Neer Dose Karnataka
Take a fresh look at your lifestyle.

ಬದುಕಿದರೆ ಇವರ ಹಾಗೆ ಬದುಕಬೇಕು ಎನ್ನುವಂತೆ ಇರುವ ಇಸ್ರೇಲ್ ಹೇಗೆಲ್ಲ ಇದೆ ಗೊತ್ತೇ?? ಸಣ್ಣ ರಾಷ್ಟ್ರವಾದರೂ ಹೇಗೆಲ್ಲ ವಿಶ್ವದ ಮುಂದೆ ಎದ್ದು ನಿಂತಿದೆ ಗೊತ್ತೇ??

38

ಪ್ರಪಂಚದಲ್ಲಿ ಬದುಕಿದರೆ ಈ ರೀತಿ ಬದುಕಬೇಕು ಎಂದು ಜನರಿಗೆ ಅನ್ನಿಸುವ ಹಾಗೆ ಮಾಡಿದ ರಾಷ್ಟ್ರ ಇಸ್ರೇಲ್. ಇದು ಮಧ್ಯ ಏಷಿಯಾದಲ್ಲಿರುವ ಒಂದು ಪುಟ್ಟ ರಾಷ್ಟ್ರ. ಇಸ್ರೇಲ್ ದೇಶವು ಸಿರಿಯಾ, ಜೋರ್ಡನ್ ಮತ್ತು ಈಜಿಪ್ಟ್ ದೇಶಗಳ ಜೊತೆ ಗಡಿ ಹಂಚಿಕೊಂಡಿದೆ. ಇಸ್ರೇಲ್ ದೇಶದ ರಾಜಧಾನಿ ಜೆರುಸಲೇಂ. ಈ ದೇಶದಲ್ಲಿ ಹೇಬ್ರು ಮತ್ತು ಆರಾಬಿಕ್ ಭಾಷೆಯನ್ನು ಅಧಿಕೃತವಾಗಿ ಬಳಸುತ್ತಾರೆ. ಈ ದೇಶದಲ್ಲಿ ಶೇ.75ರಷ್ಟು ಯಹೂದಿಗಳಿದ್ದು, ಇವರು ಜುದಾಯಿಸಮ್ ಅನುಸರಿಸುತ್ತಾರೆ, ಜೊತೆಗೆ ಅರೇಬಿಯನ್ ಸಹ ಇದ್ದಾರೆ.

ಇಸ್ರೇಲ್ ದೇಶವು ಕ್ರಿಸ್ತ ಹುಟ್ಟುವ ಮೊದಲೇ ಚರಿತ್ರೆಯಲ್ಲಿ ಹೆಸರು ಪಡೆದುಕೊಂಡಿತ್ತು. ಕಪಿಮಾನವನ ಸಮಯದ ಹಳೆಯ ಉಳಿಕೆಗಳು ಸಹ ಇಲ್ಲಿ ಸಿಕ್ಕಿ, ಬಹಳ ಹಿಂದಿನಿಂದಲೂ ಮಾನವರು ಇಲ್ಲಿ ವಾಸ ಮಾಡುತ್ತಿದ್ದರು ಎನ್ನುವುದನ್ನು ಸಾಬೀತು ಮಾಡಿದೆ. ಮಧ್ಯ ಏಷಿಯಾದಲ್ಲಿರುವ ಚಿಕ್ಕ ರಾಷ್ಟ್ರ ಇದು, ಶೇ.1ರಷ್ಟು ಜಾಗವನ್ನು ಸಹ ಇದರ ವಿಸ್ತೀರ್ಣ ಇಲ್ಲ. ಈ ರಾಷ್ಟ್ರಕ್ಕೆ ಸುಮಾರು 34 ರಾಷ್ಟ್ರಗಳು ಶತ್ರುಗಳಾಗಿವೆ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 31ರಾಷ್ಟ್ರಗಳು ಇಸ್ರೇಲ್ ದೇಶದ ವಿರೋಧಿಗಳಾಗಿದ್ದಾರೆ.

