Neer Dose Karnataka
Take a fresh look at your lifestyle.

ಮಾತು ನಟನೆಯಲ್ಲಿಯೇ ಎಲ್ಲರನ್ನೂ ಮೋಡಿ ಮಾಡಿರುವ ಅಮೂಲ್ಯ ಖ್ಯಾತಿಯ ನಿಶಾ ರವರ ನಿಜ ಜೀವನ ಹೇಗಿದೆ ಗೊತ್ತೇ?? ಇವರ ಬ್ಯಾಕ್ ಗ್ರೌಂಡ್ ಏನು ಗೊತ್ತೇ?

ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಅಮೂಲ್ಯ ಕಿರುತೆರೆಯ ಪಟಾಕಿ ಎಂದೇ ಫೇಮಸ್ ಆದವರು. ಗಟ್ಟಿಮೇಳ ಧಾರಾವಾಹಿಯ ಇವರು ಮಾತನಾಡುವ ಪಂಚ್ ಡೈಲಾಗ್ ಗಳು, ಬೈಗುಳಗಳೆಂದರೆ ವೀಕ್ಷಕರಿಗೆ ತುಂಬಾ ಇಷ್ಟ. ಅಮೂಲ್ಯ ಫೇಮಸ್ ಆಗಿದ್ದೇ ಈ ಡೈಲಾಗ್ ಗಳ ಮೂಲಕ ಎಂದರೆ ತಪ್ಪಾಗುವುದಿಲ್ಲ. ಅಮೂಲ್ಯ ಪಾತ್ರದಲ್ಲಿ ನಟಿಸಿ, ಕರ್ನಾಟಕದ ಪ್ರತಿ ಮನೆಗಳಲ್ಲೂ ಹತ್ತಿರವಾಗಿರುವ ನಟಿ ನಿಶಾ ರವಿಕೃಷ್ಣನ್ ಅವರು ನಿಜ ಜೀವನದಲ್ಲಿ ಹೇಗಿದ್ದಾರೆ ? ಅವರ ಲೈಫ್ ಸ್ಟೈಲ್ ಹೇಗಿದೆ ಗೊತ್ತಾ?

ನಿಶಾ ರವಿಕೃಷ್ಣನ್ ಅವರಿಗೆ ಟೆಲಿವಿಷನ್ ಎನ್ನುವುದು ಹೊಸದಲ್ಲ, ಇವರು ಚಿಕ್ಕ ವಯಸ್ಸಿನಲ್ಲೇ, 6ನೇ ತರಗತಿಯಿಂದ 10ನೇ ತರಗತಿ ಓದುವವರೆಗೂ, ಮಕ್ಕಳ ಚಾನೆಲ್ ನಲ್ಲಿ ನಿರೂಪಣೆ ಮಾಡುತ್ತಿದ್ದರು. ನಿಶಾ ಅವರು ಅಷ್ಟು ಚಿಕ್ಕ ವಯಸ್ಸಿನಲ್ಲೇ ಒಂದು ಕಾರ್ಯಕ್ರಮವನ್ನು ತಾವೇ ಡಿಸೈನ್ ಮಾಡಿ, ನಡೆಸಿಕೊಡುವಷ್ಟು ಸಾಮರ್ಥ್ಯ ಹೊಂದಿದ್ದರು. ಆಗಿನಿಂದಲೇ ಬಣ್ಣದ ಲೋಕದ ಮೇಲೆ ಇವರಿಗೆ ಸೆಳೆತ ಇತ್ತು..

ಆದರೆ ನಿರೂಪಣೆ ಮತ್ತು ನಟನೆಯಿಂದ ವಿದ್ಯಾಭ್ಯಾಸಕ್ಕೆ ತೊಂದ ಮಾಡಿಕೊಂಡಿರಲಿಲ್ಲ. ಓದು ಮತ್ತು ವಿದ್ಯೆ ಎಲ್ಲವನ್ನು ಬ್ಯಾಲೆನ್ಸ್ ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಿದ್ದರು ನಿಶಾ. ಮೊದಲಿಗೆ ನಿಶಾ ಅವರು ಸರ್ವಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ನಟಿಸಿದರು, ಆದರೆ ನಿಶಾ ಅವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದ್ದು ಗಟ್ಟಿಮೇಳ ಧಾರಾವಾಹಿ. ಗಟ್ಟಿಮೇಳ ಧಾರಾವಾಹಿ ಇವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನೇ ತಂದುಕೊಟ್ಟಿದೆ. ಇವರು ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ ಮತ್ತು ನೃತ್ಯಗಾರ್ತಿಯಾಗಿ ಸಹ ಗುರುತಿಸಿಕೊಂಡಿದ್ದಾರೆ.

