ಯಶ್ ವಿರುದ್ಧ ಗರಂ ಆದ ತೆಲುಗು ಮಾಧ್ಯಮಗಳು, ಅಂದು ಕರ್ನಾಟಕದಲ್ಲಿ ನಡೆದಿದ್ದಕ್ಕೆ ಇಂದು ಸೇಡು ತೀರಿಸಿಕೊಂಡು ಮಾಡಿದ್ದೇನು ಗೊತ್ತೇ??
ಕೆಜಿಎಫ್ ಚಾಪ್ಟರ್ 2 ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದೆ, ಏಪ್ರಿಲ್ 14ರಂದು ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾತುರರಾಗಿ ಕಾಯುತ್ತಿದ್ದಾರೆ. ಸಿನಿಮಾ ಬಿಡುಗಡೆಗಿಂತ ಒಂದು ವಾರ ಮೊದಲೇ ಹಲವು ಕಡೆಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿ, ಈಗಾಗಲೇ ಎಲ್ಲಾ ಕಡೆ ಫಸ್ಟ್ ಡೇ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಕೆಜಿಎಫ್2 ಸಿನಿಮಾ ಬಗ್ಗೆ ಕುತೂಹಲ ಒಂದು ಕಡೆಯಾದರೆ, ಮತ್ತೊಂದು ಕಡೆ ಸಿನಿಮಾ ತಂಡ ಪ್ರಚಾರ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದೆ. ನಿನ್ನೆಯಷ್ಟೇ ಕೆಜಿಎಫ್2 ತಂಡ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಪ್ರೊಮೋಷನ್ ಮಾಡಿತು..
ನಿನ್ನೆ ಆಂಧ್ರಪ್ರದೇಶದಲ್ಲಿ ಅರೇಂಜ್ ಆಗಿದ್ದ ಪ್ರೆಸ್ ಮೀಟ್ ಗೆ ಚಿತ್ರತಂಡ ಆಗಮಿಸಿತ್ತು, ಆದರೆ ತೆಲುಗು ಮಾಧ್ಯಮದವರು ನಟ ಯಶ್ ಅವರ ಮೇಲೆ ಗರಂ ಆದರು, ಅದಕ್ಕೆ ಕಾರಣವೂ ಇತ್ತು. ನಟ ಯಶ್ ಅವರು ಪ್ರೆಸ್ ಮೀಟ್ ಗೆ ತಡವಾಗಿ ಆಗಮಿಸಿದ ಕಾರಣ, ಮಾಧ್ಯಮದವರು ಗರಂ ಆಗಿ, ನಾವೆಲ್ಲರೂ ಗಂಟೆಯಿಂದ ಕಾಯುತ್ತಿದ್ದೇವೆ, ನೀವು ತಡವಾಗಿ ಬಂದಿದ್ದೀರಾ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಯಶ್ ಅವರು ತೆಲುಗು ಮಾಧ್ಯಮದವರ ಮುಂದೆ ಕ್ಷಮೆ ಕೇಳಿದರು. “ಕ್ಷಮಿಸಿ.. ಆಯೋಜಕರು ಹೇಳಿದ ಸಮಯಕ್ಕೆ ಬಂದಿದ್ದೇವೆ.. ಈ ವಿಚಾರ ನಮಗೆ ಗೊತ್ತಿರಲಿಲ್ಲ. ಪ್ರೈವೇಟ್ ಫ್ಲೈಟ್ ನಲ್ಲಿ ಬಂದ ಕಾರಣ ಟೇಕ್ ಆಫ್ ಆಗುವುದು ತಡವಾಯಿತು.
ನನಗೆ ಸಮಯದ ಮಹತ್ವ ಗೊತ್ತಿದೆ. 10 ನಿಮಿಷ ತಡವಾಗಿ ಬಂದರು ಅದೇ ತಪ್ಪೇ..” ಎಂದು ಹೇಳಿ ತೆಲುಗು ಮಾಧ್ಯಮದವರ ಎದುರು ಕ್ಷಮೆ ಕೇಳಿದ್ದಾರೆ ನಟ ಯಶ್. ಈ ಹಿಂದೆ ಬೆಂಗಳೂರಿನಲ್ಲಿ ನಡೆದ ಪುಷ್ಪ ಸಿನಿಮಾ ಪ್ರೆಸ್ ಮೀಟ್ ಗೆ ತಡವಾಗಿ ಬಂದಿದ್ದಾಗ, ಬೆಂಗಳೂರಿನ ಮಾಧ್ಯಮದವರು ಗರಂ ಆಗಿದ್ದರು, ಇದೀಗ ಅದೇ ರೀತಿ ಯಶ್ ಅವರ ವಿಚಾರದಲ್ಲೂ ಮಾಡಿದ್ದಾರೆ ಎನ್ನುವ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗ್ತಿದೆ. ಎರಡು ಸಂದರ್ಭದ ವಿಡಿಯೋಗಳನ್ನು ಜೋಡಿಸಿ, ಅವುಗಳನ್ನು ಶೇರ್ ಮಾಡಲಾಗುತ್ತಿದೆ. ಆದರೆ ಈ ವಿಚಾರದ ಬಗ್ಗೆ ಇಬ್ಬರು ನಟರು ಸಹ ಪ್ರತಿಕ್ರಿಯೆ ನೀಡಿಲ್ಲ.
Comments are closed.