ಸೌದಿಯ ನಾಲ್ಕೈದು ರಾಷ್ತ್ರಗಳು ಇಸ್ರೇಲ್ ನ ವೈರಿಗಳಾಗಿದ್ದಾರೆ, ಆಫ್ರಿಕಾ ದೇಶದ 19 ರಾಷ್ಟ್ರಗಳು ಸಹ ಇಸ್ರೇಲ್ ಜೊತೆ ವೈರತ್ವ ಹೊಂದಿದೆ. ಒಂದು ದೇಶವನ್ನು ಇಷ್ಟೆಲ್ಲಾ ದೇಶಗಳು ವೈರಿಯಾಗಿ ನೋಡುತ್ತಿದೆ ಅಂದರೆ, ಆ ರಾಷ್ಟ್ರ ದೊಡ್ಡದಾಗಿ ಸಾಧಿಸಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಈ ದೇಶದ ಏಳಿಗೆ ಬೇರೆ ದೇಶದವರಿಗೆ ಅಸೂಯೆ ಮೂಡಿಸಿರುವ ಕಾರಣ, ಇಸ್ರೇಲ್ ದೇಶದ ವೈರಿಗಳಾಗಿದ್ದಾರೆ. ಇಸ್ರೇಲ್ ದೇಶ ಬೇರೆ ಮುಸ್ಲಿಂ ದೇಶಗಳ ಹಾಗಲ್ಲ. 1948ರಲ್ಲಿ ಈ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. 1950ರಿಂದಲೇ ಅಭಿವೃದ್ಧಿ ಕಡೆಗೆ ಸಾಗಿತು ಈ ದೇಶ. ಸಧ್ಯಕ್ಕೆ ಈ ದೇಶದ ಜನಸಂಖ್ಯೆ 98 ಲಕ್ಷ, ಮುಂದಿನ ಸೆನ್ಸಸ್ ಸಮಯ ಬರುವಷ್ಟರಲ್ಲಿ 1 ಕೋಟಿ ದಾಟಲಿದೆ.

ಇನ್ನು ಇಡೀ ವಿಶ್ವದಲ್ಲಿ ಶೇ.24ರಷ್ಟು ವಿದ್ಯಾವಂತರು ಇರುವುದು ಇಸ್ರೇಲ್ ದೇಶದಲ್ಲಿ. ಪ್ರತಿವರ್ಷ ಸಾಕಷ್ಟು ಪದವೀಧರರು ಈ ದೇಶದಿಂದ ಹೊರಬರುತ್ತಾರೆ. ಅಮೆರಿಕಾ ಮತ್ತು ಹಾಲೆಂಡ್ ನಂತರ ಇಸ್ರೇಲ್ ದೇಶ ಕೈಗಾರಿಕಾ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿದೆ. ಇಸ್ರೇಲ್ ದೇಶ ಉದ್ಯಮದಲ್ಲಿ ಮುಂದಿದೆ, ಇಲ್ಲಿನ ಜನರು ಹೆಚ್ಚಾಗಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದು, 55 ವರ್ಷ ಮೇಲ್ಪಟ್ಟವರು ಸಹ ಉದ್ಯಮ ಕ್ಷೇತ್ರದಲ್ಲಿದ್ದಾರೆ. ಜೊತೆಗೆ ಹಸಿರು ಪ್ರದೇಶದಲ್ಲಿ ಮುಂದಿದೆ ಇಸ್ರೇಲ್. 21ನೇ ಶತಮಾನಕ್ಕೆ ಕಾಲಿಟ್ಟ ಹಲವು ರಾಷ್ಟ್ರಗಳು ಹಸಿರು ಮಟ್ಟವನ್ನು ಕಳೆದುಕೊಂಡಿದೆ, ಆದರೆ ಹಸಿರಿನ ಜೊತೆ 21ನೇ ಶತಮಾನಕ್ಕೆ ಕಾಲಿಟ್ಟ ಏಕೈಕ ರಾಷ್ಟ್ರ ಇಸ್ರೇಲ್.

ಇಸ್ರೇಲ್ ನಲ್ಲಿ 3100 ಹೈ ಟೆಕ್ ಕಂಪನಿಗಳು ಇದ್ದು, ಹೈ ಟೆಕ್ ಕಂಪನಿಗಳಲ್ಲಿ ಈ ದೇಶ ಮೊದಲ ಸ್ಥಾನದಲ್ಲಿದೆ. ಆಧುನಿಕತೆ ಮತ್ತು ತಂತ್ರಜ್ಞಾನದಲ್ಲಿ ಇಸ್ರೇಲ್ ಇತರ ರಾಷ್ಟ್ರಗಳಷ್ಟೇ ಪ್ರಬಲವಾಗಿದೆ. 1997ರಲ್ಲಿ ಲಾಂಚ್ ಆಗಿದ್ದ ಮೊದಲ ಕೀಪ್ಯಾಡ್ ಮೊಬೈಲ್ ಮೊಟೊರೋಲ ಹ್ಯಾಂಡ್ಸೆಟ್ ಇಸ್ರೇಲ್ ಸಂಸ್ಥೆಗೆ ಸೇರಿದ್ದು. ಇಂದು ಮೋಟೋರೋಲ ಸಂಸ್ಥೆಯಿಂದ ಅನೇಕ ಸ್ಮಾರ್ಟ್ ಫೋನ್ ಗಳು ಬಂದಿವೆ.

