ಇಂಜಿನಿಯರಿಂಗ್ ಪದವಿ ಪಡೆದಿದ್ದರೂ ಕೂಡ ನಟನೆ ಕಡೆ ಮುಖ ಮಾಡಿರುವ ಖ್ಯಾತ ನಟಿಯರು ಯಾರ್ಯಾರು ಗೊತ್ತೇ??
ಚಿತ್ರರಂಗಕ್ಕೆ, ಬಣ್ಣದ ಲೋಕದ ಆಸೆಯಿಂದ ಬರುವವರು ಸಾಕಷ್ಟು ಕಲಾವಿದರಿದ್ದಾರೆ. ಇವರು ಓದಿದ್ದು ಬೇರೆಯಾದರು ಆಯ್ಕೆ ಮಾಡಿಕೊಂಡಿದ್ದು ನಟನೆ. ನಟನೆಯ ಮೇಲೆ ಇವರಿಗೆ ಇರುವ ಆಸಕ್ತಿ ಪ್ರೀತಿ ಇವರನ್ನು ಈ ಫೀಲ್ಡ್ ಗೆ ಕರೆತಂದಿರುತ್ತದೆ. ಹೀಗೆ ಇಂಜಿನಿಯರಿಂಗ್ ಮಾಡಿದ ಹಲವು ಕಲಾವಿದರು ನಟನೆಗೆ ಬಂದಿದ್ದಾರೆ. ನಟ ಸುದೀಪ್, ರಮೇಶ್ ಅರವಿಂದ್, ಡಾಲಿ ಧನಂಜಯ್ ಹಾಗೂ ಇನ್ನು ಸಾಕಷ್ಟು ನಾಯಕರು ಇಂಜಿನಿಯರಿಂಗ್ ಮಾಡಿ, ನಟನೆಗೆ ಬಂದಿದ್ದಾರೆ. ಇದೇ ರೀತಿ ಇಂಜಿನಿಯರಿಂಗ್ ಮುಗಿಸಿ, ನಟನೆಯ ಲೋಕಕ್ಕೆ ಎಂಟ್ರಿ ಕೊಟ್ಟಿರುವ ನಟಿಯರು ಯಾರು ಗೊತ್ತಾ?
ವಜ್ರಕಾಯ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಹಾಟ್ ಹುಡುಗಿ ನಭಾ ನಟೇಶ್. ಮೊದಲ ಸಿನಿಮಾದಲ್ಲೇ ನಭಾ ನಟೇಶ್ ಅವರು ಪ್ರೇಕ್ಷಕರ ಮನಗೆದ್ದರು. ವಜ್ರಕಾಯ ನಂತರ ಇವರು ಕನ್ನಡದಲ್ಲಿ ನಟಿಸಿದ್ದು ಕಡಿಮೆ. ನಭಾ ಅವರಿಗೆ ತೆಲುಗಿನಲ್ಲಿ ಒಳ್ಳೆಯ ಆಫರ್ ಗಳು ಬರಲು ಶುರುವಾಗಿ, ತೆಲುಗಿನಲ್ಲಿ ಇವರಿಗೆ ಬೇಡಿಕೆ ಹೆಚ್ಚಾಯಿತು. ತೆಲುಗಿನಲ್ಲಿ ಸ್ಟಾರ್ ನಟಿ ಎನ್ನಿಸಿಕೊಂಡಿದ್ದಾರೆ ನಭಾ. ಇವರು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇನ್ಫರ್ಮೇಶನ್ ಸೈನ್ಸ್ ಅಂಡ್ಲ್ ಟೆಕ್ನಾಲಜಿ ವಿಷಯದಲ್ಲಿ ಪದವಿ ಪಡೆದಿದ್ದಾರೆ. ನಮ್ ದುನಿಯಾ ನಮ್ ಸ್ಟೈಲ್ ಸಿನಿಮಾ ಮೂಲಕ ಚಂದನವನಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ಮಂಗಳೂರಿನ ಬೆಡಗಿ ಕಾವ್ಯ ಶೆಟ್ಟಿ, ಇದಾದ ಬಳಿಕ ಇಷ್ಟಕಾಮ್ಯ ಹಾಗೂ ಇನ್ನಿತರ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಾವ್ಯ ಶೆಟ್ಟಿ ಅವರು ಮಂಗಳೂರಿನಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.
ಇನ್ನು ಕನ್ನಡದ ಬೆಳ್ಳಿತೆರೆಯ ನಟಿಯರು ಮಾತ್ರವಲ್ಲದೆ, ಕಿರುತೆರೆ ನಟಿಯರು ಸಹ ಇಂಜಿನಿಯರಿಂಗ್ ಮಾಡಿ, ಧಾರಾವಾಹಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ ಶ್ರೀರಸ್ತು ಶುಭಮಸ್ತು ಮತ್ತು ರಾಧಾ ರಮಣ ಧಾರಾವಾಹಿಯ ರಾಧಾ ಮಿಸ್ ಪಾತ್ರದಿಂದ ಫೇಮಸ್ ಆಗಿರುವ ಶ್ವೇತಾ ಆರ್ ಪ್ರಸಾದ್ ಅವರು ಬೆಂಗಳೂರಿನ ಆರ್.ವಿ.ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಆರ್ಕಿಟೆಕ್ಟ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಿನ್ನರಿ ಧಾರಾವಾಹಿ ನಟಿ ಭೂಮಿ ಶೆಟ್ಟಿ ಅವರು ಬೆಂಗಳೂರಿನ ಎ.ಎಂ.ಸಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದಾರೆ.
ಸೀತಾ ವಲ್ಲಭ ಸೀರಿಯಲ್ ಮೈಥಿಲೀ ಪಾತ್ರದ ಖ್ಯಾತಿಯ ನಟಿ ಸುಪ್ರೀತಾ ಸತ್ಯನಾರಾಯಣ ಅವರು ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ವಿಲ್ಲನ್ ಪಾತ್ರದಲ್ಲಿ ನಟಿಸುತ್ತಿರುವ ಶರಣ್ಯ ಶೆಟ್ಟಿ ಅವರು ಈಗ ಇಂಜಿನಿಯರಿಂಗ್ ಓದುತ್ತಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುವ ಮನಸಾರೆ ಧಾರಾವಾಹಿ ಖ್ಯಾತಿಯ ನಟಿ ಪ್ರಿಯಾಂಕ ಚಿಂಚೋಳಿ, ಎಂ.ಟೆಕ್ ಓದಿದ್ದಾರೆ. ಓದಿನ ಜೊತೆಗೆ ನಟನೆಯನ್ನು ಬ್ಯಾಲೆನ್ಸ್ ಮಾಡಿ ಅಥವಾ ಓದಿದ್ದು ಬೇರೆ ಇದ್ದರು ನಟನೆಯ ಕ್ಷೇತ್ರಕ್ಕೆ ಬಂದಿರುವ ನಟಿಯರು ಇವರು.
Comments are closed.