RRR ಸಿನಿಮಾದಲ್ಲಿ ಕೇವಲ ಎರಡು ಮೂರು ನಿಮಿಷದ ಸೀನ್ ಗೆ ನಟಿ ಶ್ರಿಯಾ ಪಡೆದ ಸಂಭಾವನೆ ಎಷ್ಟು ಗೊತ್ತೇ??
ನಿರ್ದೇಶಕ ರಾಜಮೌಳಿ ಅವರು ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರು. ಇವರು ನಿರ್ದೇಶಿಸಿರುವ ಚಿತ್ರಗಳು ಹಿಟ್ ಆಗುವದರಲ್ಲಿ ಮತ್ತೊಂದು ಮಾತಿಲ್ಲ, ಇವರೊಟ್ಟಿಗೆ ಕೆಲಸ ಮಾಡಲು ಹಲವು ನಟ ನಟಿಯರು ಕ್ಯೂನಲ್ಲಿ ಕಾಯುತ್ತಿದ್ದಾರೆ. ತೆಲುಗು ಚಿತ್ರರಂಗದಿಂದ ಇವರು ವೃತ್ತಿ ಜೀವನಕ್ಕೆ ಕಾಲಿಟ್ಟರು. ನಂತರ ಇವರ ಈ ಹಾಗು ಬಾಹುಬಲಿ-1 ಮತ್ತೂ ಬಾಹುಬಲಿ-2 ಚಿತ್ರವು ಇಡೀ ಭಾರತದಾದ್ಯಾಂತ ಇವರಿಗೆ ಬಹುದೊಡ್ಡ ಹೆಸರನ್ನು ಗಳಿಸಿದರು .
ರಾಜಮೌಳಿ ಅವರು ನಿರ್ದೇಶಿಸಿರುವ ‘RRR’ ಚಿತ್ರ 1000 ಕೋಟಿ ಕಲೆಕ್ಷನ್ ಮಾಡಿ ಬಹುದೊಡ್ಡ ದಾಖಲೆ ಬರೆದಿದೆ. ಈ ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ ಎನ್.ಟಿ.ಆರ್ ಹಾಗು ಆಲಿಯಾ ಭಟ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಆರ್.ಆರ್.ಆರ್ ಸಿನಿಮಾ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ನಟಿ ಶ್ರೀಯಾ ಸರನ್ ಅವರು ಈ ಚಿತ್ರದಲ್ಲಿ 4 ನಿಮಿಷದ ಪಾತ್ರಕ್ಕೆ ಕೋಟಿಗಟ್ಟಲೆ ಸಂಭಾವನೆ ಯನ್ನು ಪಡೆದಿದ್ದಾರೆ ಎನ್ನಲಾಗಿದೆ. ವಿಶೇಷ ಅತಿಥಿ ಪಾತ್ರದಲ್ಲಿ ತ್ರಿಬಲ್ ಆರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ ಶ್ರೀಯಾ. ‘ಅಜಯ್ ದೇವ್ಗನ್’ ಅವರ ಪತ್ನಿಯ ಪಾತ್ರದಲ್ಲಿ ನಟಿಸಿದ್ದಾರೆ. ಬ್ರಿಟಿಷ್ ಅವರು ಈಕೆಯ ಗ್ರಾಮಕ್ಕೆ ಪ್ರವೇಶಿಸಿದಾಗ ಹಾಗು ಗ್ರಾಮದವರೊಂದಿಗೆ ಯುದ್ಧವನ್ನು ಮಾಡುವ ಸನ್ನಿವೇಶಗಳಲ್ಲಿ ಶ್ರೀಯ ಕಾಣಿಸಿಕೊಳ್ಳುತ್ತಾರೆ.
ಸ್ವಾತಂತ್ರ ಹೋರಾಟದ ಯುದ್ಧದ ಸಮಯದಲ್ಲಿ ನಟಿ ಶ್ರೀಯ ಮತ್ತು ಅವರ ಚಿಕ್ಕ ಮಗ ಪ್ರಾಣ ಕಳೆದುಕೊಳ್ಳುತ್ತಾರೆ. ಪತಿ ಅಜಯ್ ದೇವಗನ್ ಅವರು ಸಿನಿಮಾದಲ್ಲಿ ಕಿರಿಯ ಮಗ ಮತ್ತು ಹೆಂಡತಿಯ ಸಾವಿನ ನೋವನ್ನು ವ್ಯಕ್ತಪಡಿಸುತ್ತಾರೆ. ಆರ್.ಆರ್.ಆರ್ ನಲ್ಲಿ ಶ್ರೀಯಾ ಅವರು ಕೇವಲ 2 ಇಂದ 4 ನಿಮಿಷಗಳ ಕಾಲ ಕಾಣಿಸಿಕೊಳ್ಳುತ್ತಾರೆ. ಇದೊಂದು ಸಣ್ಣ ಪಾತ್ರದಿಂದ ದೊಡ್ಡ ಜನಪ್ರಿಯತೆಯನ್ನು ಗಳಿಸಿದ್ದಾರೆ, ಹಾಗೆಯೇ ಆರ್.ಆರ್.ಆರ್ ಸಿನಿಮಾದ ಜನನಿ ಎನ್ನುವ ಹಾಡಿನಲ್ಲಿ ಸಹ ಕಾಣಿಸಿಕೊಳ್ಳುತ್ತಾರೆ ಶ್ರೀಯಾ. ಇಷ್ಟು ಚಿಕ್ಕ ಪಾತ್ರಕ್ಕೆ ನಟಿ ಶ್ರಿಯಾ ಅವರು ಒಂದೂ ಕೋಟಿ ಸಂಭಾವನೆಯನ್ನು ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದ್ದು, ಈ ವಿಚಾರ ಹೊರಬಂದ ನಂತರ ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
Comments are closed.