ಗೆದ್ದು ಕೋಟಿ ಕೋಟಿ ಗಳಿಕೆ ಮಾಡಬೇಕಾಗಿದ್ದ ವಿಷ್ಣು ಸರ್ ಸಿನಿಮಾ ಪ್ರಚಾರವಿಲ್ಲದೆ ಸೋತು ಹೋಯ್ತು. ಅದೇಕೆ ಹಾಗಾಯಿತು ಗೊತ್ತೇ??
ಚಿತ್ರರಂಗದಲ್ಲಿ ದಿನಕ್ಕೊಂದು ಹೊಸ ಸಿನಿಮಾ ಸೆಟ್ಟೇರುತ್ತದೆ, ವಾರದಲ್ಲಿ ಒಂದಲ್ಲ ಒಂದು ಸಿನಿಮಾ ಬಿಡುಗಡೆ ಆಗುತ್ತದೆ. ಆದರೆ ಬಿಡುಗಡೆಯಾದ ಎಲ್ಲಾ ಸಿನಿಮಾಗಳು ಗೆಲ್ಲುವುದಿಲ್ಲ. ಕೆಲವೊಮ್ಮೆ ಅತಿಹೆಚ್ಚು ನಿರೀಕ್ಷೆ ಹುಟ್ಟಿಸುವ ಸಿನಿಮಾಗಳು ಸೋತಿದ್ದು, ಈ ಸಿನಿಮಾ ಗೆಲ್ಲುತ್ತಾ ಎಂದುಕೊಂಡಂತಹ ಸಿನಿಮಾಗಳು ಸೂಪರ್ ಹಿಟ್ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಒಂದು ಸಿನಿಮಾ ಸೋಲಲು ಅಥವಾ ಗೆಲ್ಲಲು, ಚಿತ್ರತಂಡದಿಂದ ತೆಗೆದುಕೊಳ್ಳುವ. ನಿರ್ಧಾರಗಳು ಹೀಗೆ ಸಾಕಷ್ಟು ಕಾರಣಗಳಿವೆ. ಈ ರೀತಿ ಒಳ್ಳೆಯ ಪ್ರಚಾರ ಸಿಗದೆ ಸೋತ ಸಿನಿಮಾಗಳಲ್ಲಿ ಒಂದು ನಮ್ಮೆಲ್ಲರ ಮೆಚ್ಚಿನ ವಿಷ್ಣುದಾದ ಅವರು ನಟಿಸಿದ ಒಂದು ಸಿನಿಮಾ.
ಸಾಹಸಸಿಂಹ ವಿಷ್ಣುವರ್ಧನ್ ಅವರು ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಮೇಲೆ, ಆ ಸಿನಿಮಾದಲ್ಲಿ ವಿಶೇಷತೆ ಇರಲೇಬೇಕು. ಸ್ವತಃ ವಿಷ್ಣುವರ್ಧನ್ ಅವರು ಬಹಳ ನಿರೀಕ್ಷೆ ಇಟ್ಟುಕೊಂಡು ನಟಿಸಿದ ಅದೊಂದು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ವಿಷ್ಣುದಾದ ಅವರ ನಿರೀಕ್ಷೆಗೆ ತಕ್ಕಂತೆ ಸದ್ದು ಮಾಡಲಿಲ್ಲ. ಆ ಸಿನಿಮಾ ಮತ್ಯಾವುದು ಅಲ್ಲ, ವಿಷ್ಣುದಾದ ಅವರ ನಂಯಜಮಾನ್ರು. ಈ ಸಿನಿಮಾದ ಕಥೆ ಬಹಳ ವಿಭಿನ್ನವಾಗಿತ್ತು, ಸಿನಿಮಾ ಮೇಲೆ ವಿಷ್ಣುದಾದ ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಯಾಕೆಂದರೆ ಸಿನಿಮಾದ ಕಥೆ ಅಷ್ಟು ವಿಭಿನ್ನವಾಗಿತ್ತು.
ನಂಯಜಮಾನ್ರು ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಕನ್ನಡದಲ್ಲಿ ಸೂಕ್ಶ್ಮ ಕಥೆಗಳನ್ನು ಆರಿಸಿ ಅವುಗಳಿಗೆ ಜೀವ ನೀಡುವ ಖ್ಯಾತ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು. ಬಹಳ ವರ್ಷಗಳ ನಂತರ ವಿಷ್ಣುದಾದ ಅವರಿಗೆ ಆಕ್ಷನ್ ಕಟ್ ಹೇಳಿದ್ದರು ನಾಗಾಭರಣ ಅವರು. ನಾಗಾಭರಣ ಅವರಿಗೆ ಎಂಥದ್ದೇ ಕಥೆ ಸಿಕ್ಕರೂ ಅದನ್ನು ವಿಶೇಷವಾಗಿ ತೋರಿಸುತ್ತಿದ್ದರು. ನಂಯಜಮಾನ್ರು ಸಿನಿಮಾ ಕಥೆ ಬಹಳ ವಿಭಿನ್ನವಾದದ್ದು. ಮನಸ್ಸಿನ ಒಳಗೆ ನಡೆಯುವ ಸರಿತಪ್ಪುಗಳು, ಪ್ರೀತಿ, ಸತ್ಯ, ಭ್ರಮೆ, ವಾಸ್ತವ ಇದೆಲ್ಲವೂ ಒಂದು ಮನಸ್ಸಿನ ಮೇಲೆ ಬೀರುವ ಪರಿಣಾಮದ ಮೇಲೆ ಹೆಣೆದ ಕಥೆಯಾಗಿತ್ತು ನಂಯಜಮಾನ್ರು ಸಿನಿಮಾ..
