Neer Dose Karnataka
Take a fresh look at your lifestyle.

ಆರ್ಸಿಬಿ ಕಪ್ ಗೆಲ್ಲುತ್ತದೆಯೇ ಎಂಬ ಪ್ರಶ್ನೆಗೆ ದಿನೇಶ್ ಕಾರ್ತಿಕ್ ನಕ್ಕು ಕೊಟ್ಟ ಉತ್ತರವೇನು ಗೊತ್ತೇ??

“ಆರ್ ಸಿ ಬಿ” ಈ ಹೆಸರು ಕೇಳಿದರೆ ಏನೋ ರೋಮಾಂಚನ ಅಲ್ಲವೇ. ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.ಇದು ವರೆಗೂ ಕಪ್ ಗೆಲ್ಲದಿದ್ದರು ,ಇವರ ಅಭಿಮಾನಿಗಳ ಸಂಖ್ಯೆಯಂತೂ ಕಡಿಮೆಯಿಲ್ಲಾ. ಪ್ರತಿ ಬಾರಿ ಸೋತಾಗಲು ನಮ್ಮ ತಂಡ ನಮ್ಮ ಹೆಮ್ಮೆ ಎಂದು ಬೀಗುವ ಜನಗಳನ್ನು ಹೊಂದಿರುವ ತಂಡ ಎಂದರೆ ತಪ್ಪಾಗಲಾರದು.ಪ್ರತಿ ಬಾರಿ “ಐಪಿಯಲ್” ಶುರುವದಾಗಿಲಿಂದ ಎಲ್ಲಾ ತಂಡದ ಅಭಿಮಾನಿಗಳು ಒಂದು ತೂಕವಾದರೆ ನಮ್ಮ ಹೆಮ್ಮೆಯ “ಆರ್ ಸಿ ಬಿ” ತಂಡದ ಅಭಿಮಾನಿಗಳಿಗೆ ಇನ್ನೊಂದು ತೂಕ ಎಂದರೆ ತಪ್ಪಾಗಲಾರದು. ಪ್ರತಿ ಬಾರಿ “ವಿರಾಟ್ ಕೊಹ್ಲಿ” ಅವರ ನಾಯಕತ್ವದಲ್ಲಿ ಆಡಿದ ತಂಡ ಇದೀಗ “ಫಾಫ್ ಡುಪ್ಲಾಸಿಯ” ನಾಯಕತ್ವದಲ್ಲಿ ಈ ವರ್ಷದ ಐಪಿಯಲ್ ಬೃಹತ್ ಮುನ್ನಡೆಯನ್ನು ಪಡೆದುಕೊಂಡಿದೆ.

ಈಗಾಗಲೇ “ಆರ್ ಸಿ ಬಿ” ತಂಡ ಐದು ಪಂದ್ಯಗಳನ್ನು ಅಡಿದ್ದು ಅದರಲ್ಲಿ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ‘ಆರ್ ಸಿ ಬಿ’ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋತರು ಸತತ 3 ಪಂದ್ಯಗಳನ್ನು ಗೆದ್ದು ಹೈಟ್ರಿಕ್ ವಿನ್ ಪಡೆದುಕೊಂಡಿತ್ತು ಆದರೆ ಮೊನ್ನೆ ನಡೆದ ಮೋಸ್ಟ್ ಇಂಟ್ರೆಸ್ಟಿಂಗ್ ಟೀಮ್ ಗಳ ಪೈಪೋಟಿಯಲ್ಲಿ “ಸಿಯೆಸ್ಕ್” ತಂಡದ ವಿರುದ್ಧ ಸೋಲನ್ನು ಅನುಭವಿಸಲಾಗಿದೆ. ‘ಸಿಯೆಸ್ಕ್’ ತಂಡ ಸತತ ಸೋಲುಗಳನ್ನು ಅನುಭವಿಸಿ ಟೇಬಲ್ ಬಟಾಮ್ ನಲ್ಲಿ ಮನೆ ಮಾಡಿದ್ದ ‘ಸಿಯೆಸ್ಕ್’ ಟೀಮ್ ಇದೀಗ ತಮ್ಮ ಗೆಲುವಿನ ಕೋಟಾ ತೆರೆದಿದೆ.

