಮದುವೆ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲವಂತೆ.
ಫ್ರೆಂಡ್ಶಿಪ್ ಬಳಿಕ ಇಬ್ಬರು ಕೆರಿಯರ್ ನಲ್ಲಿ ಬ್ಯುಸಿ ಆದರು. ಸುದೀಪ್ ಅವರು ಸಿನಿಮಾ ಅವಕಾಶಗಳಿಗಾಗಿ ಹುಡುಕಾಟ ನಡೆಸಿದರೆ, ಪ್ರಿಯಾ ಅವರು ಗಗನಸಖಿಯಾಗಿ ಕೆಲವು ದಿನ ಕೆಲಸ ಮಾಡಿದರು. ಸುದೀಪ್ ಅವರು ಸ್ಪರ್ಶ ಸಿನಿಮಾದಲ್ಲಿ ನಟಿಸಿದರು, ಸಿನಿಮಾ ತುಂಬಾ ಚೆನ್ನಾಗಿತ್ತು, ಸ್ಪರ್ಶ ಸಿನಿಮಾ ಇಂದ ಸುದೀಪ್ ಅವರು ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರುತ್ತಾರೆ, ಸ್ಟಾರ್ ಆಗುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಸಮಯದಲ್ಲಿ ಸುದೀಪ್ ಅಣ್ಣಾವ್ರ ಕಿಡ್ನ್ಯಾಪ್ ಆಗಿದ್ದ ಕಾರಣ, ಥಿಯೇಟರ್ ಗಳು ಬಂದ್ ಆಗಿ, ಸಿನಿಮಾ ಪ್ರದರ್ಶನ ಕಾಣಲಿಲ್ಲ.
ಅದಾದ ಬಳಿಕ ಮತ್ತೆ ಸುದೀಪ್ ಅವರು ಅವಕಾಶಕ್ಕಾಗಿ ಕಾಯಬೇಕಿತ್ತು. ಆ ಸಮಯದಲ್ಲಿ ಸಹ ಪ್ರಿಯಾ ಮತ್ತು ಸುದೀಪ್ ಅವರ ನಡುವೆ ಇದ್ದ ಪ್ರೀತಿ ಕಡಿಮೆಯಾಗಲಿಲ್ಲ. ನಂತರ ಸುದೀಪ್ ಅವರಿಗೆ ಹುಚ್ಚ ಸಿನಿಮಾ ಅವಕಾಶ ಸಿಕ್ಕಿತು. ಹುಚ್ಚ ಸಿನಿಮಾ ಅವಕಾಶ ಮೊದಲಿಗೆ ಶಿವಣ್ಣ ಮತ್ತು ಉಪೇಂದ್ರ ಅವರಿಗೆ ಹೋಗಿತ್ತು, ಅವರಿಬ್ಬರು ತಿರಸ್ಕರಿಸಿದ ನಂತರ ಸುದೀಪ್ ಅವರಿಗೆ ಅವಕಾಶ ಹೋಯಿತು. ಸುದೀಪ್ ಅವರು ಒಪ್ಪಿಕೊಂಡು ಸಿನಿಮಾ ಮಾಡಿದರು, ಹುಚ್ಚ ಸಿನಿಮಾ ಸೂಪರ್ ಹಿಟ್ ಆಗಿ, ಸುದೀಪ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತು..
ಅದಾದ ಬಳಿಕ ಸುದೀಪ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ, ಸಾಲು ಸಾಲು ಸಿನಿಮಾಗಳು ಅವಕಾಶಗಳು ಬರಲು ಶುರುವಾದವು. ಜೊತೆಗೆ ಹಿಟ್ ಸಿನಿಮಾಗಳನ್ನು ನೀಡಿದರು. ಆ ಸಮಯದಲ್ಲೇ ಸುದೀಪ್ ಮತ್ತು ಪ್ರಿಯಾ ಅವರ ಲವ್ ಸ್ಟೋರಿ ಮನೆಯಲ್ಲಿ ಗೊತ್ತಾಯಿತು. ಮೊದಲಿಗೆ ಇಬ್ಬರ ಮನೆಯಲ್ಲೂ ಒಪ್ಪಲಿಲ್ಲ, ನಂತರ ಇಬ್ಬರು ಮನೆಯವರ ಜೊತೆ ಮಾತನಾಡಿ ಮದುವೆಯಾದರು. ಸುದೀಪ್ ಅವರಿಗೆ ಎಷ್ಟು ಫೀಮೇಲ್ ಫ್ಯಾನ್ಸ್ ಇದ್ದಾರೆ ಎಂದು ಗೊತ್ತಾಗಿದ್ದು ಅವರ ಮದುವೆ ದಿನವೇ ಅಂತೆ.
