ಕಿಂಗ್ ಕೋಹ್ಲಿಗೆ ಅವಮಾನ ಮಾಡಿದ ಐಸ್ ಲ್ಯಾಂಡ್ ಕ್ರಿಕೆಟ್, ಅಭಿಮಾನಿಗಳು ಮಾಡಿದ್ದೇನು ಗೊತ್ತೇ??
ಕಿಂಗ್ ಕೋಹ್ಲಿ ಅವರ ಕ್ರಿಕೆಟ್ ಆಟದ ವೈಖರಿ ಬಗ್ಗೆ ವಿಶ್ವಕ್ಕೆ ಗೊತ್ತಿದೆ. ವಿರಾಟ್ ಕೋಹ್ಲಿ ಅವರು ರನ್ ಮಷಿನ್ ಎಂದೇ ಖ್ಯಾತಿ ಪಡೆದುಕೊಂಡಿರುವವರು. ಭಾರತದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ಸೆಲೆಬ್ರಿಟಿ ಸಹ ಕೋಹ್ಲಿ ಅವರೆ. ಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದಾಗ, ಕೋಹ್ಲಿ ಅವರ ನೇತೃತ್ವದಲ್ಲಿ ಅನೇಕ ಪಂದ್ಯಗಳನ್ನು ಗೆದ್ದಿದೆ ಭಾರತ ತಂಡ. ಕೋಹ್ಲಿ ಅವರ ಬ್ಯಾಟಿಂಗ್ ಸ್ಟೈಲ್ ಗೆ ಫಿದಾ ಆಗದ ಕ್ರಿಕೆಟ್ ಪ್ಲೇಯರ್ ಅಥವಾ ಕ್ರಿಕೆಟ್ ಅಭಿಮಾನಿ ಇರಲು ಸಾಧ್ಯವಿಲ್ಲ.
ಹಲವು ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಎಲ್ಲರೂ ಸಹ ವಿರಾಟ್ ಕೋಹ್ಲಿ ಅವರ ಅಭಿಮಾನಿಗಳಾಗಿದ್ದಾರೆ. ಇಂತಹ ವಿರಾಟ್ ಕೋಹ್ಲಿ ಅವರಿಗೆ ಈಗ ಒಂದು ವಿಚಾರದಲ್ಲಿ ಒಂದು ಅವಮಾನವಾಗಿದ್ದು, ಇವರ ಅಭಿಮಾನಿಗಳು ಇದರಿಂದಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಐಸ್ ಲ್ಯಾಂಡ್ ಭಾರತ ದೇಶದ ಆಲ್ ಟೈಮ್ ಟೆಸ್ಟ್ ಪ್ಲೇಯಿಂಗ್ 11 ತಂಡವನ್ನು ಪ್ರಕಟಿಸಿದೆ. ರಾಹುಲ್ ದ್ರಾವಿಡ್ ಅವರು ಈ ತಂಡದ ನಾಯಕರಾಗಿದ್ದಾರೆ. 11 ಲೆಜೆಂಡರಿ ಕ್ರಿಕೆಟಿಗರ ತಂಡದಲ್ಲಿ, ಸುನೀಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ ಹಾಗೂ ಇನ್ನಿತರ ಆಟಗಾರರ ಹೆಸರಿದೆ.
ಆದರೆ ವಿರಾಟ್ ಕೋಹ್ಲಿ ಅವರ ಹೆಸರನ್ನುಬ್12th ಮ್ಯಾನ್ ಎಂದು ಘೋಷಿಸಲಾಗಿದೆ. ಕಿಂಗ್ ಕೋಹ್ಲಿ ಅವರನ್ನು ಈ ರೀತಿ 12th man ಎಂದು ಪರಿಗಣಿಸಿರುವುದು ಅವರಿಗೆ ಮಾಡಿರುವ ಅವಮಾನ ಎಂದು ಕೋಹ್ಲಿ ಅವರ ಅಭಿಮಾನಿಗಳು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಹ್ಲಿ ಅವರು ಅಪಾರ ಸಾಧನೆ ಮಾಡಿದ್ದರೆ, ಈ ರೀತಿ ಅವರನ್ನು ಕರೆಯುವುದು ಸರಿ ಅಲ್ಲ ಎಂದು, ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಸಿಟ್ಟನ್ನು ಹೊರಹಾಕುತ್ತಿದ್ದಾರೆ.
Comments are closed.