ಶುರುವಿನಲ್ಲೇ ‘ಫಾಫ್’ ‘ವಿರಾಟ್’ ಮತ್ತು ‘ಮ್ಯಾಕ್ಸಿ ಯ’ ವಿಕೆಟ್ ಗಳು ಪತನವಾಗಿದ್ದನ್ನು ನೋಡಿ ಹೀನಾಯ ಸೋಲನ್ನು ಅನುಭವಿಸುವ ಸಂಭವಿದೆ ಎಂದು ಅಭಿಮಾನಿಗಳು ಭಾವಿಸಿದ್ದರು.ಆದರೆ ಈಗಿನ ಹೊಸ ಆಟಗಾರರ ಜೊತೆಯಾಟದಲ್ಲಿ ರನ್ ರೇಟ್ ಹೆಚ್ಚಿಸಿ ಅಭಿಮಾನಿಗಳಿಗೆ ನಿಟ್ಟುಸಿರು ಬಿಡುವಂತೆ ಮಾಡಿದರು.ನಂತರ ಆ ಪಾಟ್ನರ್ ಬ್ರೇಕ್ ಮಾಡಿದ “ಸಿಯೆಸ್ಕ್” ತಂಡ ಗೆಲ್ಲುವ ಹಂತ ತಲುಪಿದೆವು ಎಂದು ಬೀಗುವ ಸಂಧರ್ಭದಲ್ಲಿ ನಮ್ಮ “ಕಾರ್ತಿಕ್” ಅವರು ಎಲ್ಲರ ಉಬ್ಬೇರಿಸುವಂತೆ ತಮ್ಮ ಆಟವನ್ನು ಪ್ರದರ್ಶಿಸಿದರು.ಇನ್ನು “ಚೆನ್ನೈ ಸೂಪರ್‌ ಕಿಂಗ್ಸ್” ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಿಗೆ 34 ರನ್ ಗಳಿಸಿರುವ “ದಿನೇಶ್ ಕಾರ್ತಿಕ್” ಇದಕ್ಕೂ ಮುನ್ನ ಕಣಕ್ಕಿಳಿದಿದ್ದ ಮೊದಲ 4 ಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 32 ರನ್, ಅಜೇಯ 14 ರನ್, ಅಜೇಯ 44 ರನ್ ಹಾಗೂ ಅಜೇಯ 7 ರನ್ ಕಲೆಹಾಕಿದ್ದರು.

ಇನ್ನು ಈ ಬಾರಿಯ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಲವು ಬಾರಿ ಆಸರೆಯಾಗಿರುವ ದಿನೇಶ್ ಕಾರ್ತಿಕ್ 5 ಪಂದ್ಯಗಳನ್ನಾಡಿ 131 ರನ್ ಗಳಿಸಿದ್ದಾರೆ. ಪಂದ್ಯ ಶುರುವಿನಲ್ಲಿ “ಡಿಕೆ” ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಅದರಲ್ಲಿ ಈ ಬಾರಿ “ಆರ್ಸಿಬಿ” ತಂಡ ಈ ಬಾರಿ ಕಪ್ ಗೆಲ್ಲಬಹುದ ಎಂದು ಪ್ರಶ್ನೆ ಕೇಳಿದಾಗ, ಮೊದಲು ನಗುತ್ತಾ ಮುಂದಿನ ಹಾಗೂ ಹೋಗುವ ಘಟನೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ಉತ್ತರಿಸಿದರು. ಹಲವಾರು ಬಾರಿ ಆರ್ಸಿಬಿ ತಂಡಕ್ಕೆ ಆಸರೆಯಾಗಿ ನಿಂತಿರುವ ಡಿಕೆ ಈ ಬಾರಿ ಮತ್ತಷ್ಟು ಪ್ರೋತ್ಸಾಹಿಸಿ ಹಾಗೂ ಉತ್ತಮ ಪ್ರದರ್ಶನವನ್ನು ನೀಡಿ ನಮ್ಮ ಆರ್ಸಿಬಿ ತಂಡವನ್ನು ಗೆಲ್ಲಿಸಲಿ ಎಂದು ನಾವೆಲ್ಲರೂ ಹಾರೈಸೋಣ.

Comments are closed.