ಆ ದಿನ ಸಾಕಷ್ಟು ಮಹಿಳಾ ಅಭಿಮಾನಿಗಳು ಕಣ್ಣೀರು ಹಾಕಿದ್ದರಂತೆ. ಹೀಗೆ ಸುದೀಪ್ ಮತ್ತು ಪ್ರಿಯಾ ಅವರ ಲವ್ ಸ್ಟೋರಿ ಮದುವೆಗೆ ಬಂದಿತು, ಮದುವೆಯಾಗಿ ಎರಡು ವರ್ಷದ ನಂತರ ಮುದ್ದಾದ ಹೆಣ್ಣು ಮಗುವು ಜನಿಸಿತು. ಮದುವೆ ಬಳಿಕ ಸುದೀಪ್ ಅವರು ಸೂಪರ್ ಸ್ಟಾರ್ ಆದರು. ಹೀಗೆ ಸುದೀಪ್ ಅವರು ಸಿನಿಮಾಗಳಲ್ಲಿ ಬ್ಯುಸಿ ಆದರು. ಆ ಸಮಯದಲ್ಲಿ ಸುದೀಪ್ ಅವರು, ತೆಲುಗು ಹಿಂದಿ ಸಿನಿಮಾಗಳಲ್ಲಿ ಸಹ ನಟಿಸುತ್ತಾ, ಸಿಸಿಎಲ್ ಪಂದ್ಯಗಳನ್ನು ಆಡುತ್ತಾ ಬಹಳ ಬ್ಯುಸಿ ಆಗಿಬಿಟ್ಟರು.
ಹಾಗಾಗಿ ಕುಟುಂಬಕ್ಕೆ ಅದರಲ್ಲೂ ಪತ್ನಿ ಪ್ರಿಯಾ ಅವರಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಲಿಲ್ಲ. 2016ರಲ್ಲಿ ಪ್ರಿಯಾ ಅವರು ಸುದೀಪ್ ಅವರ ಮನೆಯಿಂದ ಹೊರಬಂದು ಅಪಾರ್ಟ್ಮೆಂಟ್ ಒಂದಕ್ಕೆ ಶಿಫ್ಟ್ ಆದರು. ಆಗ ವಿಚ್ಛೇದನಕ್ಕೆ ಅಪ್ಲೈ ಮಾಡಿದರು. ಇಬ್ಬರಿಗೂ ವಿಚ್ಛೇದನ ಬೇಕೋ ಬೇಡವೋ ಎಂದು ತೀರ್ಮಾನ ಮಾಡಲು ಕೋರ್ಟ್ ಸಮಯ ನೀಡಿದಾಗ, ಸುದೀಪ್ ಅವರು ಮತ್ತು ಪ್ರಿಯಾ ಅವರು ಇಬ್ಬರು ಕೂತು ಚರ್ಚೆ ಮಾಡಿದರು. ಆಗ ಇಬ್ಬರು ಒಂದು ನಿರ್ಧಾರಕ್ಕೆ ಬಂದರು.
ತಾವಿಬ್ಬರು ಬೇರೆಯಾದರೆ ಮಗಳು ಒಂಟಿಯಾಗುತ್ತಾಳೆ ಎಂದು ಭಾವಿಸಿ, ಇಬ್ಬರು ಕೂತು ಮಾತನಾಡಿಕೊಂಡು, ಮಗಳಿಗಾಗಿ ಒಂದಾದರು. ತಮ್ಮ ಸಮಸ್ಯೆಗಳನ್ನೆಲ್ಲಾ ಕೂತು ಬಗೆಹರಿಸಿಕೊಂಡರು. ಈಗ ಸುದೀಪ್ ಮತ್ತು ಪ್ರಿಯಾ ದಂಪತಿ, ಮಾದರಿ ದಂಪತಿಗಳಾಗಿದ್ದಾರೆ. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬಂದರು ಸಹ, ಕೂತು ಬಗೆಹರಿಸಿಕೊಂಡು ಒಂದಾಗಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
Comments are closed.