Neer Dose Karnataka
Take a fresh look at your lifestyle.

ನಿಮ್ಮ ಮಗನನ್ನು ಮುಂದೆ ಸಿನಿಮಾ ಹೀರೋ ಆಗಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಡಿ ಬಾಸ್, ಹೇಳಿದ್ದೇನು ಗೊತ್ತೇ??

“ಡಿ ಬಾಸ್” ಅಬ್ಬಾ! ಹೆಸರು ಮಾತ್ರ ಸಖತ್ ಪವರ್ ಪಡೆದಿರುವ ಪದ ಎಂದರೆ ತಪ್ಪಾಗಲಾರದು. ಒಬ್ಬ ನಟನನ್ನು ಎಷ್ಟು ಪ್ರೀತಿಸಬೇಕು ಎಂದು ಇವರ ಅಭಿಮಾನಿಗಳನ್ನು ನೋಡಿ ಕಲಿಯ ಬೇಕು ಎಂದೆನಿಸುತ್ತದೆ. ಅಷ್ಟರ ಮಟ್ಟಿಗೆ ಅಭಿಮಾನಿಗಳ ಬಳಗವನ್ನೇ ಹೊಂದಿರುವ ಸ್ಟಾರ್ ನಟ ಮತ್ತು ಬಾಕ್ಸ್ ಆಫೀಸ್ ಸುಲ್ತಾನ.ಇವರು ಒಬ್ಬ ಜನಪ್ರಿಯ ಖಳನಾಯಕನ ಮಗನಾದರೂ ಇವರು ನಟನಾಗಬೇಕು ಎಂದು ನಿರ್ಧರಿಸಿದಾಗ, ಇವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಬರೀ ಕಷ್ಟ ಅವಮಾನಾಗಳನ್ನೇ ಅನುಭವಿಸಿ ಇದೀಗ ಅಗ್ರ ಸ್ಥಾನದಲ್ಲಿ ಬಂದು ನಿಂತಿರುವ ಹೆಮ್ಮೆಯ ಕನ್ನಡಿಗ.

ಇವರನ್ನು ಇಷ್ಟ ಪಡಲು ಕೇವಲ ನಟನಾಗಿ ಮಾತ್ರ ಅಲ್ಲಾ ,ಇವರು ಮಾಡುವ ಕೆಲಸಗಳನ್ನು ನೋಡಿದರೆ ಇವರನ್ನು ಇಷ್ಟ ಪಡದೆ ಇರಲು ಸಾಧ್ಯವೇ ಇಲ್ಲಾ. ಸಾಮಾನ್ಯವಾಗಿ ನಟರೆಲ್ಲ ತಮ್ಮ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿಕೊಂಡರೆ ನಮ್ಮ “ಡಿ ಬಾಸ್” ತಮ್ಮ ಹುಟ್ಟು ಹಬ್ಬವನ್ನು ಅನಾಥಾಶ್ರಮ,ವೃಧಾಶ್ರಮ ಹಾಗೂ ಈತರೆಗಳ ಸಹಾಯ ಮಾಡುವ ಮೂಲಕ ಆಚರಿಸಿಕೊಳ್ಳುತ್ತಾರೆ.ಇನ್ನು ಅವರ ಅಭಿಮಾನಿಗಳು ಸಹ “ಡಿ ಬಾಸ್” ಹಾದಿಯನ್ನೇ ಪಾಲಿಸುತ್ತಾರೆ. ಇವರ ಬರ್ತಡೇ ಬಂದರೆ ಅದೇಷ್ಟೋ ಮಂದಿಗೆ ನೆರವಾಗುವುದರಲ್ಲಿ ಇವರು ದೊಡ್ಡ ಮನುಷ್ಯ. ಲಾಕ್ಡೌನ್ ಸಂಧರ್ಭದಲ್ಲಿ ಕೂಡ ಅದೆಷ್ಟೋ ಕಲಾವಿದರ ನೆರವಿಗೆ ನಿಂತವರು.