ಪಾತ್ರಗಳ ಮೂಲಕ ಇದೆಲ್ಲವನ್ನು ಅಚ್ಚುಕಟ್ಟಾಗಿ ಕಥೆಯ ರೂಪಕ್ಕೆ ತಂದಿದ್ದರು ನಾಗಾಭರಣ ಅವರು. ನಂಯಜಮಾನ್ರು ಸಿನಿಮಾದಲ್ಲಿ ವಿಷ್ಣುವರ್ಧನ್ ಅವರನ್ನು ಹೊರತುಪಡಿಸಿ, ಲಕ್ಷ್ಮೀ ಗೋಪಾಲಸ್ವಾಮಿ, ವಿಜಯ್ ರಾಘವೇಂದ್ರ, ನವ್ಯ ನಾಯರ್, ಹೀಗೆ ಉತ್ತಮವಾದ ತಾರಾ ಬಳಗ ಇತ್ತು. ವಿಷ್ಣುವರ್ಧನ್ ಅವರು ತಮ್ಮ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಉಳಿದ ಕಲಾವಿದರು ಸಹ ತಮ್ಮ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದರು. ಆದರೂ ಈ ಸಿನಿಮಾ ಗೆಲ್ಲಲಿಲ್ಲ. ಯಾಕೆಂದರೆ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದು ತಿಳಿದಿದ್ದೆ, ಬಿಡುಗಡೆ ಆಗುವ ಕೆಲವೇ ಕೆಲವು ದಿನಗಳ ಹಿಂದೆ.
ಈ ಸಿನಿಮಾಗೆ ಒಳ್ಳೆಯ ರೀತಿಯ ಪ್ರಚಾರ ಸಿಗಲಿಲ್ಲ. ಮನೋವೇದನೆಗೆ ಒಳಗಾಗುವ ವ್ಯಕ್ತಿಯ ಕಥೆ ಇದಾಗಿದ್ದು, ಮತ್ತೊಂದು ಆಪ್ತಮಿತ್ರ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ 2009ರ ಫೆಬ್ರವರಿ 27ರಂದು ಸಿನಿಮಾ ಬಿಡುಗಡೆ ಆದರೂ ಸಹ, ನಿರೀಕ್ಷೆ ಮಟ್ಟದಲ್ಲಿ ಜನರು ಬಂದು ಸಿನಿಮಾ ನೋಡಲಿಲ್ಲ. ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಒಳ್ಳೆಯ ಪ್ರಚಾರ ಸಿಗಲಿಲ್ಲ. ಹಾಗೆಯೇ ಸಿನಿಮಾ ಬಿಡುಗಡೆ ಆದ ಮೇಲೆ, ಅದನ್ನು ಉಳಿಸಿಕೊಳ್ಳುವಲ್ಲಿ ಚಿತ್ರತಂಡ ಸೋತಿತು. ಈ ಎಲ್ಲಾ ಕಾರಣಗಳಿಂದ ನಂಯಜಮಾನ್ರು ಸಿನಿಮಾ ಗೆಲ್ಲಲಿಲ್ಲ.
ಇಂದಿಗೂ ಈ ಸಿನಿಮಾ ನೋಡಿದರೆ, ಹೊಸ ರೀತಿಯ ಕಥೆ ಎನ್ನಿಸುತ್ತದೆ ಹಾಗೂ ಕಥೆಯಲ್ಲಿ ಫ್ರೆಶ್ನೆಸ್ ಸಹ ಇದೆ. ಎಲ್ಲರ ಅಭಿನಯವು ಉತ್ತಮವಾಗಿದೆ. ಅದರಲ್ಲೂ ವಿಷ್ಣುದಾದ ಅವರ ಅಭಿನಯದ ಬಗ್ಗೆ ಎರಡು ಮಾತುಗಳಿಲ್ಲ. ನೋಡಲು ಹ್ಯಾಂಡ್ಸಂ ಆಗಿದ್ದ ವಿಷ್ಣುದಾದ ಅವರು ಈ ಸಿನಿಮಾದಲ್ಲಿ ಇನ್ನು ಸುಂದರವಾಗಿ ಕಾಣಿಸುತ್ತಾರೆ. ನಂಯಜಮಾನ್ರು ಸಿನಿಮಾವನ್ನು ಈಗಲೂ ನೀವು ನೋಡಬಹುದು. ಇದೊಂದು ಒಳ್ಳೆಯ ಸಿನಿಮಾ ಆಗಿದೆ.
Comments are closed.