ಮದುವೆ ದಿನ ಹತ್ತಿರ ಬರುತ್ತಿದ್ದರೂ ಕೂಡ ಆಲಿಯಾ ಭಟ್ ಮನೆಯಿಂದ ಹೊರಗಡೆ ಬರುತ್ತಿಲ್ಲ, ಅದಕ್ಕೆ ಕಾರಣ ಅದೊಂದೇ ಭಯ. ಏನು ಗೊತ್ತೇ??
ಬಾಲಿವುಡ್ ನ ಕ್ಯೂಟ್ ಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 14ರಂದು ಈ ಜೋಡಿಯ ಮದುವೆ ನಿಶ್ಚಯವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈಗಾಗಲೇ ದೊಡ್ಡ ರೀತಿಯಲ್ಲಿ ಮದುವೆ ತಯಾರಿಗಳು ಆರಂಭವಾಗಿದೆ. ಮದುವೆ ಮುಂಚೆ ನಡೆಯುವ ಶಾಸ್ತ್ರ ಸಂಪ್ರದಾಯಗಳು ಎಲ್ಲವೂ ಭರದಿಂದ ಸಾಗುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಇದೀಗ ಸಿಕ್ಕಿರುವ ಮತ್ತೊಂದು ಮಾಹಿತಿಯ ಪ್ರಕಾರ ನಟಿ ಆಲಿಯಾ ಭಟ್ ಮದುವೆ ದಿನ ಹತ್ತಿರ ಬರುತ್ತಿರುವುದರಿಂದ ಮನೆಯಿಂದ ಹೊರಗೆ ಬರುತ್ತಿಲ್ಲ ಎನ್ನಲಾಗಿದೆ..
ಮದುವೆ ನಡೆಯಲು ಇನ್ನೇನು ಮೂರು ದಿನವಷ್ಟೇ ಬಾಕಿ ಉಳಿದಿದೆ. ಏಪ್ರಿಲ್ 14ರಂದೆ ಮದುವೆ. ಮದುವೆ ದಿನಾಂಕದ ಬಗ್ಗೆ ಅಥವಾ ಮದುವೆ ಬಗ್ಗೆ ಆಲಿಯಾ ಭಟ್ ಆಗಲಿ, ರಣಬೀರ್ ಕಪೂರ್ ಆಗಲಿ, ಅಥವಾ ಅವರ ಕುಟುಂಬದವರಾಗಲಿ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಏಪ್ರಿಲ್ 14ರಂದೆ ಮದುವೆ ಎನ್ನುವುದು ಖಚಿತವಾಗಿ ಮಾಹಿತಿ ಸಿಕ್ಕಿದೆ. ಮದುವೆ ದಿನ ಹತ್ತಿರ ಬರುತ್ತಿದ್ದ ಹಾಗೆ ಆಲಿಯಾ ಭಟ್ ಎಲ್ಲಿಯು ಹೊರಗಡೆ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ. ಪಾಪಾರಾಜಿಗಳ ಕಣ್ಣಿಗೆ ಅಥವಾ ಅಭಿಮಾನಿಗಳ ಕಣ್ಣಿಗೂ, ಕೆಲವು ದಿನಗಳಿಂದ ಆಲಿಯಾ ಭಟ್ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆಲಿಯಾ ಅವರು ಮನೆಯೊಳಗೆ ಇದ್ದಾರೆ, ಮನೆಯಿಂದ ಹೊರಗೆ ಬರುತ್ತಿಲ್ಲ ಎನ್ನಲಾಗಿದೆ. ಇದಕ್ಕೆ ಕಾರಣವೂ ಸಿಕ್ಕಿದ್ದು, ಅದೊಂದು ಭಯದಿಂದ ಹೊರಗಡೆ ಬರುತ್ತಿಲ್ಲವಂತೆ ಆಲಿಯಾ ಭಟ್.
ಮನೆಯಿಂದ ಹೊರಗೆ ಬಂದರೆ, ಪಾಪಾರಾಜಿಗಳು ಮತ್ತು ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲು ಆಗುವುದಿಲ್ಲ ಎನ್ನುವ ಕಾರಣಕ್ಕೆ, ನಟಿ ಆಲಿಯಾ ಭಟ್ ಮನೆಯಿಂದ ಹೊರಗಡೆ ಬರುತ್ತಿಲ್ಲವಂತೆ. ಈ ಜೋಡಿಯ ಮದುವೆಗೆ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿದ್ದು, ಆಪ್ತ ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಆಮಂತ್ರಣ ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ರಣಬೀರ್ ಆಲಿಯಾ ಮದುವೆ ಈ ಮೊದಲೇ ನಡೆಯಬೇಕಿತ್ತು. ಆದರೆ ಆ ಸಮಯಕ್ಕೆ ಕೋವಿಡ್ ಸೋಂಕು ಶುರುವಾಯಿತು, ಜೊತೆಗೆ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ಅವರು ಇಹಲೋಕ ತ್ಯಜಿಸಿದರು. ಅದೇ ಕಾರಣದಿಂದ, ಮದುವೆ ಸಹ ಮುಂದಕ್ಕೆ ಹೋಯಿತು. ಇದೀಗ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ.
Comments are closed.