ಕಿರುತೆರೆಯಲ್ಲೂ ಮುದ್ದಾದ ನಟನೆಯ ಮೂಲಕ ಮನಗೆದ್ದಿರುವ ನನ್ನರಸಿ ರಾಧೆಯ ಇಂಚರ ನಟನೆಗೂ ಮುನ್ನ ಮಾಡುತ್ತಿದ್ದ ಕೆಲಸ ಏನು ಗೊತ್ತೇ??
ನನ್ನರಸಿ ರಾಧೆ ಧಾರಾವಾಹಿ ಕಲರ್ಸ್ ಕನ್ನಡ ಧಾರಾವಾಹಿಯ ಪ್ರಮುಖ ಧಾರವಾಹಿಗಳಲ್ಲಿ ಒಂದು. ಈ ಧಾರಾವಾಹಿಯ ನಾಯಕಿ ಇಂಚರ ಅವರ ಕ್ಯೂಟ್ನೆಸ್ ಯಾರಿಗೆ ತಾನೇ ಇಷ್ಟ ಆಗುವುದಿಲ್ಲ. ಇಂಚರ ಎಲ್ಲರ ಫೇವರೆಟ್, ಕರ್ನಾಟಕದ ಅನೇಕ ಹುಡುಗರ ಕ್ರಶ್ ಎಂದರೆ ತಪ್ಪಾಗುವುದಿಲ್ಲ. ತಮ್ಮ ಕ್ಯೂಟ್ ನಟನೆಯ ಮೂಲಕವೇ ಕಿರುತೆರೆ ವೀಕ್ಷಕರ ಫೇವರೆಟ್ ಆಗಿದ್ದಾರೆ ಇಂಚರ. ಪ್ರಸ್ತುತ ನನ್ನರಸಿ ರಾಧೆ ಧಾರಾವಾಹಿ ಒಳ್ಳೆಯ ಟ್ವಿಸ್ಟ್ ಗಳ ಜೊತೆಯಲ್ಲಿ ಸಾಗುತ್ತಿದೆ. ವೀಕ್ಷಕರು ತಪ್ಪದೇ ಈ ಧಾರಾವಾಹಿ ನೋಡುತ್ತಾರೆ. ಇಂಚರ ಅವರು ಒಬ್ಬ ಉತ್ತಮ ನಟಿ ಎಂದು ನಮಗೆ ಗೊತ್ತು, ಧಾರಾವಾಹಿಗೆ ಬರುವ ಮೊದಲು ಇವರು ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ?
ಇಂಚರ ಪಾತ್ರದಲ್ಲಿ ನಟಿಸುತ್ತಿರುವವರ ಹೆಸರು ಕೌಸ್ತುಭ ಮಣಿ, ಇಂದು ಇವರ ನಿಜವಾದ ಹೆಸರಿಗಿಂತ ಇಂಚರಾ ಎಂದೇ ಫೇಮಸ್ ಆಗಿದ್ದಾರೆ. ಕಿರುತೆರೆಯಲ್ಲಿ ದೊಡ್ಡ ಫ್ಯಾನ್ ಬೇಸ್ ಸಹ ಹೊಂದಿದ್ದಾರೆ, ಸೋಷಿಯಲ್ ಮೀಡಿಯಾದಲ್ಲಿ ಕೌಸ್ತುಭ ಅವರಿಗೆ ಲಕ್ಷಗಟ್ಟಲೆ ಫ್ಯಾನ್ ಬೇಸ್ ಇದೆ. ಹಲವು ಫೋಟೋಶೂಟ್ ಗಳಲ್ಲಿ ಸಹ ಪಾಲ್ಗೊಳ್ಳುವ ಕೌಸ್ತುಭ ಅವುಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುತ್ತಾರೆ. ನಟಿ ಕೌಸ್ತುಭ ಮೂಲತಃ ಬೆಂಗಳೂರಿನ ಬಸವನಗುಡಿಯವರು. ಇವರು ಹುಟ್ಟಿದ್ದು, ಬೆಳೆದದ್ದು, ಓದಿದ್ದು ಎಲ್ಲವೂ ಬೆಂಗಳೂರಿನಲ್ಲಿಯೇ.
ಕೌಸ್ತುಭ ಅವರು ಓದಿ ಪದವಿ ಮುಗಿಸಿದ ನಂತರ ನಟನೆ ಶುರುಮಾಡುವ ಮೊದಲು, ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷಗಳ ಬ್ಯಾಂಕ್ ಕೆಲಸ ಮಾಡುತ್ತಿದ್ದರು ಇಂಚರಾ. ಪದವೀಧರೆ ಆಗಿದ್ದ ಕಾರಣ ಬ್ಯಾಂಕ್ ಕೆಲಸ ಸಿಕ್ಕಿತ್ತು. ಸ್ಯಾಂಡಲ್ ವುಡ್ ನಟಿ ಮಾನ್ವಿತಾ ಅವರ ಪರಿಚಯದ ಮೂಲಕ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಇವರಿಗೆ ಸಿಕ್ಕಿತು. ನಟನೆಯ ಬ್ಯಾಗ್ರೌಂಡ್ ಇಲ್ಲದೆ, ನಟನಾ ತರಬೇತಿ ಪಡೆಯದೆ, ಇಂದು ಮುಗ್ಧವಾದ ನಟನೆಯ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ ಕೌಸ್ತುಭ.
Comments are closed.