ನಿಶಾ ರವಿಕೃಷ್ಣನ್ ಅವರು ನಿಜ ಜೀವನದಲ್ಲಿ ಗಟ್ಟಿಮೇಳ ಧಾರವಾಹಿಯ ಅಮೂಲ್ಯ ಪಾತ್ರಕ್ಕೆ ತದ್ವಿರುದ್ಧ ಸ್ವಭಾವದವರಾಗಿದ್ದರೆ. ನಿಶಾ ನಿಜ ಜೀವನದಲ್ಲಿ ಸೌಮ್ಯ ಸ್ವಭಾವದವರು ಹಾಗೂ ಹೆಚ್ಚಾಗಿ ಮಾತನಾಡುವ ಸ್ವಭಾವದವರು ಅಲ್ಲ, ಹೀಗಿರುವ ಹುಡುಗಿ ಅಮೂಲ್ಯ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಹಾಗೂ ಅಭಿಮಾನಿಗಳನ್ನು ಗಳಿಸಿದ್ದಾರೆ.

ನಿಶಾ ರವಿಕೃಷ್ಣನ್ ಅವರಿಗೆ ನಿಜ ಜೀವನದಲ್ಲಿ ಶ್ವಾನಗಳೆಂದರೆ ತುಂಬಾ ಇಷ್ಟ, ತಮ್ಮ ಮನೆಯಲ್ಲಿರುವ ಮುದ್ದಿನ ಶ್ವಾನಕ್ಕೆ ಬಾನಿ ಎಂದು ಹೆಸರಿಟ್ಟು, ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ನಿಶಾ ಅವರಿಗೆ ಚಾಕೊಲೇಟ್ ಅಂದ್ರೆ ತುಂಬಾ ಇಷ್ಟ. ಹೆಚ್ಚಾಗಿ ಕುಟುಂಬ ಮತ್ತು ಫ್ರೆಂಡ್ಸ್ ಜೊತೆಗೆ ಕಾಲ ಕಳೆಯಲು ಇಷ್ಟಪಡುತ್ತಾರೆ ನಿಶಾ ರವಿಕೃಷ್ಣನ್. ಸರಳ ಸ್ವಭಾವದ ಹುಡುಗಿ ಇವರು, ಎಲ್ಲರಿಗೂ ಇಷ್ಟ ಆಗುವಂಥ ವ್ಯಕ್ತಿತ್ವ ಹೊಂದಿದ್ದಾರೆ..

ಇಂದು ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ನಿಶಾ, ಬೆಳ್ಳಿತೆರೆಯಲ್ಲಿ ಮಿಂಚುವ ಕನಸನ್ನು ಕಂಡಿದ್ದಾರೆ. ವಿನಯ್ ರಾಜ್ ಕುಮಾರ್ ಅಭಿನಯದ ಅಂದೊಂದಿತ್ತು ಕಾಲ ಸಿನಿಮಾದಲ್ಲಿ ನಟಿಸುವ ಅವಕಾಶ ನಿಶಾ ಅವರಿಗೆ ಸಿಕ್ಕಿದೆ. ಕನ್ನಡವಷ್ಟೇ ಅಲ್ಲದೆ, ತೆಲುಗು ಕಿರುತೆರೆಯಲ್ಲಿ ಸಹ ಸಕ್ರಿಯರಾಗಿರುವ ನಿಶಾ, ಅಲ್ಲಿನ ಜನರಿಗೂ ತುಂಬಾ ಇಷ್ಟವಾಗಿದ್ದಾರೆ. ಈ ಪ್ರತಿಭೆ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಹೀಗೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ.

Comments are closed.