ತೆಲುಗಿನ ನಿರ್ಮಾಪಕ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಕ್ಕೆ ಯಶ್ ರವರು ವೇದಿಕೆ ಮೇಲೆಯೇ ಹೇಳಿದ್ದೇನು ಗೊತ್ತೇ?
ಕೆಜಿಎಫ್ ಚಾಪ್ಟರ್2 ಸಿನಿಮಾ ನಿನ್ನೆ ವಿಶ್ವಾದ್ಯಂತ ತೆರೆಕಂಡು, ದೊಡ್ಡ ಮಟ್ಟದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಅಭಿಮಾನಿಗಳು ರಾಕಿ ಭಾಯ್ ನೋಡಿ ಫಿದಾ ಆಗಿದ್ದು, ಸಿನಿಮಾ ನೋಡಿ ವಾವ್ ಎಂದಿದ್ದಾರೆ. ನಟ ಯಶ್ ಅವರ ಅಭಿನಯ, ಸಂಜಯ್ ದತ್, ರವಿನಾ ಟಂಡನ್, ಇವರೆಲ್ಲರ ಅಭಿನಯವನ್ನು ವೀಕ್ಷಕರು ಇಷ್ಟಪಟ್ಟಿದ್ದು, ಮೊದಲ ದಿನ ಸಿನಿಮಾ ನೋಡಲು ಮುಗಿಬಿದ್ದು ಥಿಯೇಟರ್ ಕಡೆಗೆ ಬಂದಿದ್ದರು. ಈಗಲೂ ಸಹ ಕೆಜಿಎಫ್2 ಸಿನಿಮಾ ನೋಡಲು ಬರುತ್ತಿರುವ ಜನರ ದಂಡು ಕಡಿಮೆ ಆಗಿಲ್ಲ. ಕೆಜಿಎಫ್2 ಮುಂದೆ ಇನ್ಯಾವ ಸಿನಿಮಾ ಕೂಡ ನಿಲ್ಲುವುದಿಲ್ಲ ಎನ್ನುತ್ತಿದೆ ಚಿತ್ರತಂಡ. ಇನ್ನು ತೆಲುಗು ನಿರ್ಮಾಪಕರೊಬ್ಬರು ಕೆಜಿಎಫ್2 ಬಗ್ಗೆ ಮಾತನಾಡಿದಾಗ, ವೇದಿಕೆ ಮೇಲೆಯೇ ಯಶ್ ಅವರು ಆ ನಿರ್ಮಾಪಕರಿಗೆ ಕೊಟ್ಟ ಕೌಂಟರ್ ಹೇಗಿತ್ತು ಗೊತ್ತಾ?
ತೆಲುಗು ನಿರ್ಮಾಪಕ ದಿಲ್ ರಾಜು ಅವರು ಕೆಜಿಎಫ್2 ಸಿನಿಮಾ ಬಗ್ಗೆ ಮಾತನಾಡಿ.. “ಮೊದಲು ಇಂಡಿಯನ್ ಸಿನಿಮಾ ಬಗ್ಗೆ ಮಾತನಾಡಬೇಕು..ಇಂಡಿಯನ್ ಸಿನಿಮಾ ಅಂದ್ರೆ 100 ಕೋಟಿ, 200 ಕೋಟಿ, 300 ಕೋಟಿ ಕಲೆಕ್ಷನ್ ಮಾಡುವುದು ಬಾಲಿವುಡ್ ನಲ್ಲಿ ಎಂದು ಕೇಳುತ್ತಿದ್ದೆವು. ಇನ್ನು ನಮ್ಮ ತೆಲುಗು ಇಂಡಸ್ಟ್ರಿಯಲ್ಲಿ ಚಿರಂಜೀವಿ ಅವರ ಸಿನಿಮಾ ಇಷ್ಟು ಕಲೆಕ್ಟ್ ಮಾಡಿದೆ, ಅಷ್ಟು ಕಲೆಕ್ಟ್ ಮಾಡಿದೆ ಅಂತ ಕೇಳಿದ್ವಿ..ತಮಿಳು ಇಂಡಸ್ಟ್ರಿಯಲ್ಲಿ ರಜನಿಕಾಂತ್ ಸರ್, ಸ್ಟಾರ್ ಹೀರೋಗಳ ಸಿನಿಮಾ ಕಲೆಕ್ಷನ್ ಬಗ್ಗೆ ಕೇಳ್ತಾ ಇದ್ವಿ. ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಕಾನ್ಸೆಪ್ಟ್ ಇರುವ ಸಿನಿಮಾ ತೆಗೀತಾರೆ ಅಂತ ಕೇಳ್ತಾ ಇದ್ವಿ. ಆದರೆ ಕನ್ನಡ ಇಂಡಸ್ಟ್ರಿ ಅಂದ್ರೆ, ಅವರು ಚಿಕ್ಕ ಸಿನಿಮಾ ಮಾಡ್ತಾರೆ, ಅವರ ಬಜೆಟ್ 5 ಕೋಟಿ ಇರುತ್ತೆ ಅಷ್ಟೇ, ಅವರ ಮಾರ್ಕೆಟ್ ಕಮ್ಮಿ ಅಂತ ಕೇಳಿಪಡ್ತಾ ಇದ್ವಿ. ಆ ಸಮಯದಲ್ಲಿ ಪ್ರಶಾಂತ್ ನೀಲ್ ಎನ್ನುವ ಈ ವ್ಯಕ್ತಿ ಉಗ್ರಂ ಸಿನಿಮಾ ಮೂಲಕ ಬಂದ್ರು.. ಆ ಸಿನಿಮಾ ನೋಡಿ ತುಂಬಾ ಚೆನ್ನಾಗಿದೆ ಅಂತ ಅನ್ಕೊಂಡ್ವಿ. ನಂತರ ಒಂದು ಒಳ್ಳೆಯ ಟೀಮ್ ಜೊತೆ ಕೆಜಿಎಫ್ ಸಿನಿಮಾ ಮಾಡಿದ್ದಾರೆ ಅಂತ ಗೊತ್ತಾಯ್ತು. ಆಗಲು ಕೂಡ, ಏನೋ ಸಿನಿಮಾ ಮಾಡಿದ್ದಾರೆ ಅಂತ ಅನ್ಕೊಂಡ್ವಿ.
ಆದರೆ ಸಿನಿಮಾ ಬಿಡುಗಡೆ ಆದಮೇಲೆ, ಸಿನಿಮಾ ನೋಡಿದ ಮೇಲೆ ಇಡೀ ಇಂಡಿಯನ್ ಸಿನಿಮಾ, ವರ್ಲ್ಡ್ ಸಿನಿಮಾ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವ ಹಾಗೆ ಮಾಡಿತು.. ಹ್ಯಾಟ್ಸಾಫ್ ಟು ದಿ ಟೀಮ್..” ಎಂದು ಹೇಳುತ್ತಾರೆ. ಅದಕ್ಕೆ ಉತ್ತರ ಕೊಡುವ ಯಶ್ ಅವರು, “ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಒಳ್ಳೆಯ ಸಿನಿಮಾಗಳು ಬಂದಿವೆ, 50 ಕೋಟಿ ಕಲೆಕ್ಷನ್ ಮಾಡಿದೆ, ಅದರ ಬಗ್ಗೆ ಯಾಕೆ ಯಾರಿಗೂ ಗೊತ್ತಿಲ್ಲ ಅಂತ ನನಗೂ ಗೊತ್ತಾಗ್ತಾ ಇಲ್ಲ. ಈ ಸಿನಿಮಾಗಾಗಿ ಜೊತೆಯಾದ ನಮ್ಮ ಟೀಮ್, ಅದರಲ್ಲು ಪ್ರಶಾಂತ್ ನೀಲ್ ಅವರು, ಇದು ಅವರ ಕನಸು, ಅವರ ಯೋಚನೆ, ಅವರ ಪ್ರಪಂಚ ಅವರ ಎಲ್ಲವೂ, ಅವರಿಂದಲೇ ಕೆಜಿಎಫ್ ಆಯ್ತು. ಪ್ರಶಾಂತ್ ಅವರು ನಮ್ಮ ಚಿತ್ರರಂಗಕ್ಕೆ ಆಶೀರ್ವಾದದ ಹಾಗೆ ಸಿಕ್ಕಿದ್ದಾರೆ. ಈಗ ನಿಮ್ಮೆಲ್ಲರಿಗೂ ಅವರ ಬಗ್ಗೆ ಗೊತ್ತು. ನಾನು ಒಂದು ಮಾತು ಹೇಳ್ತೀನಿ, ಅವರಿಂದ ಚಿತ್ರರಂಗಕ್ಕೆ ನಮ್ಮ ಚಿತ್ರರಂಗ ತುಂಬಾ ಸಂತೋಷವಾಗಿದೆ. ಅವರು ಮಾಡಿರುವಂಥ ಕೆಲಸ, ಅವರ ಪ್ರಪಂಚ ಇದ್ದರೆ ಇಂದು ನಾವು ಇಲ್ಲಿ ಇರುತ್ತಾ ಇರಲಿಲ್ಲ. ಇಂಥಹ ಒಂದು ಸಿನಿಮಾ ತೆಗೆದಿದ್ದಕ್ಕೆ ಥ್ಯಾಂಕ್ ಯೂ ಪ್ರಶಾಂತ್..” ಎನ್ನುತ್ತಾರೆ ನಟ ಯಶ್..
Comments are closed.