Neer Dose Karnataka
Take a fresh look at your lifestyle.

ನಿಮ್ಮ ಜೇಬಿನಿಂದ ಬೇರೆ ತೆಗೆಯಲು ಹೋಗಿ, ದುಡ್ಡು ಕೆಳಕ್ಕೆ ಬಿದ್ದರೆ ಏನು ಅರ್ಥ ಗೊತ್ತೇ?? ಬೇಕೆಂದು ಬೀಳಿಸಿದ ನಡೆಯುವುದಿಲ್ಲ.

ಹಣ..ಇಡೀ ಪ್ರಪಂಚ ನಿಂತಿರುವುದೇ ಹಣದ ಸಲುವಾಗಿ. ನಾವು ನೀವು ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುವುದು ಇದೇ ಹಣದ ಸಲುವಾಗಿ, ಹಣ ಒಂದಿದ್ದರೆ ಪ್ರಪಂಚದಲ್ಲಿರುವ ಯಾವ ವಸ್ತುವನ್ನು ಬೇಕಾದರೂ ಖರೀದಿ ಮಾಡಬಹುದು. ನಾವು ಪ್ರತಿದಿನ ಬಳಸುವ ಎಲ್ಲಾ ವಸ್ತುಗಳನ್ನು ಕೊಂಡುಕೊಳ್ಳಲು ಹಣ ಬೇಕೇ ಬೇಕು. ಜೀವನ ಸಾಗಿಸಲು ಮುಖ್ಯವಾಗಿ ಬೇಕಾಗಿರುವುದೇ ಹಣ. ನಾವು ಎಷ್ಟು ಹಣ ಸಂಪಾದನೆ ಮಾಡುತ್ತೇವೋ ಅಷ್ಟರ ಮಟ್ಟಿಗೆ ನಮ್ಮ ಜೀವನಶೈಲಿ ಚೆನ್ನಾಗಿರುತ್ತದೆ ಎಂದು ಆರ್ಥ.

ಈ ಹಣವನ್ನು ನಾವು ಬೇರೆ ವಸ್ತುಗಳಿಗಿಂತ ಹೆಚ್ಚು ಜೋಪಾನವಾಗಿ ನೋಡಿಕೊಳ್ಳುತ್ತೇವೆ. ಹಣ ಕಳೆದುಕೊಳ್ಳಲು ಅಥವಾ ಕೆಳಗೆ ಬೀಳಲು ನಾವು ಇಷ್ಟಪಡುವುದಿಲ್ಲ. ಆದರೆ ಕೆಲವೊಮ್ಮೆ ನಮಗೆ ಅರಿವಿಲ್ಲದ ಹಾಗೆ, ನಾವು ಬೇರೆ ಏನನ್ನೋ ತೆಗೆದುಕೊಳ್ಳಲು ಹೋದಾಗ, ನಮ್ಮ ಜೇಬಿನಿಂದ ಹಣ ಕೆಳಗೆ ಬಿದ್ದಿರುತ್ತದೆ. ಆ ರೀತಿ ನಡೆದಾಗ, ನಮ್ಮ ಜೊತೆ ಇರುವವರು, ನಾವು ಜಾಗರೂಕತೆಯಿಂದ ಇಲ್ಲ, ನಮಗೆ ಜವಾಬ್ದಾರಿ ಇಲ್ಲ ಎಂದು ಹೇಳಬಹುದು. ಆಗ ನಮಗೂ ಸಹ ಬೇಸರ ಆಗುತ್ತದೆ. ನಾವ್ಯಾರು ಕೂಡ ಹಣವನ್ನು ಕೆಳಗೆ ಬೀಳಿಸಲು ಇಷ್ಟಪಡುವುದಿಲ್ಲ. ಆದರೆ ಈ ರೀತಿ ಆಗುವುದರ ಬಗ್ಗೆ ನಿಜವಾದ ಸಂಗತಿ ಬೇರೆಯೇ ಇದೆ.

ಕೆಲವು ಮೂಲಗಳ ಪ್ರಕಾರ, ಆ ರೀತಿ ಬೇರೆ ಏನನ್ನೋ ತೆಗೆದುಕೊಳ್ಳಲು ಹೋದಾಗ, ಜೇಬಿನಿಂದ ದುಡ್ಡು ಹೊರಬಿದ್ದರೆ ಅದು ಶುಭ ಸಂಕೇತ ಆಗಿದೆ. ಒಂದು ವೇಳೆ ಆ ರೀತಿ ಆದರೆ, ಅದಕ್ಕಿಂತ ಹೆಚ್ಚಿನ ಹಣ ನಮಗೆ ಸಿಗುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಆದರೆ ಬೇರೆ ಬೇರೆ ಮೂಲಗಳಿಂದ ಕೂಡ ಹಣ ಬರುತ್ತದೆ ಎಂದು ಹೇಳಲಾಗುತ್ತದೆ. ನೀವೆ ಬೇಕೆಂದು ನಿಮ್ಮ ಜೇಬಿನಿಂದ ಹಣವನ್ನು ಬೀಳಿಸಿಕೊಂಡರೆ ಅದು ಶುಭ ಸಂಕೇತವಲ್ಲ. ನಿಮಗರಿವಿಲ್ಲದೆ ಹಣ ಬಿದ್ದರೆ ಶುಭ ಸಂಕೇತ ಎನ್ನಲಾಗಿದೆ. ಹಾಗಾಗಿ ಇನ್ನುಮುಂದೆ ನಿಮ್ಮ ಜೇಬಿನಿಂದ ಹಣ ಹೊರಗೆ ನೀವು ಬೇಸರಪಟ್ಟುಕೊಳ್ಳಬೇಕಿಲ್ಲ

Comments are closed.