ಬಹಳ ಅಪರೂಪದ ದಾಖಲೆ ಬರೆದ ಕಿಂಗ್ ಕೊಹ್ಲಿ, ಮುಂಬೈ ವಿರುದ್ಧ ಪಂದ್ಯದಲ್ಲಿ ಬರೆದ ಆ ಹೊಸ ದಾಖಲೆ ಯಾವುದು ಗೊತ್ತೇ??
ಈ ವರ್ಷದ ಐಪಿಎಲ್ ಪಂದ್ಯಗಳು ವೀಕ್ಷಕರಿಗೆ ಹೆಚ್ಚಿನ ಮನರಂಜನೆ ನೀಡುತ್ತಿದೆ. ಯಾಕಂದರೆ ಈ ವರ್ಷ ಐಪಿಎಲ್ ನಲ್ಲಿ ಎಲ್ಲಾ ತಂಡಗಳು ಉತ್ತಮವಾದ ಮನೋರಂಜನೆ ನೀಡುತ್ತಿದೆ. ಈ ವರ್ಷ ನಮ್ಮ ಆರ್.ಸಿ.ಬಿ ತಂಡ ಅದ್ಭುತವಾಗಿ ಪಂದ್ಯಗಳನ್ನು ಆಡುತ್ತಿದ್ದು, ಈ ಬಾರಿ ಆರ್.ಸಿ.ಬಿ ತಂಡದ ಆಟಗಾರರು ಆಡುತ್ತಿರುವ ಪರಿ ನೋಡಿ ಅಭಿಮಾನಿಗಳು ಈ ಸಲ ಕಪ್ ನಮ್ದೆ ಎನ್ನುತ್ತಿದ್ದಾರೆ. ಕಳೆದ ಶನಿವಾರ ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಆರ್.ಸಿ.ಬಿ ತಂಡ ವಿಜಯ ಸಾಧಿಸಿತು. ಈ ಪಂದ್ಯದಲ್ಲಿ 48 ರನ್ ಗಳಸಿದ ವಿರಾಟ್ ಕೋಹ್ಲಿ ಅವರು ಮತ್ತೊಂದು ಸಾಧನೆ ಮಾಡಿದ್ದಾರೆ.
ಈ ವರ್ಷ ಕಿಂಗ್ ಕೋಹ್ಲಿ ಅವರು ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಕಳೆದ ಶನಿವಾರ ನಡೆದ ಮುಂಬೈ ತಂಡದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು 36 ಎಸೆತಗಳಲ್ಲಿ 48 ರನ್ ಗಳನ್ನು ಗಳಿಸಿ, ಇನ್ನೇನು ಅರ್ಧ ಶತಕ ಗಳಿಸಬೇಕು ಎನ್ನುವಷ್ಟರಲ್ಲಿ ಔಟ್ ಆದರು. ಆದರೆ ಇಲ್ಲಿ ಕೂಡ ಕಿಂಗ್ ಕೋಹ್ಲಿ ಅವರು ಸಾಧನೆ ಮಾಡಿದ್ದಾರೆ. ಕಿಂಗ್ ಕೋಹ್ಲಿ ಅವರು ಇಲ್ಲಿಯವರೆಗೆ ಸಾಕಷ್ಟು ಸಾಧನೆಗಳನ್ನು ಮಾಡಿದ್ದು, ಈ ಬಾರಿ ಅವರು ಮಾಡಿರುವ ಸಾಧನೆ ಅಭಿಮಾನಿಗಳಿಗೆ ಇನ್ನು ಸಂತೋಷ ತಂದಿದೆ. ಇಲ್ಲಿಯವರೆಗೂ ವಿರಾಟ್ ಕೋಹ್ಲಿ ಅವರು ಐಪಿಎಲ್ ಪಂದ್ಯಗಳಲ್ಲಿ ಸಾವಿರಗಟ್ಟಲೆ ರನ್ ಗಳನ್ನು ಗಳಿಸಿದ್ದು, ಸಾಕಷ್ಟು ಫೋರ್ ಗಳು ಮತ್ತು ಸಿಕ್ಸ್ ಗಳನ್ನು ಗಳಿಸಿದ್ದಾರೆ.
ಮೊನ್ನೆಯ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು 4 ಬೌಂಡರಿ ಗಳನ್ನು ಬಾರಿಸಿದರು, ಆ ಮೂಲಕ ವಿರಾಟ್ ಕೋಹ್ಲಿ ಅವರು ಇಷ್ಟು ವರ್ಷದ ಐಪಿಎಲ್ ನಲ್ಲಿ 550 ಫೋರ್ ಗಳು ಹಾಗೂ, 200 ಸಿಕ್ಸರ್ ಗಳನ್ನು ಪೂರ್ತಿ ಮಾಡಿದ್ದಾರೆ, ಒಟ್ಟಾರೆಯಾಗಿ, 554 ಫೋರ್ ಗಳು ಮತ್ತು 212 ಸಿಕ್ಸ್ ಗಳಾಗಿದ್ದು, ಇಷ್ಟು ಫೋರ್ ಮತ್ತು ಸಿಕ್ಸ್ ಗಳನ್ನು ಐಪಿಎಲ್ ನಲ್ಲಿ ಯಾವೊಬ್ಬ ಆಟಗಾರನು ಗಳಿಸಿಲ್ಲ ಎನ್ನಲಾಗಿದೆ. ಈ ವರೆಗೂ ಆರ್.ಸಿ.ಬಿ ತಂಡವು 4 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಪಂಜಾಬ್ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 41ರನ್ ಗಳು, ಮುಂಬೈ ವಿರುದ್ಧದ ಪಂದ್ಯದಲ್ಲಿ 48 ರನ್ ಗಳು, ಕೆಕೆಆರ್ ವಿರುದ್ಧ 12 ರನ್ ಗಳ ಮತ್ತು ರಾಜಸ್ತಾನ್ ವಿರುದ್ಧ 5 ರನ್ ಗಳನ್ನು ಗಳಿಸಿದರು.
Comments are closed.