ನಮ್ಮ ನಿಮ್ಮೆಲ್ಲರ ನೆಚ್ಚಿನ ವಿಷ್ಣುವರ್ಧನ್ ರವರು ದೊಡ್ಡ ನಟನಾಗಿದ್ದರೂ ತಮ್ಮ ಕೊನೆಯ ಸಿನೆಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತೇ??
ಕನ್ನಡ ಚಿತ್ರರಂಗದ ಸಾಹಸಸಿಂಹ, ಅಭಿನವ ಭಾರ್ಗವ ಎಂದೇ ಹೆಸರು ಪಡೆದು, ಒಳ್ಳೆಯ ಗುಣ, ಹೃದಯವಂತಿಕೆ ಮತ್ತು ಸರಳತೆಗೆ ಮತ್ತೊಂದು ಹೆಸರು ಎನ್ನುವ ಹಾಗೆ ಬಾಳಿ ಬದುಕಿದವರು ಸಾಹಸಸಿಂಹ ವಿಷ್ಣುವರ್ಧನ್ ಅವರು. ವಿಷ್ಣುದಾದ ಈಗಲೂ ಎಲ್ಲರ ಮನಸ್ಸಿನಲ್ಲಿ ಅಮರವಾಗಿ ಉಳಿದಿದ್ದಾರೆ. ಅವರಿಲ್ಲದೆ ಹೋದರು, ಅವರ ಮೇಲಿನ ಅಭಿಮಾನ, ಪ್ರೀತಿ, ಗೌರವ ಯಾವುದು ಕೂಡ ಅಭಿಮಾನಿಗಳಲ್ಲಿ ಕಡಿಮೆಯಾಗಿಲ್ಲ. ಒಳ್ಳೆಯ ಸಿನಿಮಾಗಳಲ್ಲೇ ನಟಿಸುತ್ತಿದ್ದ ವಿಷ್ಣುದಾದ ಅವರು, ತಮ್ಮ ಕೊನೆಯ ಸಿನಿಮಾಗೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನೀವು ಆಶ್ಚರ್ಯ ಪಡುವುದು ಗ್ಯಾರಂಟಿ.
ವಿಷ್ಣುವರ್ಧನ್ ಅವರು ಮೂಲತಃ ಮೈಸೂರಿನವರು. ಪುಟ್ಟಣ್ಣ ಕಣಗಾಲ್ ಅವರು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದ ಅಪ್ರತಿಮ ಕೊಡುಗೆ ವಿಷ್ಣುವರ್ಧನ್ ಅವರು, ನಾಗರಹಾವು ಸಿನಿಮಾದ ಆಂಗ್ರಿ ಯಂಗ್ ಮ್ಯಾನ್ ಲುಕ್ ಅನ್ನು ಇಂದಿಗೂ ಯಾರು ಮರೆತಿಲ್ಲ. ಆ ಸಿನಿಮಾ ಆಗಿನ ಕಾಲದಲ್ಲಿ ದೊಡ್ಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಇಮೇಜ್ ತಂದುಕೊಟ್ಟಿತ್ತು. ಅದಾದ ಬಳಿಕ ವಿಷ್ಣುವರ್ಧನ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ, ಹಲವು ರೀತಿಯ ವಿಭಿನ್ನ ಪಾತ್ರಗಳಲ್ಲಿ ನಟಿಸಿ, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು, ಅವರಿಗೆ ದೊಡ್ಡ ಅಭಿಮಾನಿ ಬಳಗ ಸಹ ಬೆಳೆಯಿತು.ಡಾ.ರಾಜ್ ಕುಮಾರ್ ಅವರನ್ನು ಹೊರತುಪಡಿಸಿದರೆ, ಕನ್ನಡದ ಮೇರು ನಟರ ಸಾಲಿನಲ್ಲಿ ಬರುವವರು ವಿಷ್ಣುದಾದ.
ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ. ಭಾಷೆಯಲ್ಲಿ ಸಹ ನಟಿಸಿ, ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದ್ದರು. ದಿ ಫೀನಿಕ್ಸ್ ಆಫ್ ಇಂಡಿಯನ್ ಸಿನಿಮಾ ಎಂದೇ ವಿಷ್ಣುವರ್ಧನ್ ಅವರನ್ನು ಕರೆಯಲಾಗುತ್ತಿತ್ತು. ವಿಷ್ಣುವರ್ಧನ್ ಅವರು ಮೇರುನಟರಾಗಿದ್ದ ಕಾರಣ ಅವರು ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಈಗಿನ ಕಲಾವಿದರ ಹಾಗೆ ಕೋಟಿ ರೂಪಾಯಿ ಸಂಭಾವನೆಯನ್ನೇ ವಿಷ್ಣುದಾದ ಪಡೆದುಕೊಳ್ಳುತ್ತಿದ್ದರು ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ವಿಷ್ಣುದಾದ ಅವರ ಆಪ್ತರು ತಿಳಿಸಿರುವ ಪ್ರಕಾರ ಅವರು ನಟಿಸಿದ ಕೊನೆಯ ಸಿನಿಮಾ ಆಗಿದ್ದ, ಆಪ್ತರಕ್ಷಕ ಸಿನಿಮಾಗೆ ವಿಷ್ಣುವರ್ಧನ್ ಅವರು 65 ಲಕ್ಷ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದರು. ಈ ಮೊತ್ತ ಕೇಳಿ ನಿಮಗೂ ಆಶ್ಚರ್ಯ ಎನ್ನಿಸಬಹುದು. ನೀವು ಮೊದಲು ಸೇಫ್ ಆಗಿ ಲಾಭ ಮಾಡಿ ಎಂದು ನಿರ್ಮಾಪಕರಿಗೆ ಹೇಳುತ್ತಿದ್ದರಂತೆ ವಿಷ್ಣುದಾದ. ಈ ವಿಚಾರ ಅವರ ಸರಳತೆ ಎಂಥದ್ದು ಎನ್ನುವುದನ್ನು ತಿಳಿಸುತ್ತದೆ.
Comments are closed.