ಬಿಡುಗಡೆಗಿಂತ ಮೊದಲೇ ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್2.. ಕನ್ನಡಿಗರ ತಾಕತ್ತು ಇದು..
ಕೆಜಿಎಫ್2 ಸಿನಿಮಾ ಬಗ್ಗೆ ಜನರಲ್ಲಿ ಮೂಡಿರುವ ಕ್ರೇಜ್ ಬಗ್ಗೆ ಹೇಳಲು ಪದಗಳು ಸಾಲುತ್ತಿಲ್ಲ ಎಂದರೆ ತಪ್ಪಲ್ಲ. ನಮ್ಮ ಕನ್ನಡ ಸಿನಿಮಾ ಒಂದು ಇಷ್ಟರ ಮಟ್ಟಿಗೆ ಕ್ರೇಜ್ ಸೃಷ್ಟಿ ಮಾಡಿದೆ ಎಂದರೆ ಅದು ನಮಗೆ ಹೆಮ್ಮೆಯ ವಿಚಾರವೇ. ಕರ್ನಾಟಕ ಅಥವಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಉತ್ತರ ಭಾರತದಲ್ಲಿ ಸಹ ಭಾರಿ ಕ್ರೇಜ್ ಇದೆ. ಕೆಜಿಎಫ್ ತಂಡ ಪ್ರಚಾರಕ್ಕಾಗಿ ದೆಹಲಿ, ಮುಂಬೈಗೆ ಹೋದಾಗ, ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಇಲ್ಲಿ ಕೇಳಿ ಬರುತ್ತಿರುವ ಮತ್ತೊಂದು ವಿಚಾರ ಏನೆಂದರೆ, ಬಿಡುಗಡೆಗಿಂತ ಮೊದಲೇ, ಎಲ್ಲಾ ದಾಖಲೆಗಳನ್ನು ಮುರಿದಿದೆ ಕೆಜಿಎಫ್2 ಸಿನಿಮಾ…
ಇಲ್ಲಿ ಹೆಮ್ಮೆ ಪಡಬೇಕಾದ ವಿಚಾರ ಏನೆಂದರೆ, ಆರ್.ಆರ್.ಆರ್ ಸಿನಿಮಾ ಬಿಡುಗಡೆಗಿಂತ ಮೊದಲು ಮಾಡಿದ ದಾಖಲೆಗಳನ್ನು ಕೆಜಿಎಫ್2 ಸಿನಿಮಾ ಮುರಿದಿದೆ. ಇತ್ತೀಚಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಭರ್ಜರಿಯಾದ ರೆಸ್ಪಾನ್ಸ್ ಸಿಗುತ್ತಿದೆ. ಇತ್ತೀಚೆಗೆ ತೆರೆಕಂಡ ಪುಷ್ಪ, ಆರ್.ಆರ್.ಆರ್ ಸಿನಿಮಾಗಳಿಗೆ ನಾರ್ತ್ ಇಂಡಿಯಾನಲ್ಲಿ ಭರ್ಜರಿ ರೆಸ್ಪಾನ್ಸ್ ಇತ್ತು. ಉತ್ತರ ಭಾರತದಲ್ಲೇ ಕೋಟಿ ಕೋಟಿ ಹಣ ಬಾಚಿತ್ತು ಈ ಎರಡು ಸಿನಿಮಾಗಳು. ಇದೀಗ ನಮ್ಮ ಕನ್ನಡದ ಕೆಜಿಎಫ್ ಸಿನಿಮಾ ಈ ಎರಡು ಸಿನಿಮಾಗಳ ದಾಖಲೆಗಳನ್ನು ಮುರಿದಿದೆ.
ಬಿಡುಗಡೆಗಿಂತ ಮೊದಲು ಆರ್.ಆರ್.ಆರ್ ಸಿನಿಮಾ ಟಿಕೆಟ್ಸ್ ಗಳಲ್ಲಿ 11 ಕೋಟಿ ಗಳಿಕೆ ಮಾಡಿತ್ತು, ಇದೀಗ ಕೆಜಿಎಫ್2 ಸಿನಿಮಾ ಆ ದಾಖಲೆ ಮುರಿದಿದೆ, ಬಿಡುಗಡೆಗಿಂತ ಮೊದಲೇ 20 ಕೋಟಿ ಗಳಿಕೆ ಮಾಡಿ ಬೇರೆ ಎಲ್ಲಾ ಸಿನಿಮಾಗಳ ದಾಖಲೆಗಳನ್ನು ಮುರಿದಿದೆ. ಇದೀಗ ಕೆಜಿಎಫ್2 ಸಿನಿಮಾದ ಟಿಕೆಟ್ ಬೆಳೆಗಳಲ್ಲಿ ಏರಿಕೆಯಾಗಿದ್ದು, ಒಂದು ಟಿಕೆಟ್ ಗೆ 2000 ರೂಪಾಯಿಯ ವರೆಗೂ ಆಗಿದ್ದು, ಸಿನಿಮಾ ಮೇಲಿನ ಕ್ರೇಜ್ ಹೇಗಿದೆ ಅಂದ್ರೆ, ಜನರು ಅಷ್ಟು ಹಣ ಕೊಟ್ಟು ಸಹ ಸಿನಿಮಾ ನೋಡಲು ಕಾತುರರಾಗಿದ್ದಾರೆ ಅಂದ್ರೆ ಜನರಿಗೆ ಕೆಜಿಎಫ್2 ನೋಡಲು ಎಷ್ಟು ಕಾತುರತೆ ಇದೆ ಎಂದು ಗೊತ್ತಾಗುತ್ತಿದೆ.
Comments are closed.