ಯಾವುದೇ ಅವಾರ್ಡ್ ಕಾರ್ಯಕ್ರಮಗಳಿಗೆ ದರ್ಶನ್ ಪ್ರಶಸ್ತಿ ಗೆಲ್ಲುತ್ತೇನೆ ಎಂದು ಗೊತ್ತಿದ್ದರೂ ಹೋಗುವುದಿಲ್ಲ ಯಾಕೆ ಗೊತ್ತೇ?
“ದರ್ಶನ್ ತೂಗುದೀಪ” ಈ ಹೆಸರಿಗೆ ನಮ್ಮ ಕನ್ನಡ ಚಿತ್ರರಂಗದಲ್ಲಿ ಬೇರೆಯೇ ತೂಕವಿದೆ ಎಂದರೆ ತಪ್ಪಾಗಲಾರದು. ಈ ನಟನಾಗಿಯೂ ಮತ್ತು ಅವರ ಗುಣಕ್ಕೂ ಇಲ್ಲಿ ಎಷ್ಟೋ ಜನ ಅಭಿಮಾನಿಗಳ ಬಳಗಳವನ್ನು ಹೊಂದಿದ್ದಾರೆ.ಇವರು ನಟನಾದ ಕಥೆ ನಿಮಗೆಲ್ಲರಿಗೂ ತಿಳಿದೇ ಇದೇ. ಇವರು ಒಬ್ಬ ಪ್ರಖ್ಯಾತ ಖಳನಾಯಕ ಎಂದೇ ಗುರುತಿಸಿಕೊಂಡಿದ್ದ “ತೂಗುದೀಪ ಶ್ರೀನಿವಾಸ್” ಅವರ ಎರಡನೆಯ ಮಗ. ಹೀಗಿದ್ದರೂ ಕೂಡ ಇವರ ನಟನೆಯ ಹಾದಿಯನ್ನು ಆಯ್ಕೆಮಾಡಿಕೊಂಡಾಗ ಆ ಹಾದಿ ಬಹಳ ಕ್ಲಿಷ್ಟಕರ ವಾಗಿತ್ತು.
ಸಾಕಷ್ಟು ಅವಮಾನ ಮತ್ತು ತಿರಸ್ಕಾರಗಳನ್ನು ಎದುರಿಸಿ ಇದೀಗ ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಗುರುತಿಸಿಕೊಂಡಿರುವ ನಟ. ನಮ್ಮ “ಡೀ ಬಾಸ್” ಬರೋಬ್ಬರಿ “55” ಚಿತ್ರಗಳಲ್ಲಿ ನಟಿಸಿ ಶಭಾಶ್ ಗಿರಿ ಗಿಟ್ಟಿಸಿಕೊಂಡಿದ್ದಾರೆ. ಇವರ ’55 ನೆ’ ಚಿತ್ರದ ಚಿತ್ರೀಕರಣ ಇನ್ನೇನು ಮುಗಿಯುವ ಹಂತಲ್ಲಿದೆ. ಈ ಚಿತ್ರದ ನಾಯಕ ನಟಿಯಾಗಿ “ರಚಿತಾ ರಾಮ್” ಅವರು ಆಯ್ಕೆ ಆಗಿದ್ದು. ನಟನಿಂದ ಪೋಷಕ ಪಾತ್ರಕ್ಕೆ ಪ್ರೊಮೋಷನ್ ಪಡೆದಿರುವ “ರವಿಚಂದ್ರನ್” ಅವರು ಈ ಸಿನಿಮಾದಲ್ಲಿ ದರ್ಶನ್ ಅವರ ತಂದೆ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹಲವಾರು ಮೂಲಗಳು ತಿಳಿಸಿವೆ.
ಇನ್ನು ನಟನ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಹಾಗೆಯೇ ಅವನ ಪರಿಶ್ರಮಕ್ಕೆ ಪ್ರತಿಫಲವಾಗಿ ಪ್ರಸಂಸಿಸಲು “ಅವಾರ್ಡ್ ಗಳನ್ನು” ನೀಡುತ್ತಾರೆ. ಕೇವಲ ನಟರಿಗೆ ಮಾತ್ರವಲ್ಲ ಸಿನೆಮಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಪ್ರತಿಯೊಂದು ವ್ಯಕ್ತಿಗಳ ಪರಿಶ್ರಮಕ್ಕೆ ಅನುಗುಣವಾಗಿ ಬಿರುದ್ಧುಗಳನ್ನು ನೀಡಿ ಗೌರವಿಸಲಾಗುವುದು. ಆದರೆ “ದರ್ಶನ್” ಅವರಿಗೆ ಸಾಕಷ್ಟು ಅವಾರ್ಡ್ ಗಳು ಬಂದಿದ್ದರು ಸಹ, ಇವರು ಯಾವುದೇ ಅವಾರ್ಡ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ. ಇದಕ್ಕೆ ಕಾರಣ ಸಹ ಇದೇ. ಏನೆಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ..
ದರ್ಶನ್ ಅವರಿಗೆ ಕಲಾವಿದರ ಪರಿಶ್ರಮವನ್ನು ಗುರುತಿಸಿ ಗೌರವಿಸುವ ರೀತಿ ಇಷ್ಟ. ಆದರೆ ಆ ಅವಾರ್ಡ್ ಬಂದಿರುವ ಇತರರಿಗೂ ಮತ್ತು ನಮ್ಮವರಿಗೂ ಬೇಧ ಭಾವ ಮಾಡುವ ರೀತಿ ಇಷ್ಟವಿಲ್ಲ. ಹಾಗಾಗಿ ಎಲ್ಲಾ ಕಲವಿದರಿಗೂ ಸಮಾನ ರೀತಿಯ ಗೌರವ ದೊರಕುವ ವರೆಗೂ ದರ್ಶನ್ ತೂಗುದೀಪ ಅವರು ಯಾವ ಅವಾರ್ಡ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇವರು ಕೊಟ್ಟಿರುವ ಹೇಳಿಕೆ ಕೇವಲ ಲೋಕಲ್ ಅವಾರ್ಡ್ ಫಂಕ್ಷನ್ ಗಳಿಗೆ ಮಾತ್ರವಲ್ಲ, ಇಂಟರ್ನ್ಯಾಷನಲ್ ಲೇವಲ್ ನಲ್ಲಿ ನಡೆಯುವ “ಸೈಮಾ” ಅವಾರ್ಡ್ ಫಂಕ್ಷನ್ ಗಳಿಗೂ ಇವರು ಭಾಗವಹಿಸುವುದಿಲ್ಲ. ದರ್ಶನ್ ಅವರ “ಯಜಮಾನ” ಚಿತ್ರಕ್ಕೆ ಬರೋಬ್ಬರಿ “ಐದು ಅವಾರ್ಡ್” ದೊರಕಿದ್ದು. “ಉತ್ತಮ ನಾಯಕ ನಟ” ಎಂಬ ಬಿರುದನ್ನು ಯಜಮಾನ ಚಿತ್ರಕ್ಕಾಗಿ ನಟ ದರ್ಶನ್ ಅವರಿಗೆ ಕೊಟ್ಟು ಗೌರವಿಸಲಾಗಿದೆ.
Comments are closed.