ಇದೀಗ ‘ಡಿ ಬಾಸ್’ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗೆ ಇದೀಗ “ದರ್ಶನ್” ಅವರು ಉತ್ತರ ನೀಡಿದ್ದಾರೆ. ಹಾಗಿದ್ದರೆ ಅವರ ಅಭಿಮಾನಿಗಳು ಕೇಳುತ್ತೀರಿವ ಪ್ರಶ್ನೆಗಳು ಏನೂ? ಎಂದೆಲ್ಲಾ ನಿಮ್ಮಲ್ಲಿ ಪ್ರಶ್ನೆಗಳು ಮೂಡುವುದು ಸಹಜ, ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಮುಂದಿನ ಸಾಲುಗಳನ್ನು ಓದಿ.. ಹಲವಾರು ವರ್ಷಗಳಿಂದ ‘ಡಿ ಬಾಸ್’ ಅವರ ಏಕೈಕ ಪುತ್ರ “ವಿನೀಶ್ ತೂಗುದೀಪ” ಅವರನ್ನು ಯಾವಾಗ ನಾವು ಬೆಳ್ಳಿಯ ಪರೆದೆ ಮೇಲೆ ನೋಡಲು ಅವಕಾಶ ಕಲ್ಪಿಸುತ್ತೀರಾ ಎಂದು ಕೇಳುತ್ತಲೇ ಇದ್ದರು. ಈ ಪ್ರಶ್ನೆಯನ್ನು ಒಂದು ಖಾಸಗಿ ವಾಹಿನಿಯಲ್ಲಿ ಇಂಟರ್ವ್ಯೂ ಕೊಡುವ ವೇಳೆಯಲ್ಲಿ ಕೇಳಿದ ನಿರೂಪಕರಿಗೆ ಮತ್ತು ಅದೆಷ್ಟೋ ದಿನಗಳಿಂದ ತಮ್ಮ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಅದೇನಪ್ಪಾ ಅಂತೀರಾ,ಮುಂದಿನ ಸಾಲುಗಳನ್ನು ಓದಿ.

ನಾವು ಯಾವತ್ತೂ ನಡೆದು ಬಂದ ಹಾದಿಯನ್ನು ಮರೆಯಬಾರದು. ಹಾಗೆಯೇ,ಯಾವತ್ತಿಗೂ ಕಷ್ಟದಿಂದ  ಸುಖದ ಜೀವನಕ್ಕೆ ಬಂದಾಗ ಮಾತ್ರ ಆ ಜೀವನದ ಅರ್ಥ ತಿಳಿಯುವುದು. ನಾವು ಕಷ್ಟಪಟ್ಟಿದ್ದೇವೆ ನಮ್ಮ ಮಕ್ಕಳಿಗೆ ಕಷ್ಟ ಬೇಡ ಎಂದೆಲ್ಲಾ ಯೋಚಿಸಿ ಅವರ ಹಾದಿಯನ್ನು ಸುಗಮ ಮಾಡಿಕೊಟ್ಟರೆ, ಅವರಿಗೆ ಮನುಷ್ಯರ ಮತ್ತು ಹಣದ  ಬೆಲೆ ಗೊತ್ತಿರುವುದಿಲ್ಲ. ಹಾಗಾಗಿ ಅವರು ನಾಯಕನಾಗಬೇಕೆಂದರೆ, ಮೊದಲು ಕಸ ಗುಡಿಸಿ ನಂತರ ಮುಂದಿನ ಹಂತಗಳಿಗೆ ತಲುಪಲಿ ಎಂದರು. ಈಗಾಗಲೇ ಐರಾವತ ಮತ್ತು ಯಜಮಾನ ಚಿತ್ರಗಳಲ್ಲಿ ಅಭಿನಯಿಸಿರುವ ಇವರ ಪುತ್ರನನ್ನು ಆದಷ್ಟು ಬೇಗ ಬೆಳ್ಳಿತೆರೆಯ ಮೇಲೆ ತಂದು ತಮ್ಮ ಅಭಿಮಾನಿಗಳಿಗೆ ಖುಷಿ ಪಡಿಸಲಿ ಎಂದು ನಾವೆಲ್ಲರೂ ಆಶಿಸೋಣ.

Comments are closed.