ಬಿಡುಗಡೆಯಾದ ಮೊದಲ ದಿನವೇ ವಿಜಯ್ ರವರ ಬೀಸ್ಟ್ ಚಿತ್ರಕ್ಕೆ ಶಾಕ್ ನೀಡಿದ ಕೆಜಿಎಫ್. ಬೆಂಗಳೂರಿನಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತೇ??
ಇಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್2 ಸಿನಿಮಾ ತೆರೆಕಂಡು, ವಿಶ್ವಾದ್ಯಂತ ಭರ್ಜರಿಯಾದ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಕರ್ನಾಟಕದ ಹಲವೆಡೆ ಮಧ್ಯ ರಾತ್ರಿ ಇಂದಲೇ ಶೋ ಶುರುವಾಗಿದ್ದು, ಎರಡೂವರೆ ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಯಶ್ ಅವರನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಜಿಎಫ್2 ಸಿನಿಮಾ ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿತ್ತು, ಚಾಪ್ಟರ್1 ಸೃಷ್ಟಿಸಿದ ಹವಾ ಕ್ರೇಜ್ ಎಲ್ಲವನ್ನು ಚಾಪ್ಟರ್2 ದುಪ್ಪಟ್ಟು ಮಾಡಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ಮುಂದೆ ಬೇರೆ ಭಾಷೆಯ ಸಿನಿಮಾಗಳು ಮಂಕಾಗಿವೆ. ಕೆಜಿಎಫ್2 ಸಿನಿಮಾ ಜೊತೆಗೆ ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಅಭಿನಯದ ಬೀಸ್ಟ್ ಸಿನಿಮಾ ತೆರೆಕಂಡಿದೆ.
ಮೊದಲಿಗೆ ಬೀಸ್ಟ್ ಸಿನಿಮಾ ಕೆಜಿಎಫ್2 ಗೆ ಕಾಂಪಿಟೇಶನ್ ಕೊಡಳಿದೆ ಎನ್ನಲಾಗಿತ್ತು. ಆದರೆ ಸಿನಿಮಾ ಬಿಡುಗಡೆ ಆದ ಮೇಲೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಿನಿಮಾ ಸುಮಾರಾಗಿದೆ ಕೆಜಿಎಫ್2 ಗೆ ಸಮವಾಗಿಲ್ಲ ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಯಾವಾಗಲೂ ಪರಭಾಷೆಯ ಹಾವಳಿಯಿಂದ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಉಂಟಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ, ಕನ್ನಡ ಸಿನಿಮಾಗಾಗಿ ಬೇರೆ ಭಾಷೆಯ ಸಿನಿಮಾವನ್ನು ಎತ್ತಂಗಡಿ ಮಾಡಲಾಗಿದೆ. ಸಿನಿಮಾ ಅಷ್ಟೇನು ಚೆನ್ನಾಗಿಲ್ಲ ಎಂದು ರಿವ್ಯೂ ಬಂದಿರುವ ಕಾರಣವೋ ಏನೋ, ಕೆಜಿಎಫ್2 ಸಿನಿಮಾ ಅದ್ಭುತ ಎನ್ನುವ ಕಾರಣದಿಂದ ಬೀಸ್ಟ್ ಸಿನಿಮಾ ಹಲವು ಥಿಯೇಟರ್ ಗಳಿಂದ ಎತ್ತಂಗಡಿ ಆಗಿದೆ. ಅಲ್ಲೆಲ್ಲಾ ಕೆಜಿಎಫ್2 ಹವಾ ಶುರುವಾಗಿದೆ.
ಬೆಂಗಳೂರಿನಲ್ಲಿ ನಟ ವಿಜಯ್ ಅವರ ಸಿನಿಮಾಗಳು ಜೋರಾಗಿಯೇ ಸದ್ದು ಮಾಡುತ್ತದೆ, ಆದರೆ ಬೀಸ್ಟ್ ಸಿನಿಮಾದಲ್ಲಿ ಒಳ್ಳೆಯ ಕಥೆ ಇಲ್ಲ, ವಿಜಯ್ ಅವರನ್ನು ಬಿಟ್ಟರೆ ಇನ್ನೇನು ಒಲ್ಲ ಎನ್ನಲಾಗುತ್ತಿದೆ. ಬೆಂಗಳೂರಿನ ಮುಖ್ಯ ಥಿಯೇಟರ್ ಗಳಾದ ಅನುಪಮಾ, ಭೂಮಿಕಾ ಈ ಎಲ್ಲಾ ಥಿಯೇಟರ್ ಗಳಿಂದಲೂ ಬೀಸ್ಟ್ ಸಿನಿಮಾ ಎತ್ತಂಗಡಿಯಾಗಿದೆ. ಕನ್ನಡ ಸಿನಿಮಾ ಒಂದಕ್ಕೆ ಪ್ರಾಮುಖ್ಯತೆ ನೀಡಿ, ಬೇರೆ ಭಾಷೆಯ ಸಿನಿಮಾವನ್ನು ತೆಗೆದಿರುವುದು ನಿಜಕ್ಕೂ ಒಳ್ಳೆಯ ಬದಲಾವಣೆ. ಇದೀಗ ಎಲ್ಲಾ ಪ್ರೇಕ್ಷಕರು, ರಾಕಿ ಭಾಯ್ ಅನ್ನು ಥಿಯೇಟರ್ ನಲ್ಲಿ ನೋಡಿ ಫಿದಾ ಆಗಿದ್ದಾರೆ. ಯಶ್ ಅವರ ಎದುರು ಮಂಕಾಗಿದೆ ಬೀಸ್ಟ್.
Comments are closed.