ದೇಶೀಯ ವಸ್ತುಗಳನ್ನು ತಯಾರಿಸಿ, ಅವುಗಳನ್ನೇ ಹೆಚ್ಚಾಗಿ ಬಳಸುತ್ತಾರೆ ಇಸ್ರೇಲ್ ಜನ. ಭಾರತ ಸೇರಿದಂತೆ ಬೇರೆ ದೇಶದವರು ಈ ಗುಣವನ್ನು ಇಸ್ರೇಲ್ ಇಂದ ಕಲಿಯಬೇಕು. ತಾಂತ್ರಿಕ ವಿಚಾರದಲ್ಲಿ ಮಾತ್ರವಲ್ಲದೆ, ಕೃಷಿಯ ವಿಭಾಗದಲ್ಲಿ ಸಹ ಇಸ್ರೇಲ್ ದೇಶ ಮೇಲುಗೈ ಸಾಧಿಸಿದೆ. ಇಸ್ರೇಲ್ ದೇಶವು ಮರಳು ಗಾಡಿನ ಹಾಗಿದ್ದ ಪ್ರದೇಶವನ್ನು ಅಚ್ಚ ಹಸಿರಾಗುವ ಹಾಗೆ ಮಾಡಿ, ಒಂದೇ ಫಲಿಸಿಗೆ ಎರಡು ವರ್ಷಕ್ಕೆ ಆಗುವಷ್ಟು ಬೆಲೆ ಬೆಳೆದು, ತಮ್ಮ ರಾಷ್ಟ್ರದ ಜೊತೆಗೆ, ಬೇರೆ ರಾಷ್ಟ್ರಕ್ಕೆ ರಫ್ತು ಮಾಡುತ್ತಾರೆ. ಹನಿ ನೀರಾವರಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು.

ಆದರೆ 1960ರಲ್ಕ್ ಇಸ್ರೇಲ್ ನ ನೀರಾವರಿ ಇಂಜಿನಿಯರ್ ಆಗಿದ್ದ ಸಿಂಚಾ ಎನ್ನುವ ತಜ್ಞರು, ಶುರು ಮಾಡಿದ ನೀರಾವರಿ ಟೆಕ್ನಿಕ್ ಗಳು ಮತ್ತು ಮೈಕ್ರೋ ನೀರಾವರಿ ಕಾನ್ಸೆಪ್ಟ್ ಅನ್ನು ಇಂದಿಗೂ ಅನೇಕ ದೇಶಗಳು ಬಳಸುತ್ತಿವೆ. ಈ ದೇಶದಲ್ಲಿ ಮಾವು ಮತ್ತು ಬೆರ್ರಿ ಹಣ್ಣುಗಳ ಉತ್ಪನ್ನ ಹೆಚ್ಚು. ಈ ಎರಡು ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದು, ಅವುಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಾರೆ. ಇಸ್ರೇಲ್ ದೇಶವು ಬಳಕೆಗೆ ಬರದೆ ಇರುವ ಅಂತರ್ಜಾದ ಹರಿವು ಮತ್ತು ಬೇರೆ ನೀರನ್ನು ತಮ್ಮ ಬೆಳೆಗೆ ಬಳಸಿಕೊಳ್ಳುತ್ತಾರೆ.

ಅಲ್ಪ ಪ್ರಮಾಣದ ನೀರಿನಿಂದ ಹೆಚ್ಚಿನ ಬೆಲೆ ಬೆಳೆದು, ಆಹಾರ ನಿಯಂತ್ರಣವನ್ನು ಮಾಡಿಕೊಳ್ಳುತ್ತೇ ಈ ದೇಶ. ಈ ದೇಶದ ಉಪಯೋಗಿಸುವ ಅಗ್ರಿಕಲ್ಚರ್ ತಂತ್ರಗಳನ್ನು ಹಲವು ದೇಶಗಳು ಬಳಸುತ್ತವೆ. ಛಲದಿಂದ ಮೇಲೆ ಬಂದ ದೇಶವಿದು. ಇಸ್ರೇಲ್ ದೇಶದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. .

Leave A Reply

Your email address will not be published.